Sunday, November 24, 2024
ಪುತ್ತೂರು

ಅಂಬಿಕಾ ವಿದ್ಯಾಲಯದ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಈಜು ಸ್ಪರ್ಧೆ, ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಮುಖ್ಯವೇ ಹೊರತು ಬಹುಮಾನವಲ್ಲ; ಶಿವರಾಮ ಅಳ್ವ.-ಕಹಳೆ ನ್ಯೂಸ್

ಪುತ್ತೂರು : ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಅಂಬಿಕಾ ವಿದ್ಯಾಲಯಗಳ ಜಂಟಿ ಆಶ್ರಯದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯು ದಿನಾಂಕ 14-03-2021 ರಂದು ಡಾ. ಶಿವರಾಮ ಕಾರಂತ ಈಜುಕೊಳ, ಬಾಲವನ ಪುತ್ತೂರು ಇಲ್ಲಿ ನಡೆಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದ ಉದ್ಯಮಿಗಳಾದ ಶಿವರಾಮ ಆಳ್ವ ಈ ಈಜು ಸ್ಪರ್ಧೆಯು ಕ್ರೀಡಾಳುಗಳಿಗೆ ನವೋಲ್ಲಾಸ ತಂದಿದೆ. ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಮುಖ್ಯವಾಗಿದ್ದು, ಕೇವಲ ಬಹುಮಾನವೇ ಅಲ್ಲ ಎಂದು ಹೇಳಿದರು. ಅಂಬಿಕಾ ವಿದ್ಯಾಲಯದ ಸಂಚಾಲಕರಾದ ಸುಬ್ರಮಣ್ಯ ನಟ್ಟೋಜ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕೊರೋನಾದ ಈ ಸಮಯದಲ್ಲೂ ಈಜುಸ್ಪರ್ಧೆಯನ್ನು ಆಯೋಜಿಸಲು ಅಂಬಿಕಾ ಸಂಸ್ಥೆಗೆ ಅವಕಾಶ ದೊರಕಿದ್ದು ಸ್ವಾಗತಾರ್ಹವಾದದು ಎಂದರು. ಅಧ್ಯಕ್ಷತೆ ವಹಿಸಿದ ವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ಸುರೇಶ್ ಶೆಟ್ಟಿ ಮಾತನಾಡಿ, ಈಜುಸ್ಪರ್ಧೆ ಎಲ್ಲಾ ಕ್ರೀಡೆಗಳಿಗಿಂತಲೂ ಕಷ್ಟಕರವಾಗಿದ್ದು, ದೈಹಿಕ ಹಾಗೂ ಮಾನಸಿಕ ಹೊಂದಾಣಿಕೆ ಇರಬೇಕಾದುದು ಇಲ್ಲಿ ಅತ್ಯಗತ್ಯ ಎಂದರು. ವೇದಿಕೆಯಲ್ಲಿ ವಿದ್ಯಾಲಯದ ಪ್ರಾಂಶುಪಾಲರಾದ ರಾಜಶ್ರೀ ಎಸ್ ನಟ್ಟೋಜ , ದೈಹಿಕ ಶಿಕ್ಷಕರಾದ ರಾಮಕೃಷ್ಣ ರಾವ್ ಹಾಗೂ ವಸಂತ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾಲಯದ ಉಪಪ್ರಾಂಶುಪಲರಾದ ಸತ್ಯಜಿತ್ ಉಪಧ್ಯಾಯ ಸ್ವಾಗತಿಸಿ, ವಂದಿಸಿದರು. ಗಣಿತಶಾಸ್ತ್ರ ಉಪನ್ಯಾಸಕರಾದ ತಿಲೋಶ್ ಕಾರ್ಯಕ್ರಮ ನಿರೂಪಿಸಿದರು.