Saturday, November 23, 2024
ಪುತ್ತೂರು

ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಗಣಿತಶಾಸ್ತ್ರ ವಿಭಾಗದಲ್ಲಿ ‘ಲೇಟೆಕ್ಸ್’ ಕುರಿತು ಕಾರ್ಯಾಗಾರ ‘ನೈಜ ಬದುಕಿನಲ್ಲಿ ಗಣಿತವು ಬಹು ಮುಖ್ಯ ಪಾತ್ರ ವಹಿಸುತ್ತದೆ’-ಪ್ರೊ. ಲಿಯೋ ನೊರೊನ್ಹಾ -ಕಹಳೆ ನ್ಯೂಸ್

ಪುತ್ತೂರು: ಮಾನವನ ನೈಜ ಬದುಕಿನಲ್ಲಿ ಗಣಿತವು ಬಹು ಮುಖ್ಯ ಪಾತ್ರ ವಹಿಸುತ್ತದೆ. ಈ ದಿಸೆಯಲ್ಲಿ ಗಣಿತಶಾಸ್ತ್ರದ ಅಧ್ಯಯನವನ್ನು ಕ್ರಮಬದ್ಧವಾಗಿ ಕೈಗೊಳ್ಳುವುದು ಅನಿವಾರ್ಯ ಎಂದು ಸಂತ ಫಿಲೋಮಿನಾ ಕಾಲೇಜಿನ ಪ್ರಾಚಾರ್ಯ ಪ್ರೊ.ಲಿಯೋ ನೊರೊನ್ಹಾ ಹೇಳಿದರು. ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಗಣಿತಶಾಸ್ತ್ರ ವಿಭಾಗ ಮತ್ತು ವಾಮಂಜೂರಿನ ಸೈಂಟ್ ಜೋಸೆಫ್ಸ್ ಇಂಜಿಯರಿಂಗ್ ಕಾಲೇಜಿನ ಗಣಿತಶಾಸ್ತ್ರ ವಿಭಾಗದೊಂದಿಗಿನ ಒಡಂಬಡಿಕೆಯ ಅಂಗವಾಗಿ ಮಾರ್ಚ್ 12 ರಂದು ಕಾಲೇಜಿನ ಸ್ನಾತಕೋತ್ತರ ಸಭಾಂಗಣದಲ್ಲಿ‘ಲೇಟೆಕ್ಸ್’ ಕುರಿತು ಆಯೋಜಿಸಲಾದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಗಣಿತಶಾಸ್ತ್ರದ ಕುರಿತು ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಮೂಡಿಸುವಲ್ಲಿ ಇಂತಹ ಕಾರ್ಯಾಗಾರಗಳು ಬಹು ಉಪಯೋಗಿಯಾಗಿರುತ್ತವೆ ಎಂದರು. ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಲೇಜಿನ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ, ಗಣಿತಶಾಸ್ತ್ರವನ್ನು ಮುಂದಿನ ಜನಾಂಗಕ್ಕೆ ವರ್ಗಾಯಿಸಲು ಉತ್ತಮ ಸಂವಹನ ಕಲೆಯು ಎಷ್ಟು ಮುಖ್ಯವೋ, ಗಣಿತವನ್ನು ಶಿಸ್ತುಬದ್ಧವಾಗಿ ಪುಸ್ತಕ ರೂಪಕ್ಕೆ ತರುವ ಲೇಟೆಕ್ಸ್ನಂತಹ ಸಾಫ್ಟ್ವೇರ್ಗಳು ಅಷ್ಟೇ ಅತ್ಯವಶ್ಯವಾಗಿರುತ್ತವೆ. ಅದನ್ನು ಕಲಿತುಕೊಳ್ಳುವಲ್ಲಿ ವಿದ್ಯಾರ್ಥಿಗಳು ಆಸಕ್ತಿ ವಹಿಸಬೇಕು ಎಂದರು. ಸ್ನಾತಕೋತ್ತರ ಗಣಿತಶಾಸ್ತ್ರ ವಿಭಾಗದ ಸಂಯೋಜಕ ಪ್ರೊ. ಗಣೇಶ ಭಟ್ ಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಭಾ ಕಾರ್ಯಕ್ರಮದ ಬಳಿಕ ಸೈಂಟ್ ಜೋಸೆಫ್ಸ್ ಇಂಜಿಯರಿಂಗ್ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರಮಾನಂದ ಎಚ್ ಎಸ್ ಇವರು ಕಂಪ್ಯೂಟರ್ ಪ್ರಯೋಗಾಲಯದಲ್ಲಿ ವಿದ್ಯಾರ್ಥಿಗಳಿಗೆ ಲೇಟೆಕ್ಸ್ ಕುರಿತು ಉಪನ್ಯಾಸ ನೀಡಿದರು. ಸಹ ಪ್ರಾಧ್ಯಾಪಕ ಡಾ. ಜಗದೀಶ ಬಿ ಸಹಕರಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಗಣಿತಶಾಸ್ತ್ರ ಸ್ನಾತಕೋತ್ತರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ವೈಷ್ಣವಿ ಸಿ, ಅನುಷಾ ಎಲ್, ಮೋಹನ್ ರಾಜ್ ಎಸ್, ಕಾರ್ತಿಕ್ ಕೆ ಮತ್ತು ವೃಕ್ಷವರ್ಧನ ಹೆಬ್ಬಾರ್ ಎನ್ ಉಪಸ್ಥಿತರಿದ್ದರು. ಪ್ರತೀಕ್ಷಾ ಮತ್ತು ಬಳಗದವರು ಪ್ರಾರ್ಥಿಸಿದರು. ಸಿ| ಲೀಮಾ ಸ್ವಾಗತಿಸಿ, ಪ್ರಜ್ವಲ್ ನಂಜಪ್ಪ ವಂದಿಸಿದರು. ಶ್ರೀಹಸ್ತಾ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು