Sunday, November 24, 2024
ಸುದ್ದಿ

ಸ್ಕೌಟ್ಸ್ ಮತ್ತು ಗೈಡ್ಸ್‌ನಿಂದ ವಿದ್ಯಾರ್ಥಿಗಳು ಭಾವನಾತ್ಮಕವಾಗಿ ಶಕ್ತರಾಗುತ್ತಾರೆ; ಡಾ. ಪ್ರಶಾಂತ ನಾಯ್ಕ-ಕಹಳೆ ನ್ಯೂಸ್

ಮಂಗಳೂರು : ಸ್ಕೌಟ್ಸ್ ಮತ್ತು ಗೈಡ್ಸ್‌ನಿಂದ ವಿದ್ಯಾರ್ಥಿ ಪಡೆಯುವ ಅನುಭವಗಳು ಉಜ್ವಲ ಭವಿಷ್ಯಕ್ಕೆ ಸಹಾಯಕವಾಗುತ್ತವೆ. ನಿಯಮಿತ ಅಧ್ಯಯನದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳು ಭಾವನಾತ್ಮಕವಾಗಿ ಬಲಶಾಲಿಗಳಾಗುತ್ತಾರೆ ಮತ್ತು ಸವಾಲುಗಳನ್ನು ಎದುರಿಸಲು ಸನ್ನದ್ಧರಾಗುತ್ತಾರೆ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಜೀವವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಪ್ರಶಾಂತ ನಾಯ್ಕ ಅಭಿಪ್ರಾಯಪಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ರಾಣಿ ಅಬ್ಬಕ್ಕ ಸ್ಕೌಟ್ಸ್‌-ಗೈಡ್ಸ್‌, ನಿತ್ಯಾಧರ ಆಂಗ್ಲ ಮಾಧ್ಯಮ ಶಾಲೆ ಬಬ್ಬುಕಟ್ಟೆ, ಪೆರ್ಮನ್ನೂರು ವತಿಯಿಂದ ಉಳ್ಳಾಲ ಸ್ಥಳೀಯ ಸಂಸ್ಥೆಯ ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, “1909 ರಲ್ಲಿ ಪ್ರಾರಂಭವಾದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಭವ್ಯ ಇತಿಹಾಸ ಹೊಂದಿದೆ. ಸ್ಕೌಟ್ಸ್ ಮತ್ತು ಗೈಡ್ಸ್ ಜೀವನ ಕೌಶಲ್ಯಗಳನ್ನು ಕಲಿಯಲು ಉತ್ತಮ ವೇದಿಕೆ,” ಎಂದರು. ಶಾಲಾ ಮುಖ್ಯ ಶಿಕ್ಷಕಿ ವಿಕ್ಟೊರಿಯ ಡಿಸೋಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ, ಜಿಲ್ಲಾ ತರಬೇತಿ ಕೌನ್ಸಿಲರ್ ತ್ಯಾಗಮ್ ಹರೇಕಳ ಮತ್ತು ಸ್ವರ್ಣಲತಾ ತರಬೇತಿ ನಡೆಸಿಕೊಟ್ಟರು. ಗೈಡ್ ಕ್ಯಾಪ್ಟನ್ ನಯನಾ ಸ್ವಾಗತಿಸಿ, ನಿರೂಪಿಸಿದರು. ಇದೇ ಸಂದರ್ಭದಲ್ಲಿ ರಾಜ್ಯ ಪುರಸ್ಕಾರ ಪಡೆದ ಸ್ಕೌಟ್ಸ್ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಲೇಡಿ ಸ್ಕೌಟ್ ಮಾಸ್ಟರ್ ರೀನಾ ವಿಲ್ಮಾ ಡಿಸೋಜ ಧನ್ಯವಾದ ಸಮರ್ಪಿಸಿದರು.