Thursday, November 28, 2024
ಸುದ್ದಿ

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ತಾತ್ಕಾಲಿಕ ನೇಮಕಾತಿ-ಕಹಳೆ ನ್ಯೂಸ್

ಮಂಗಳೂರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು (ಗ್ರಾ) ಇಲ್ಲಿ 2 ಅಂಗನವಾಡಿ ಕಾರ್ಯಕರ್ತೆ ಹಾಗೂ 12 ಸಹಾಯಕಿಯರ ಹುದ್ದೆಗೆ ತಾತ್ಕಾಲಿಕವಾಗಿ ನೇಮಕಾತಿ ಆಯ್ಕೆ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಾತ್ಕಾಲಿಕವಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳ ವಿವರ ಇಂತಿವೆ:

ಜಾಹೀರಾತು
ಜಾಹೀರಾತು
ಜಾಹೀರಾತು

ಐಕಳ ಗ್ರಾಮ ಪಂಚಾಯತ್‍ನ ಏಳಿಂಜೆ ಅಂಗನವಾಡಿ ಕೇಂದ್ರ – ಸುಮ, ಪಾವೂರು ಗ್ರಾಮ ಪಂಚಾಯತ್‍ನ ಪೋಡಾರ್ ಸೈಟ್ ಅಂಗನವಾಡಿ ಕೇಂದ್ರ -ರುಬೀನಾ ಬಾನು ಇವರುಗಳು ಕಾರ್ಯಕರ್ತೆ ಹುದ್ದೆಗೆ ತಾತ್ಕಾಲಿಕವಾಗಿ ನೇಮಕಗೊಂಡಿದ್ದಾರೆ.

ತಾತ್ಕಾಲಿಕವಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳ ವಿವರ ಇಂತಿವೆ:

ಪಡುಮಾರ್ನಾಡು ಗ್ರಾಮ ಪಂಚಾಯತ್‍ನ ಮುಗೇರಕಳ ಅಂಗನವಾಡಿ ಕೇಂದ್ರ – ಶ್ವೇತ, ಚೇಳ್ಯಾರು ಗ್ರಾಮ ಪಂಚಾಯತ್‍ನ ಚೇಳ್ಯಾರುಪದವು ಅಂಗನವಾಡಿ ಕೇಂದ್ರ –ಉಷಾಲತಾ, ಮೂಡುಶೆಡ್ಡೆ ಗ್ರಾಮ ಪಂಚಾಯತ್‍ನ ಎದುರುಪದವು ಅಂಗನವಾಡಿ ಕೇಂದ್ರ – ಗೀತಾ, ಪಾವೂರು ಗ್ರಾಮ ಪಂಚಾಯತ್‍ನ ಬದ್ರಿಯಾ ನಗರ ಅಂಗನವಾಡಿ ಕೇಂದ್ರ – ವಿದ್ಯಾಶ್ರೀ, ಹರೇಕಳ ಗ್ರಾಮ ಪಂಚಾಯತ್‍ನ ಖಂಡಿಗೆ ಮೂಲೆ ಅಂಗನವಾಡಿ ಕೇಂದ್ರ – ಮಮತ, ಕೋಣಾಜೆ ಗ್ರಾಮ ಪಂಚಾಯತ್‍ನ ಕೋಣಾಜೆ ಅಂಗನವಾಡಿ ಕೇಂದ್ರ – ತೇಜಸ್ವಿನಿ, ಕೆಮ್ರಾಲ್ ಗ್ರಾಮ ಪಂಚಾಯತ್‍ನ ಹೊಸಕಾಡು ಅಂಗನವಾಡಿ ಕೇಂದ್ರ – ಹೇಮಾವತಿ, ಬಜ್ಪೆ ಗ್ರಾಮ ಪಂಚಾಯತ್‍ನ ಕೊಂಚಾರು ಅಂಗನವಾಡಿ ಕೇಂದ್ರ – ತಸ್ಲೀಮಾ ಬಾನು, ಆಂಬ್ಲಮೊಗರು ಗ್ರಾಮ ಪಂಚಾಯತ್‍ನ ಗಾಂಧಿನಗರ ಅಂಗನವಾಡಿ ಕೇಂದ್ರ – ಸೋನಿಯಾ ಸುವರ್ಣ, ತೆಂಕಮಿಜಾರು ಗ್ರಾಮ ಪಂಚಾಯತ್‍ನ ತೆಂಕಮಿಜಾರು ಅಂಗನವಾಡಿ ಕೇಂದ್ರ – ರೇಶ್ಮಾ, ಜೋಕಟ್ಟೆ ಗ್ರಾಮ ಪಂಚಾಯತ್‍ನ ಜೋಕಟ್ಟೆ-3 ಅಂಗನವಾಡಿ ಕೇಂದ್ರ – ರಮ್ಲ ಬಾನು, ಮೂಡಬಿದ್ರೆ ಪುರಸಭೆ ವಾರ್ಡ್ ನಂ 6 ರ ಜೈನ್‍ಪೇಟೆ ಅಂಗನವಾಡಿ ಕೇಂದ್ರ – ಲಾವಣ್ಯ ಇವರುಗಳು ಅಂಗನವಾಡಿ ಸಹಾಯಕಿ ಹುದ್ದೆಗೆ ತಾತ್ಕಾಲಿಕವಾಗಿ ನೇಮಕಗೊಂಡಿದ್ದಾರೆ. ಸದರಿ ತಾತ್ಕಾಲಿಕ ನೇಮಕಾತಿ ಪಟ್ಟಿಯಲ್ಲಿ ಆಕ್ಷೇಪಣೆ ಇದ್ದಲ್ಲಿ ಮಾರ್ಚ್ 18 ರೊಳಗೆ ಆಕ್ಷೇಪಣೆ ಕಚೇರಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು(ಗ್ರಾ), ದೂರವಾಣಿ ಸಂಖ್ಯೆ: 0824-2263199 ಅಥವಾ ಇಮೇಲ್: cdpomangalorerural@gmail.com ನ್ನು ಸಂಪರ್ಕಿಸಬಹುದು ಎಂದು ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.