Friday, November 22, 2024
ಪುತ್ತೂರು

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಕೌಶಲ್ಯಗಳು ಮತ್ತು ಯಶಸ್ಸಿನ ಲಕ್ಷಣದ ಬಗ್ಗೆ ಮಾಹಿತಿ ಕಾರ್ಯಾಗಾರ ಸೋಲು ಮತ್ತು ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು- ವಂದನಾ ಶಂಕರ್-ಕಹಳೆ ನ್ಯೂಸ್

ಪುತ್ತೂರು: ಸೋಲು ಮತ್ತು ಗೆಲುವು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಜೀವನದಲ್ಲಿ ಯಶಸ್ಸನ್ನು ಗಳಿಸಬೇಕು ಎಂದರೆ ಸೋಲು ಮತ್ತು ಗೆಲುವು ಅನ್ನು ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂದು ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಕ್ಯಾಂಪಸ್ ನಿರ್ದೇಶಕರಾದ ವಂದನಾ ಶಂಕರ್ ಹೇಳಿದರು. ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಕೌಶಲ್ಯಗಳು ಮತ್ತು ಯಶಸ್ಸಿನ ಲಕ್ಷಣ (Skills and Attributes to success) ಎಂಬ ಮಾಹಿತಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸೋಲುಗಳನ್ನು ಕೈಚಾಚಿ ಸ್ವೀಕರಿಸಿದರೆ ಮಾತ್ರ ಗೆಲುವೆಂಬ ಪದದ ಅರ್ಥ ಹಾಗೂ ಆ ಪದದ ಬೆಲೆ ತಿಳಿದುಬರುತ್ತದೆ. ಸೋತವನಿಗೆ ಅವಕಾಶಗಳಿರುವುದಿಲ್ಲ. ಅವಕಾಶಗಳನ್ನು ನಾವು ಸೃಷ್ಟಿಸಬೇಕು. ಪರೀಕ್ಷೆಯಲ್ಲಿ ಸೋತರೆಂದರೆ ಅವರು ಅವರ ಜೀವನದಲ್ಲಿ ಸೋತರೆಂದು ಅರ್ಥವಲ್ಲ. ಅದನ್ನು ಅವರು ಸಮರ್ಪಕವಾಗಿ ಬಳಸಬೇಕು. ಎಂತಹದೇ ಕಷ್ಟಗಳಾದರೂ ಅವುಗಳನ್ನು ಧನಾತ್ಮಕವಾಗಿ ಸ್ವೀಕರಿಸಬೇಕು. ಸೋಲನ್ನು ಧನಾತ್ಮಕವಾಗಿ ಸ್ವೀಕರಿಸಿದವರಿಗೆ ಒಂದಲ್ಲ ಒಂದು ಹಾದಿಯಲ್ಲಿ ಗೆಲುವಿರುತ್ತದೆ. ಆದರೆ ಪರಿಶ್ರಮ ಹಾಗೂ ಆತ್ಮವಿಶ್ವಾಸಗಳೆರಡೂ ಇರಬೇಕು. ಮೊದಲ ಪ್ರಯತ್ನದಲ್ಲೇ ಗೆಲ್ಲುವವನು ಬದುಕಲ್ಲಿ ಗೆಲ್ಲುತ್ತಾನೆ. ಆದರೆ ಸೋತವನು ಜಗತ್ತನ್ನೇ ಗೆಲ್ಲುತ್ತಾನೆ. ಯಾಕೆಂದರೆ ಸೋತವನಿಗೆ ಸಂಕಟವಿರುತ್ತದೆ, ಸಂಕಟದೊಂದಿಗೆ ಸೆಣಸಾಡುವ ಮನಸ್ಸಿಗೆ ಛಲ ಹೆಚ್ಚಿರುತ್ತದೆ. ಗೆಲುವು ಆಗಲಿ ಸೋಲೇ ಆಗಲಿ ಶಾಶ್ವತವಲ್ಲ. ಹಾಗೆಯೇ ಪ್ರಯತ್ನ ಅನ್ನುವುದು ಜೀವನದಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತದೆ. ಮನುಷ್ಯರಾಗಿ ಹುಟ್ಟಿದ ಮೇಲೆ ಜೀವನದಲ್ಲಿ ಏನಾದರೊಂದು ಸಾಧಿಸಲೇಬೇಕು. ಸಾಧನೆಯೆಂದು ಬಂದಕೂಡಲೇ ಪ್ರಯತ್ನ ಇರಲೇಬೇಕು. ನಮ್ಮ ಜೀವನದ ಗುರಿ ತಲುಪಲು ಪ್ರಯತ್ನ ಆವಶ್ಯವಾಗಿರುತ್ತದೆ. ಕೆಲವೊಂದು ಗುರಿಯನ್ನು ತಲುಪಲು ಹಾಗೂ ಸಾಧನೆಗಳನ್ನು ಮಾಡಲು ಕಠಿಣವಾದ ಪ್ರಯತ್ನವನ್ನು ಪಡಬೇಕಾದೀತು. ಪ್ರಯತ್ನಪಟ್ಟವನಿಗೆ ಮಾತ್ರ ಅದೃಷ್ಟ ಲಭಿಸುತ್ತದೆ ಎಂದರು. ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಸ್ನೇಹ ಸ್ವಾಗತಿಸಿ ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ದೀಕ್ಷಿತಾ ವಂದಿಸಿದರು.