ಕೋಝಿಕ್ಕೋಡು : ಕೇರಳದ ಕೋಝಿಕ್ಕೋಡು ಜಿಲ್ಲೆಯ ಕೊಯಿಲಾಂಡಿ ಸಮೀಪ ಚೆಲಿಯಾ ಎಂಬಲ್ಲಿ ಇಂದು ಬೆಳಗ್ಗೆ ಕಥಕ್ಕಳಿ ಮಾಂತ್ರಿಕ 105 ವರ್ಷದ ಚೆಮಂಚೇರಿ ಕುನ್ಹಿರಾಮನ್ ನಾಯರ್ ಅವರು ಕೊನೆಯುಸಿಳೆದಿದ್ದಾರೆ.
ಕುನ್ಹಿರಾಮನ್ ಅವರು ತನ್ನ 90 ವರ್ಷ ಪ್ರಾಯದವರೆಗೂ ಕಥಕ್ಕಳಿ ನೃತ್ಯ ಮಾಡುತ್ತಿದ್ದು, ಕೃಷ್ಣ ಹಾಗೂ ಕುಚೇಲ ಪಾತ್ರಗಳು ಬಹಳ ಪ್ರಖ್ಯಾತವಾಗಿದ್ದವು. ಇನ್ನು ಅವರು 100ನೇ ವಯಸ್ಸಿನಲ್ಲಿ ಕೋಝಿಕ್ಕೋಡುನಲ್ಲಿ ಗುರು ಪರಶುರಾಮ ಪಾತ್ರವನ್ನು ನೃತ್ಯ ಮಾಡಿದ್ದು, ಅದುವೇ ಅವರ ಕೊನೆಯ ಸಾರ್ವಜನಿಕ ಕಾರ್ಯಕ್ರಮವಾಗಿತ್ತು ಎನ್ನಲಾಗಿದೆ. ಚೆಮಂಚೇರಿ ಕುನ್ಹಿರಾಮನ್ ನಾಯರ್ ಅವರು ನಾಲ್ಕನೇ ತರಗತಿಯವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದ್ದು, ಬಳಿಕ ಕಥಕ್ಕಳಿ ಕಲಿಯಬೇಕೆಂಬ ಉದ್ದೇಶದಿಂದ ಮನೆ ಬಿಟ್ಟು ಓಡಿಹೋಗಿ, 1944ರಲ್ಲಿ ಕಣ್ಣೂರಿನಲ್ಲಿ ಭಾರತೀಯ ನೃತ್ಯ ಕಲಾಲಯಂ ಎಂಬ ಸಾಂಪ್ರದಾಯಿಕ ನೃತ್ಯ ಕಲಿಕೆ ಶಾಲೆಯನ್ನು ಆರಂಭಿಸಿದ್ದರು.