ಕಾರ್ಕಳ : ಅವಧಿ ಮೀರಿದ ಆಹಾರವನ್ನು ಹೊಳೆ ಬದಿ ಎಸೆದ ಪರಿಣಾಮ ಅವುಗಳನ್ನು ತಿಂದು ಹಸುಗಳು ಮೃತಪಟ್ಟ ಘಟನೆ ಕಾರ್ಕಳದಲ್ಲಿ ನಡೆದಿದೆ.
ಸುಮಾರು 25 ಗೋಣಿ ಕಡಲೆ ಹಿಟ್ಟನ್ನು ಜೋಗಲ್ಬೆಟ್ಟು ನದಿಯ ಹತ್ತಿರ ಯಾರೊ ವ್ಯಕ್ತಿಗಳು ಬಿಸಾಕಿ ಹೋಗಿದ್ದು. ಇದನ್ನು ತಿಂದ 5 ಹಸುಗಳು ಸಾವನಪ್ಪಿದ್ದು, ಸುಮಾರು 25-30 ಹಸುಗಳು ಅಸ್ವಸ್ಥಗೊಂಡ ಬಗ್ಗೆ ತಿಳಿದು ಬಂದಿದೆ. ದುರುಳರ ಕ್ರತ್ಯಕ್ಕೆ ಮೂಕ ಪ್ರಾಣಿಗಳು ಬಲಿಯಾಗಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ.ತತ್ಕ್ಷಣವೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ವಹಿಸಬೇಕು ಎಂದು ಸ್ಥಳಿಯರು,ಹಿಂದೂ ಸಂಘಟನೆಯವರು ಆಗ್ರಹಿಸಿದ್ದಾರೆ.