Recent Posts

Sunday, January 19, 2025
ಕಡಬಕ್ರೀಡೆ

ಕಡಬದಲ್ಲಿ ಪ್ರೋ ಮಾದರಿಯ ಮ್ಯಾಟ್ ಕಬಡ್ಡಿ, ಪಂದ್ಯಾಟದ ಫಲಿತಾಂಶ ಇಲ್ಲಿದೆ ನೋಡಿ- ಕಹಳೆ ನ್ಯೂಸ್

ಕಡಬ: ಯುವಸೇನೆ ಫ್ರೆಂಡ್ಸ್ ಕ್ಲಬ್ ಕಡಬ ಆಶ್ರಯದಲ್ಲಿ, ದಕ್ಷಿಣ ಕನ್ನಡ ಮತ್ತು ಕಡಬ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಹಕಾರದೊಂದಿಗೆ, ನಿನ್ನೆ ಕಡಬ ಯಚ್.ಪಿ ಪೆಟ್ರೋಲ್ ಬಂಕ್ ಬಳಿಯ, ಎಸ್.ಆರ್.ಲೇಔಟ್ ಕ್ರೀಡಾಂಗಣದಲ್ಲಿ, ೮ ಆಹ್ವಾನಿತ ತಂಡಗಳ ಪ್ರೋ ಮಾದರಿಯ ಮ್ಯಾಟ್ ಕಬಡ್ಡಿ ಪಂದ್ಯಾಟ ನಡೆದಿತ್ತು. ಈ ಪಂದ್ಯಾಟದಲ್ಲಿ ಆಳ್ವಾಸ್ ಮೂಡಬಿದ್ರೆ ಪ್ರಥಮ ಸ್ಥಾನವನ್ನು ಬಾಚಿ, ೫೦,೦೦೦ ರೂ ನಗದು ಹಾಗೂ ಟ್ರೋಫಿಯನ್ನು ಪಡೆದುಕೊಂಡಿದೆ, ದ್ವಿತೀಯ ಸ್ಥಾನವನ್ನು ಫ್ರೆಂಡ್ಸ್ ಕ್ಲಬ್ ಕಡಬ ತನ್ನದಾಗಿಸಿಕೊಂಡಿದ್ದು, ೪೦,೦೦೦ರೂ ನಗದು ಮತ್ತು ಟ್ರೋಫಿಯನ್ನ ಬಾಚಿಕೊಂಡಿದೆ. ತೃತೀಯ ಸ್ಥಾನವನ್ನು ಎಸ್.ಡಿ.ಎಂ ಸ್ಪೋಟ್ಸ್ ಕ್ಲಬ್ ಉಜಿರೆ ಹಾಗೂ ಚತುರ್ಥ ಸ್ಥಾನವನ್ನು ಜೆಕೆ ಅಕಾಡೆಮಿ ಕಾಸರಗೋಡು ಪಡೆದುಕೊಂಡಿದ್ದು , ಈ ಎರಡೂ ತಂಡಗಳು ೨೦,೦೦೦ ರೂ ನಗದು ಮತ್ತು ಟ್ರೋಫಿಯನ್ನ ಮುಡಿಗೇರಿಸಿಕೊಂಡಿವೆ. ಇನ್ನೂ ಪಂದ್ಯದಲ್ಲಿ ದಿ ಬೆಸ್ಟ್ ರೈಡರ್ ಟ್ರೋಫಿ ಹರಿಯಾಣ ಪವನ್ ಕಡಿಯಾನ್‌ರವರಿಗೆ ಲಭಿಸಿದ್ದು , ಬೆಸ್ಟ್ ಡಿಫೆಂಡ್ ಮಲ್ಲಿಕಾರ್ಜುನ ಆಳ್ವಾಸ್ ಅವ್ರು ಪಡೆದುಕೊಂಡಿದ್ದಾರೆ, ಆಲ್ ರೌಂಡರ್ ಟ್ರೋಫಿಯನ್ನ ವಿಶ್ವರಾಜ ಆಳ್ವಾಸ್ ತನ್ನದಾಗಿಸಿಕೊಂಡಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು