Tuesday, January 21, 2025
ಹೆಚ್ಚಿನ ಸುದ್ದಿ

ಕಲ್ಲಡ್ಕ, ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ಶ್ರೀಗುರೂಜಿ ಜನ್ಮ ದಿನಾಚರಣೆ-ಕಹಳೆ ನ್ಯೂಸ್

ಕಲ್ಲಡ್ಕ : ಮಾರ್ಚ್ 9ರಂದು ಕಲ್ಲಡ್ಕ, ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ರಾ.ಸ್ವ.ಸೇ.ಸಂಘದ ಎರಡನೇ ಸರಸಂಘ ಚಾಲಕರಾದ ಶ್ರೀಗುರೂಜಿ ಜನ್ಮದಿನವನ್ನು ಆಚರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗೂ ಶಿಶುಮಂದಿರ ಮತ್ತು ಪೂರ್ವಗುರುಕುಲದ ವಾರ್ಷಿಕೋತ್ಸವ ನಡೆಯಿತು. ಕಾರ್ಯಕ್ರಮದಲ್ಲಿ ವಿವಿಧ ರೀತಿಯ ಸಾಂಸ್ಕøತಿಕ ಕಾರ್ಯಕ್ರಮ, ವೈವಿದ್ಯಮಯ ನೃತ್ಯ ಪ್ರದರ್ಶನ, ಇಂಗ್ಲೀಷ್ ನಾಟಕ ನೆರವೇರಿತು. ಸಿಕ್ಕಿಂನಲ್ಲಿ ಸೈನಿಕರಾಗಿರುವ ಶ್ರೀ ದಿವಾಕರ ಪ್ರಭು, ಬಜೆತ್ತೂರು ಮಾತನಾಡುತ್ತಾ, “ಈ ವಿದ್ಯಾ ಕೇಂದ್ರದಲ್ಲಿ ಸನಾತನ ಸಂಸ್ಕøತಿಯನ್ನು ತಿಳಿಸಿಕೊಡುತ್ತಾರೆ, ಇಂದಿನ ಕಾರ್ಯಕ್ರಮ ನೋಡಿ ನಾವಿನ್ನೂ ಭಾರತದಲ್ಲಿ ಭಾರತೀಯರಾಗಿ ಇದ್ದೇವೆ ಎಂದೆನಿಸಿತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಸಂತೋಷವಾಯಿತು.” ಹಾಗೇಯೇ ನೀವು ಸೈನ್ಯಕ್ಕೆ ಸೇರಿದೇಶ ಸೇವೆ ಮಾಡಿ ಎಂದು ವಿದ್ಯಾರ್ಥಿಗಳಿಗೆ ಹುರಿದುಂಬಿಸಿದರು.

ಹಾಗೂ ನಿಮ್ಮ ನಿಮ್ಮ ಮಕ್ಕಳನ್ನು ಭಾರತಾಂಬೆಯ ಸೇವೆಗೆ ಕಳುಹಿಸಿ ಎಂದು ನೆರೆದಿದ್ದ ಪೋಷಕರಿಗೆ ಕಿವಿಮಾತು ಹೇಳಿದರು. ಕಾರ್ಯಕ್ರಮದ ಕೊನೆಯಲ್ಲಿ ವಿಶೇಷವಾಗಿ ಶಿಶುಮಂದಿರ ಹಾಗೂ ಪೂರ್ವಗುರುಕುಲದ ತಾಯಂದಿರು ಮಾಡಿದ ಕೊಬ್ಬರಿ ಮಿಠಾಯಿಯನ್ನು ಎಲ್ಲರಿಗೂ ಹಂಚಲಾಯಿತು. ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಡಾ|| ಪ್ರಭಾಕರ್ ಭಟ್ ಕಲ್ಲಡ್ಕ, ವಿದ್ಯಾಕೇಂದ್ರದ ಸಂಚಾಲಕರಾದ ಶ್ರೀ ವಸಂತ ಮಾಧವ, ಶ್ರೀರಾಮ ಆಡಳಿತ ಮಂಡಳಿಯ ಸದಸ್ಯರಾದ ಕಮಲಾ ಪ್ರಭಾಕರ್ ಭಟ್, ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.