Tuesday, January 21, 2025
ಪುತ್ತೂರು

ಫಿಲೋಮಿನಾ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಪುತ್ತೂರು ವಲಯದ ಕ್ರಿಕೆಟ್ ಪಂದ್ಯಾಟ ಉದ್ಘಾಟನೆ, ‘ಕ್ರಿಕೆಟ್ ಒಂದು ಅಚ್ಚು ಮೆಚ್ಚಿನ ಕ್ರೀಡೆ’ ; ದೀಪಕ್ ಮಿನೇಜಸ್-ಕಹಳೆ ನ್ಯೂಸ್

ಪುತ್ತೂರು : ಕ್ರಿಕೆಟ್ ಒಂದು ಬಹು ಜನರ ಅಚ್ಚು ಮೆಚ್ಚಿನ ಕ್ರೀಡೆ. ಕ್ರೀಡಾಳುಗಳು ಶಿಸ್ತು, ತಾಳ್ಮೆ, ಏಕಾಗ್ರತೆ, ಶಾರೀರಿಕ ಸಾಮಥ್ರ್ಯ ಮೊದಲಾದ ಧನಾತ್ಮಕ ಆಂಶಗಳನ್ನು ಮೈಗೂಡಿಸಿಕೊಂಡಾಗ ಅಪ್ರತಿಮ ಕ್ರೀಡಾ ಸಾಧನೆಯನ್ನು ಮಾಡಲು ಸಾಧ್ಯ ಎಂದು ಪುತ್ತೂರಿನ ಸೋಜಾ ಮೆಟಲ್ ಮಾರ್ಟ್ ಇದರ ಮಾಲಿಕ ದೀಪಕ್ ಮಿನೇಜಸ್ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ ಮತ್ತು ಸಂತ ಫಿಲೋಮಿನಾ ಕಾಲೇಜಿನ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಮಂಗಳೂರು ವಿವಿಯ ವಲಯ ಮಟ್ಟದ ಅಂತರ್ ಕಾಲೇಜು ಪುರುಷರ ಕ್ರಿಕೆಟ್ ಪಂದ್ಯಾಟವನ್ನು ಫಿಲೋಮಿನಾ ಕ್ರೀಡಾಂಗಣದಲ್ಲಿ ಉದ್ಘಾಟಿಸಿ, ಮಾತನಾಡಿದರು. ಈ ಕ್ರೀಡಾಂಗಣವು ಐತಿಹಾಸಿಕ ಮನ್ನಣೆಯನ್ನು ಹೊಂದಿದೆ. ಇಲ್ಲಿ ಬಹಳಷ್ಟು ಮಂದಿ ರಾಷ್ಟ್ರ ಮತ್ತು ಅಂತರ್ ರಾಷ್ಟ್ರೀಯ ಮಟ್ಟದ ಕ್ರೀಡಾ ಪಟುಗಳು ರೂಪುಗೊಂಡಿದ್ದಾರೆ. ಕೀಡಾ ಪಟುಗಳು ಬದ್ಧತೆ ಮತ್ತು ಸತತ ಪರಿಶ್ರಮ ಪಡುವ ಮೂಲಕ ಈ ಸಂಸ್ಥೆಯ ಕೀರ್ತಿ ಪತಾಕೆ ಇನ್ನಷ್ಟು ಉತ್ತುಂಗಕ್ಕೆ ಏರುವಂತಾಗಲಿ ಎಂದು ಶುಭ ಹಾರೈಸಿದರು. ಸಭಾಧ್ಯಕ್ಷತೆ ವಹಿಸಿದ ಸಂತ ಫಿಲೋಮಿನಾ ಕಾಲೇಜಿನ ಸಂಚಾಲಕ ವಂ. ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ, ಕ್ರೀಡೆಯನ್ನು ಪ್ರೀತಿಯಿಂದ ಆಡಬೇಕು. ಸಮಾಜದ ಸಾಮರಸ್ಯಕ್ಕೆ ಕ್ರೀಡೆ ಮುಖ್ಯವಾಗಿರುತ್ತದೆ. ಅಂತರ್ ರಾಷ್ಟ್ರೀಯ ಜನ ಮನ್ನಣೆ ಗಳಿಸಿರುವ ಕ್ರಿಕೆಟ್ ಚಿಕ್ಕ ಮಕ್ಕಳಿಂದ ಆರಂಭಿಸಿ, ವಯೋವೃದ್ಧರ ವರೆಗೂ ಅಚ್ಚು ಮೆಚ್ಚಿನ ಕ್ರೀಡೆ. ದೈಹಿಕ ಸ್ವಾಸ್ಥ್ಯದ ಜೊತೆಗೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವಂತಹ ಕ್ರೀಡೆಗಳು ನಮ್ಮ ಕ್ರೀಡಾಂಗಣದಲ್ಲಿ ಇನ್ನಷ್ಟು ಮೂಡಿ ಬರಲಿ ಎಂದು ಆಶಿಸಿದರು. ವೇದಿಕೆಯಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪೊಡಿಯ, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಂ. ವಿಜಯ್ ಲೋಬೊ, ದೈಹಿಕ ಶಿಕ್ಷಣ ನಿರ್ದೇಶಕ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.

ಪುತ್ತೂರು ವಲಯದ ನಾಲ್ಕು ತಂಡಗಳು ಪಾಲ್ಗೊಳ್ಳುತ್ತಿರುವ ನಿಗದಿತ20 ಓವರ್‌ಗಳ ಈ ಪಂದ್ಯಾಟದಲ್ಲಿ ಪ್ರಥಮ ಪಂದ್ಯವು ಆತಿಥೇಯ ಸಂತ ಫಿಲೋಮಿನಾ ಕಾಲೇಜು ಮತ್ತು ಸವಣೂರಿನ ವಿದ್ಯಾರಶ್ಮಿ ಮಹಾ ವಿದ್ಯಾಲಯ ತಂಡಗಳ ನಡುವೆ ಜರಗಲಿದ್ದು, ದ್ವಿತೀಯ ಪಂದ್ಯವು ಉಪ್ಪಿನಂಗಡಿಯ ಸಪ್ರದ ಕಾಲೇಜು ಮತ್ತು ಶ್ರೀರಾಮಕುಂಜೇಶ್ವರ ಪ್ರಥಮ ದರ್ಜೆ ಕಾಲೇಜು ತಂಡಗಳ ನಡುವೆ ನಡೆಯಲಿದೆ. ಈ ಎರಡು ಪಂದ್ಯಗಳ ವಿಜೇತರ ನಡುವೆ ಫೈನಲ್ ಪಂದ್ಯವು ಮಾರ್ಚ್14ರಂದು ನಡೆಯಲಿದ್ದು, ಇದರ ವಿಜೇತ ತಂಡವು ಮಂಗಳೂರು ವಿವಿಯ ಅಂತರ್ ವಲಯ ಪಂದ್ಯಾಟದಲ್ಲಿ ಪಾಲ್ಗೊಳ್ಳಲು ಅರ್ಹತೆಯನ್ನು ಪಡೆಯಲಿದೆ. ವಿದ್ಯಾರ್ಥಿನಿಯರಾದ ರಕ್ಷಾ ಮತ್ತು ಪ್ರತಿಮಾ ಪ್ರಾರ್ಥಿಸಿದರು. ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಎಲಿಯಾಸ್ ಪಿಂಟೊ ವಂದಿಸಿದರು. ಸಹಾಯಕ ಪ್ರಾಧ್ಯಾಪಕ ದಿನಕರ್ ಅಂಚನ್ ಕಾರ್ಯಕ್ರಮ ನಿರೂಪಿಸಿದರು.