Sunday, November 24, 2024
ಪುತ್ತೂರು

ಬಪ್ಪಳಿಗೆಯ ಅಂಬಿಕಾ ಹಾಸ್ಟೆಲ್ಸ್ ನಲ್ಲಿ ಶಿವರಾತ್ರಿ ಹಬ್ಬದ ಆಚರಣೆ; ಬೆಳಗಿನವರೆಗೂ ಜಾಗರಣೆ ಮಾಡಿ ಹಬ್ಬ ಆಚರಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರು-ಕಹಳೆ ನ್ಯೂಸ್

ಪುತ್ತೂರು : ಇಲ್ಲಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ವಿದ್ಯಾಸಂಸ್ಥೆಗಳ ಹಾಸ್ಟೆಲ್ಸ್ ವತಿಯಿಂದ ಶಿವರಾತ್ರಿ ಪ್ರಯುಕ್ತ ವಿಶೇಷ ಆಚರಣೆ ನಡೆಯಿತು. ಪದವಿ ಕಾಲೇಜಿನ ಆವರಣದಲ್ಲಿ ಹುಡುಗಿಯರಿಂದ ಕಾರ್ಯಕ್ರಮಗಳು ನಡೆದರೆ, ಪದವಿಪೂರ್ವ ವಿದ್ಯಾಸಂಸ್ಥೆಯಲ್ಲಿ ಹುಡುಗರ ವತಿಯಿಂದ ವಿವಿಧ ಆಚರಣೆಗಳು ಜರಗಿದವು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಗುರುವಾರ ರಾತ್ರಿ ಹತ್ತರಿಂದ ಬೆಳಗ್ಗಿನ ಜಾವ ಆರರವರೆಗೂ ಎಲ್ಲಾ ವಿದ್ಯಾರ್ಥಿಗಳೂ ಭಾಗವಹಿಸಿ ಶಿವರಾತ್ರಿಯ ನಿಜವಾದ ಉದ್ದೇಶವನ್ನು ಸಾಕಾರಗೊಳಿಸಿದರು. ಎಲ್ಲರೂ ಸೇರಿ ಶಿವಾರಾಧನೆಗೈದರು. ಶಿವನಿಗೆ ಸಂಬಂಧಿಸಿದ ವಿವಿಧ ಬಗೆಯ ಭಜನೆಗಳನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು. ಹಾಗೆಯೇ ಈಶ್ವರ ದೇವರ ಕುರಿತಾದ ವೈವಿಧ್ಯಮಯ ರೂಪಕ, ಹಾಡು, ಏಕಪಾತ್ರಾಭಿನಯಗಳೂ ಮೂಡಿಬಂದು ನೆರೆದವರನ್ನು ಭಕ್ತಿ ಪ್ರಪಂಚಕ್ಕೆ ಕರೆದೊಯ್ದವು. ಹುಡುಗಿಯರ ಹಾಸ್ಟೆಲ್‍ನಲ್ಲಿ ಶಿವರಾತ್ರಿ ಕುರಿತಾಗಿ ವಿಶೇಷ ಉಪನ್ಯಾಸ ನೀಡಿದ ಬಪ್ಪಳಿಗೆಯ ಕ್ಯಾಂಪಸ್ ನಿರ್ದೇಶಕ ಭಾಸ್ಕರ ಶೆಟ್ಟಿ ಮಾತನಾಡಿ ಶಿವರಾತ್ರಿಯ ಮಹತ್ವವನ್ನು ವಿವರಿಸಿದರು. ಶಿವರಾತ್ರಿಯ ಭಕ್ತಿಪ್ರಧಾನ ವಿಚಾರಧಾರೆ ಹಾಗೂ ಆಚರಣೆಗಳನ್ನು ಅವರು ತಿಳಿಸಿಕೊಟ್ಟರು. ಈ ಮಧ್ಯೆ ಹುಡುಗರ ಹಾಸ್ಟೆಲ್‍ನಲ್ಲಿ ಅಂಬಿಕಾ ವಿದ್ಯಾಲಯದ ಏಳನೆಯ ತರಗತಿ ವಿದ್ಯಾರ್ಥಿ ಶ್ರೀಕೃಷ್ಣ ನಟ್ಟೋಜ ಮಣ್ಣಿನಿಂದ ತಯಾರಿಸಿದ ಶಿವನ ಮೂರ್ತಿಯನ್ನು ಪ್ರತಿಷ್ಟಾಪಿಸಿ ಅರ್ಚನೆಗೈಯಲಾಯಿತು. ಬೆಳಗಿನ ಜಾವದಲ್ಲಿ ಶಾಲಾ ಆವರಣದಲ್ಲಿನ ಬಾವಿಯಲ್ಲಿ ಆ ಮೂರ್ತಿಯನ್ನು ವಿಸರ್ಜಿಸಲಾಯಿತು. ಈ ಸಂದರ್ಭದಲ್ಲಿ ನಟ್ಟೋಜ ಫೌಂಡೇಶನ್ ಟ್ರಸ್ಟ್‍ನ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಉಪಸ್ಥಿತರಿದ್ದರು.