Tuesday, January 21, 2025
ಸುದ್ದಿ

ಕಂಬಳ ಸಂಘಟಕರ ವಿವರಕ್ಕೆ ಸೂಚನೆ-ಕಹಳೆ ನ್ಯೂಸ್

ಮಂಗಳೂರು : ತುಳುನಾಡಿನ ಸಂಸ್ಕøತಿ, ಪರಂಪರೆ, ಜಾನಪದ ವೈಭವಕ್ಕೆ ಮೆರುಗು ನೀಡುವ ಕಂಬಳ ಕ್ರೀಡೆಯನ್ನು ರಾಜ್ಯ ಹಾಗೂ ದೇಶಾದ್ಯಂತ ಪ್ರಚಾರಪಡಿಸುವ ಸಲುವಾಗಿ ಇನ್ನು ಹೆಚ್ಚಿನ ಪ್ರವಾಸಿಗರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಯೋಜಿಸಲಾಗುವ ಕಂಬಳ ವೀಕ್ಷಣೆಗೆ ಆಗಮಿಸುವಂತೆ ಪ್ರವಾಸೋದ್ಯಮ ಇಲಾಖೆ ಹಾಗೂ ಸರ್ಕಾರದ ಅಂತರ್ಜಾಲ ತಾಣ ಹಾಗೂ ಮಾಹಿತಿ ಪ್ರಚಾರದ ಮೂಲಕ ತಿಳಿಸಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕಂಬಳ ಕ್ರೀಡೆ ಆಯೋಜನೆ ಮಾಡುತ್ತಿರುವ ಸಂಘ ಸಂಸ್ಥೆಗಳು ಕಂಬಳ ಕ್ರೀಡೆಯ ಆಯೋಜನೆಯ ಸ್ಥಳ, ಸಂಘಟಕರ ಸಂಸ್ಥೆ, ಸಂಪರ್ಕ ಸಂಖ್ಯೆ, ಭಾವಚಿತ್ರ ಹಾಗೂ ಇನ್ನಿತರ ವಿವರಗಳನ್ನು ಮೂರು ದಿನಗಳೊಳಗಾಗಿ ಉಪ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಲಾಲ್ ಬಾಗ್, ಮಂಗಳೂರು, ಮೊಬೈಲ್ ಸಂಖ್ಯೆ: 6360670253 ನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಡಾ. ಕೆ.ವಿ. ರಾಜೇಂದ್ರ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು