ಪಡುಬಿದ್ರೆ ಟೋಲ್ ಗೇಟ್ ಸಮಸ್ಯೆ ಪರಿಹರಿಸಿ, ಟೋಲ್ ವಿನಾಯಿತಿ ನೀಡುವಂತೆ ಒತ್ತಾಯಿಸಿ, ಸರ್ವಿಸ್ ಮಾಲಕರ ಸಂಘದ ಪ್ರತಿಭಟನೆ-ಕಹಳೆ ನ್ಯೂಸ್
ಪಡುಬಿದ್ರೆ : ಪಡುಬಿದ್ರಿ ಗ್ರಾಮಾಂತರ ಪ್ರದೇಶಗಳಿಗೆ ಸಂಚರಿಸುವ ಬಸ್ ಗಳ ಸೇವೆಯನ್ನು ನಿಲ್ಲಿಸಿ, ಪಡುಬಿದ್ರೆ ಟೋಲ್ ಗೇಟ್ ಸಮಸ್ಯೆ ಪರಿಹರಿಸಿ, ಟೋಲ್ ವಿನಾಯಿತಿ ನೀಡುವಂತೆ ಒತ್ತಾಯಿಸಿ, ಸರ್ವಿಸ್ ಮಾಲಕರ ಸಂಘವು ಪ್ರತಿಭಟನೆ ನಡೆಸುತ್ತಿದೆ.
ಸ್ಥಳೀಯ ಸರ್ವಿಸ್ ಬಸ್ಗಳಿಗೆ ಟೋಲ್ ವಿನಾಯಿತಿ ನೀಡುವಂತೆ ಒತ್ತಾಯಿಸಿ ಸರ್ವಿಸ್ ಬಸ್ ಸಂಚಾರವನ್ನು ಬಂದ್ ಮಾಡಿ ಅನಿರ್ದಿಷ್ಟ ಅವಧಿಯವರೆಗೆ ಪ್ರತಿಭಟಿಸಲಾಗುತ್ತಿದೆ. ಈ ಪ್ರದೇಶದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 26 ಬಸ್ಗಳ ಸಂಚಾರವನ್ನು ನಿಲ್ಲಿಸಲಾಗಿದೆ. ಈ ಸಮಸ್ಯೆ ಬಗೆಹರಿಯದಿದ್ದರೆ, ನಾಳೆಯಿಂದ ಲಿಮಿಟೆಡ್ ಸ್ಟಾಪ್ ಬಸ್ ನ ನಿಲುಗಡೆ ವಿಚಾರವನ್ನು ತುರ್ತು ಸಭೆ ಕರೆದು ಚರ್ಚಿಸಲಾಗುತ್ತದೆ ಎಂದು ಬಸ್ ಮಾಲಕರು ತಿಳಿಸಿದ್ದಾರೆ.