ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಅವರ ನೇತೃತ್ವದಲ್ಲಿ ಕುಂಜಾಡಿ ಧರ್ಮ ನೇಮೋತ್ಸವ, ಚಪ್ಪರ ಮುಹೂರ್ತ ; ಮಾಣಿಲ ಶ್ರೀ, ಗಣ್ಯರು ಭಾಗಿ – ಕಹಳೆ ನ್ಯೂಸ್
ಸವಣೂರು : ಪಾಲ್ತಾಡಿ ಗ್ರಾಮದ ಕುಂಜಾಡಿಯಲ್ಲಿ ಎ.6 ರಿಂದ ಎ.9ರವರೆಗೆ ನಡೆಯಲಿರುವ ಧರ್ಮ ನೇಮೋತ್ಸವಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ, ದ.ಕ.ಸಂಸದ ನಳಿನ್ ಕುಮಾರ್ ಅವರ ನೇತೃತ್ವದಲ್ಲಿ ಭರದ ಸಿದ್ದತೆ ನಡೆಯುತ್ತಿದೆ. ಇದರ ಪೂರ್ವಭಾವಿಯಾಗಿ ಗುರುವಾರ ಚಪ್ಪರ ಮುಹೂರ್ತ ನಡೆಯಿತು.
ಶ್ರೀ ಧಾಮ ಮಾಣಿಲದ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಚಪ್ಪರ ಮುಹೂರ್ತ ವನ್ನು ನೆರವೇರಿಸಿ ಆಶೀರ್ವದಿಸಿ, ಧರ್ಮನೇಮದಿಂದ ಊರಿಗೆ ಶ್ರೇಯಸ್ಕರ, ಕುಂಜಾಡಿಯ ಮಣ್ಣಿಗೆ ಅಧಮ್ಯ ಶಕ್ತಿಯಿದೆ. ಈ ಮಣ್ಣಿನ ಮಗ ರಾಜಮುದ್ರೆಯಲ್ಲಿ ಓಡಾಡುವಂತಾಗಿದೆ. ತನ್ನ ವೈಯಕ್ತಿಕ ಜೀವನದ ಪೂರ್ವಾಶ್ರಮದಲ್ಲಿ ತನ್ನ ಏಳಿಗೆಗೆ ಕುಂಜಾಡಿಯ ಮಣ್ಣು ಪ್ರೇರಣೆ ಎಂದು ಕುಂಜಾಡಿಯಲ್ಲಿ ಕಳೆದ ಪೂರ್ವಾಶ್ರಮದ ದಿನಗಳನ್ನು ನೆನಪಿಸಿದರು.
ಈ ಸಂಧರ್ಭದಲ್ಲಿ ಸಚಿವರಾದ ಎಸ್.ಅಂಗಾರ, ಕುಂಜಾಡಿ ಮನೆತನದ ಹಿರಿಯರಾದ ಮಂಜುನಾಥ ರೈ, ಸಂಸದ, ಬಿಜೆಪಿ ರಾಜ್ಯಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್, ನಳಿನ್ ಅವರ ತಾಯಿ ಸುಶೀಲಾವತಿ ಎನ್ ಶೆಟ್ಟಿ, ನಾರಾಯಣ ರೈಯ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಮೋನಪ್ಪ ಭಂಡಾರಿ, ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಜಿ.ಪಂ.ಸದಸ್ಯರಾದ ಮಂಜುಳಾ ಮಾಧವ , ಪ್ರಮೀಳಾ ಜನಾರ್ಧನ್, ಸತೀಶ್ ಕುಂಪಲ, ಎಸ್.ಎನ್.ಮನ್ಮಥ, ಸುಳ್ಯ ಬಿಜೆಪಿ ಮಂಡಲ ಆಧ್ಯಕ್ಷ ಹರೀಶ್ ಕಂಜಿಪಿಲಿ, ಪುತ್ತೂರು ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ವಿಜಯಕುಮಾರ್ , ಸುಧೀರ್ ಶೆಟ್ಟಿ ಕಣ್ಣೂರು, ಗೋಪಾಲಕೃಷ್ಣ ಹೇರಳೆ, ಆರ್.ಸಿ.ನಾರಾಯಣ, ಜಗದೀಶ ಅಧಿಕಾರಿ, ಗಿರಿಧರ ಶೆಟ್ಟಿ , ಸದಾನಂದ ಶೆಟ್ಟಿ, ಬಿ.ಕೆ.ರಮೇಶ್ ಕಲ್ಲೂರಾಯ, ಪ್ರಕಾಶ್ ಕುಮಾರ್ ಆರಿಗ ಬಂಬಿಲಗುತ್ತು, ನರೇಶ್ ಶೆಣೈ, ಸಂತೋಷ್ ಕುಮಾರ್ ಬೋಳಿಯಾರ್, ಸಂತೋಷ್ ಕುಮಾರ್ ಶೆಟ್ಟಿ , ಹರೀಶ್ ಶೆಟ್ಟಿ , ಚಂದ್ರಹಾಸ್ ಶೆಟ್ಟಿ, ಸೀತಾರಾಮ್, ಶಿವಪ್ರಸಾದ್ ಹೆಗ್ಡೆ, ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷ ಮೋಹನರಾಂ ಸುಳ್ಳಿ, ಅಶೋಕ್ ಕುಮಾರ್, ವಿನೋದ್ ಆಳ್ವ, ರಾಕೇಶ್ ರೈ ಕೆಡೆಂಜಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ದೇವದಾಸ ಶೆಟ್ಟಿ ಬಂಟ್ವಾಳ, ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಗಿರಿಧರ ಶೆಟ್ಟಿ ಸೇರಿದಂತೆ ಕುಂಜಾಡಿ ತರವಾಡಿನ ಪ್ರಮುಖರು , ವಿವಿಧ ಸಮಿತಿಗಳ ಸಂಚಾಲಕರು ಮತ್ತಿತರರು ಭಾಗವಹಿಸಿದ್ದರು.