Sunday, November 24, 2024
ಹೆಚ್ಚಿನ ಸುದ್ದಿ

“ಜೀವನ ಮೌಲ್ಯಗಳನ್ನು ತಿಳಿಸಬೇಕಾದುದು ಶಾಲೆಯ ಕರ್ತವ್ಯ”; ಡಾ. ಪ್ರಭಾಕರ್ ಭಟ್ ಕಲ್ಲಡ್ಕ -ಕಹಳೆ ನ್ಯೂಸ್

ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಗೆ ನೂತನವಾಗಿ ಸೇರ್ಪಡೆಗೊಂಡ ವಿದ್ರ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮವು ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅತಿಥಿ ಗಣ್ಯರಿಂದ ಭಾರತ ಮಾತೆಗೆ ದೀಪ ಪ್ರಜ್ವಲನೆಯ ಮೂಲಕ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕ ತಮ್ಮ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ “ಜೀವನ ಮೌಲ್ಯಗಳನ್ನು ತಿಳಿಸಬೇಕಾದುದು ಶಾಲೆಯ ಕರ್ತವ್ಯ. ಈ ಶಾಲೆಯು ಭಾರತೀಯ ಸನಾತನ ಮಾದರಿಯ ಶಿಕ್ಷಣವನ್ನು ಮಗುವಿಗೆ ಕೊಡುವ ಧ್ಯೇಯವನ್ನು ಇಟ್ಟುಕೊಂಡು ಮುಂದುವರಿಸುತ್ತಾ ಬಂದಿದೆ. ಇಲ್ಲಿ ರಾಷ್ಟ್ರೀಯತೆಯನ್ನು ಕಲಿಸಿಕೊಡುತ್ತದೆ. ಕನ್ನಡವನ್ನು ಮೂಲೆ ಗುಂಪಾಗಿಸುತ್ತಿರುವ ಈ ಕಾಲಘಟ್ಟದಲ್ಲಿ ಶ್ರೀರಾಮ ಶಾಲೆಯು 1000 ಕ್ಕೂ ಅಧಿಕ ಮಕ್ಕಳನ್ನು ಹೊಂದಿ ಭಾಷಾ ಮಾಧ್ಯಮದಲ್ಲೆ ಹೆಚ್ಚು ಮಕ್ಕಳನ್ನು ಹೊಂದಿದ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.” ಎಂದರು. ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡ ಅಧ್ಯಾಪಕ ವೃಂದದವರು ಅವರಿಗೆ ಆರತಿ, ಅಕ್ಷತೆ ಹಾಗೂ ತಿಲಕಧಾರಣೆ ಮಾಡಿ ಸಿಹಿ ನೀಡಿದರು. ಹೊಸದಾಗಿ ಸೇರಿದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಘೃತಾಹುತಿಯನ್ನು ಮಾಡಿದ ನಂತರ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಹಿರಿಯರಿಂದ ಆರ್ಶೀವಾದ ಪಡೆದರು. ಕಾರ್ಯಕ್ರಮದ ಮೊದಲಿಗೆ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನವು ನಡೆಯಿತು.

ನಂತರ 2019-20ನೇ ಶೈಕ್ಷಣಿಕ ವರುಷದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಬೆನ್ನು ಮೂಳೆ ತಜ್ಞರಾದ ಡಾ| ಈಶ್ವರ ಕೀರ್ತಿ, ಕುಂದಾಪುರ ತಾಲೂಕಿನ ಬೆಳ್ವೆಯ ಉದ್ಯಮಿಗಳು ಶ್ರೀ ಗಣೇಶ್ ಕಿಣಿ, ಬೆಳ್ವೆ, ಹಾಸನದ ವಕೀಲರಾಗಿ ಕಾರ್ಯನಿರ್ವಹಿಸುತ್ತಿರುವ ನಾಗರಾಜ ಆಲೂರು, IT World ಬೆಂಗಳೂರು ಇದರ ನಿರ್ದೇಶಕರಾದ ಮಂಜುನಾಥ ವಿ., ನವಮಂಗಳೂರು ಬಂದರು ಇದರ ಆಡಳಿತ ಮಂಡಳಿಯ ಸಹಾಯಕ ನಿರ್ದೇಶಕರಾದ ಪ್ರಾಂಜಲ್ ಸುಧೀರ್ ಘಾಟೆ, ಉದ್ಯಮಿಗಳಾದ ರಾಜೇಶ್ ಶ್ಯಾನ್‍ಬಾಗ್ ಮಣಿಕರ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಉನ್ನತ ಶಿಕ್ಷಣ ಇಲಾಖೆ ಕರ್ನಾಟಕ, ಇಲ್ಲಿನ ಸಹಾಯಕ ಪ್ರಾಧ್ಯಾಪಕರಾದ ಡಾ| ಶೈಲಜಾ ವಿ, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಾಯಾಜಿ, ಸಂಚಾಲಕರಾದ ವಸಂತ ಮಾಧವ, ಸಹಸಂಚಾಲಕರಾದ ರಮೇಶ್, ಆಡಳಿತ ಮಂಡಳಿಯ ಸದಸ್ಯರಾದ ಕಮಲಾ ಪ್ರಭಾಕರ್ ಭಟ್, ಹಾಗೂ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಭೂಷಣ್ ಹಾಗೂ ಆದಿಶ್ರೀ ನಿರೂಪಿಸಿ, ವಾಸವಿ ಸ್ವಾಗತಿಸಿ, ದೀಕ್ಷಾ ಧನ್ಯವಾದ ಸಮರ್ಪಿಸಿದರು.