Tuesday, January 21, 2025
ಸುದ್ದಿ

ಮಕ್ಕಳ ಸಮೀಕ್ಷೆಗೆ ಸಹಕರಿಸುವಂತೆ ಮನವಿ-ಕಹಳೆ ನ್ಯೂಸ್

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಶಾಲೆಯಿಂದ ಹೊರಗೆ ಉಳಿದ 1 ರಿಂದ 14 ವರ್ಷದ ಮಕ್ಕಳನ್ನು ಸಮೀಕ್ಷೆ ಮಾಡಿ ವರದಿಯನ್ನು ಸರಕಾರವು ಉಚ್ಚ ನ್ಯಾಯಲಯಕ್ಕೆ ಸಲ್ಲಿಸಬೇಕಾಗಿರುವುದರಿಂದ ಈಗಾಗಲೇ ನಗರ ಸಂಸ್ಥೆಗಳು ಸರ್ವೇ ಕಾರ್ಯ ಪ್ರಾರಂಭಿಸಿದ್ದು, ತ್ವರಿತವಾಗಿ ಸರ್ವೇ ಮಾಡಿ ಮಾರ್ಚ್ 30 ರೊಳಗೆ ಪೂರ್ಣಗೊಳಿಸಲು ನಿರ್ದೇಶಕರು, ಪೌರಾಡಳಿತ ಬೆಂಗಳೂರು ಇವರು ಸೂಚನೆ ನೀಡಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಶಾಲೆಯಿಂದ ಹೊರಗಡೆ ಉಳಿದ ಮಕ್ಕಳ ಸರ್ವೇ ಕಾರ್ಯ ನಡೆಯುತ್ತಿರುವುದರಿಂದ ಶಾಲೆಗೆ ಸಂಬಂಧಪಟ್ಟ ಬಗ್ಗೆ ದಾಖಲಾತಿಗಳನ್ನು ಬೇರೆ ಯಾವುದೇ ಉದ್ದೇಶಕ್ಕಾಗಿ ಪಡೆಯುವುದಿಲ್ಲ ಎಂದು ಸೂಚಿಸುತ್ತಾ ತಮ್ಮ ಮನೆಗೆ ಬಂದಾಗ ಯಾವುದೇ ಸಂಶಯಪಡದೇ ರೇಶನ್ ಕಾರ್ಡ್ ಮತ್ತು ಮಕ್ಕಳ ಆಧಾರ್ ಕಾರ್ಡ್ ನೀಡಿ ಸಹಕರಿಸಬೇಕೆಂದು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು