Monday, January 20, 2025
ಪುತ್ತೂರು

ಸಂತ ಫಿಲೋಮಿನಾ ಕಾಲೇಜಿನ ಎನ್ನೆಸ್ಸೆಸ್ ಸ್ವಯಂಸೇವಕರಿಗೆ ಅಭಿನಂದನೆ-ಕಹಳೆ ನ್ಯೂಸ್

ಪುತ್ತೂರು : ಸಂತ ಫಿಲೋಮಿನಾ ಕಾಲೇಜಿನ ಎನ್ನೆಸ್ಸೆಸ್ ಸ್ವಯಂಸೇವಕರಾದ ದ್ವಿತೀಯ ಬಿಸಿಎ ವಿದ್ಯಾರ್ಥಿಗಳಾದ ಸಾಯಿ ಲೀ ವಿಠಲ್ ಸುವರ್ಣ ಮತ್ತು ಲವಿನ್ ಜೆ ವಿ ಇವರು ಇತ್ತೀಚ್ಛೆಗೆ ಆಯೋಜಿಸಲಾದ ರಾಷ್ಟ್ರೀಯ ಭಾವೈಕ್ಯತಾ ಶಿಬಿರಗಳಲ್ಲಿ ಪಾಲೊಂಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಾಯಿ ಲೀ ವಿಠಲ್ ಸುವರ್ಣ ಇವರು ಮಂಗಳೂರಿನ ಪದುವಾ ಕಾಲೇಜಿನಲ್ಲಿ ಫೆಬ್ರವರಿ23 ರಿಂದ ಮಾರ್ಚ್1 ರ ತನಕ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಪಾಲೊಂಡಿದ್ದು, ಲವಿನ್ ಜೆ ವಿ ಇವರು ಕರ್ನಾಟಕ ವಿಶ್ವವಿದ್ಯಾನಿಲಯ, ಧಾರವಾಡದಲ್ಲಿ ಫೆಬ್ರವರಿ 26ರಿಂದ ಮಾರ್ಚ್4ರ ತನಕ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಪಾಲೊಂಡಿದ್ದರು. ಮಂಗಳೂರು ವಿಶ್ವವಿದ್ಯಾನಿಲಯ ತಂಡವನ್ನು ಕಾಲೇಜಿನ ವತಿಯಿಂದ ಪ್ರತಿನಿಧಿಸಿದ ಇವರನ್ನು ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಮತ್ತು ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ದಿನಕರ್‍ಅಂಚನ್ ಅಭಿನಂದಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು