ಪುತ್ತೂರಿನ ಕೋಟಿ ಚೆನ್ನಯ ಕಂಬಳ ಕೂಟದಲ್ಲಿ ಹೊರಗಡೆ ಜೋಡಿ ಕೋಣಗಳ ಓಟ ; ಕಾರಿನ ಒಳಗಡೆ ಜೋಡಿಹಕ್ಕಿಗಳ ಪ್ರಣಯದಾಟ -ಕಹಳೆ ನ್ಯೂಸ್
ಪುತ್ತೂರು : ಮಾರ್ಚ್ 13 ರಂದು ಪುತ್ತೂರಿನ ಕೋಟಿ ಚೆನ್ನಯ ಕಂಬಳ ಅದ್ದೂರಿಯಾಗಿ ನಡೆಯುತ್ತಿತ್ತು. ಊರು ಪರವೂರಿನಿಂದ ಲಕ್ಷಾಂತರ ಜನ ತುಳುನಾಡಿನ ಜನಪದ ಕ್ರೀಡೆ ಕಂಬವನ್ನು ವೀಕ್ಷಿಸಲು ಬಂದಿದ್ದರು.
ಆದರೆ ಪುತ್ತೂರಿನ ಕಂಬಳ ಕೂಟದಲ್ಲಿ ಜೋಡಿ ಕೋಣಗಳು ಭರ್ಜರಿ ಓಟ ನಡೆಯುತ್ತಿದ್ದರೆ ಅತ್ತ ಕಂಬಳ ಜರುಗುವ ಗದ್ದೆಯಲ್ಲಿ ಮಟ ಮಟ ಮಧ್ಯಾಹ್ನ ಬಿಸಿಲಿನಲ್ಲಿ ಕಾರೊಂದರಲ್ಲಿ ಜೋಡಿಗಳ ಪ್ರಯಾಣದಾಟ ನಡೆಯುತ್ತಿದೆ.ಮಂಗಳೂರು ರಿಜಿಸ್ಟ್ರೇಷನ್ ನ ಕೆಂಪು ಬಣ್ಣದ ರೆನಾಲ್ಟ್ ಕ್ವಿಡ್ ಕಾರಿನೊಳಗೆ ಜೋಡಿಹಕ್ಕಿಗಳು ಸಾರ್ವಜನಿಕವಾಗಿ ಅನುಚಿತವಾಗಿ ವರ್ತಿಸುತ್ತಿದ್ದರು.ಇದನ್ನು ಕಂಡ ಸಾರ್ವಜನಿಕರು ಯುವಕ ಯುವತಿಯರನ್ನು ತರಾಟೆಗೆ ತೆಗೆದುಕೊಂಡು, ಮಹಿಳಾ ಪೊಲೀಸ್ ಠಾಣೆಗೆ ಜೋಡಿಯನ್ನು ಪುತ್ತೂರು ಮಹಿಳಾ ಪೊಲೀಸರಿಗೆ ಒಪ್ಪಿಸಿದರು. ಇವರು ಕಾಲೇಜೊಂದರ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.