ಬಂಟ್ವಾಳ : ದೇಶದಲ್ಲಿ ಮತಾಂತರ ಮತ್ತು ಲವ್ ಜಿಹಾದ್ ಮತ್ತಿತರ ಸಮಾಜಘಾತುಕ ಕೃತ್ಯಗಳನ್ನು ತಡೆದು ಸಮಸ್ತ ಹಿಂದೂ ಸಮಾಜವು ಹೃದಯದಿಂದ ಒಂದಾಗಿ ಬೆರೆತು ಸಂಘಟಿತರಾದಾಗ ದೇಶ ಬಲಿಷ್ಟವಾಗುತ್ತದೆ ಎಂದು ಗುರುಪುರ ವಜ್ರದೇಹಿ ರಾಜಶೇಖರಾನಂದ ಸ್ವಾಮೀಜಿ ಹೇಳಿದ್ದಾರೆ.
ಇಲ್ಲಿನ ಪಂಜಿಕಲ್ಲು ಪದವು ಮೈದಾನದಲ್ಲಿ ಸುವರ್ಣನಾಡು ಹಿಂದೂ ಜಾಗರಣ ವೇದಿಕೆ ವತಿಯಿಂದ ಭಾನುವಾರ ಸಂಜೆ ಏರ್ಪಡಿಸಿದ್ದ ‘ ಹಿಂದೂ ಹೃದಯ ಸಂಗಮ’ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಸುವರ್ಣನಾಡು ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ರಾಜೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆ ಮುಖಂಡ ದಿನಕರ ಗುರುವಾಯನಕೆರೆ ದಿಕ್ಸೂಚಿ ಭಾಷಣ ಮಾಡಿದರು. ಪ್ರಸಕ್ತ ಸಮಾಜದಲ್ಲಿ ಮತಾಂತರ ಮತ್ತು ಲವ್ ಜಿಹಾದ್ ಜೊತೆಗೆ ‘ರಾಜಕೀಯ ಜಿಹಾದ್’ ಆರಂಭಗೊಂಡಿದೆ ಎಂದು ಎಚ್ಚರಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ, ಮುಖಂಡ ಜಗದೀಶ ನೆತ್ರಕೆರೆ ಶುಭ ಹಾರೈಸಿದರು. ದೀಕ್ಷಾ ಸ್ವಾಗತಿಸಿ, ಅಶ್ವಿನಿ ಪ್ರಾಸ್ತಾವಿಕ ಮಾತನಾಡಿದರು. ಶರಣ್ ವಂದಿಸಿ, ದಿನೇಶ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಇದೇ ವೇಳೆ ಸಸಿಹಿತ್ಲು ಭಗವತಿ ಮೇಳದಿಂದ ‘ಕಂಚಿಲ್ದ ಪರಕೆ’ ಯಕ್ಷಗಾನ ಪ್ರದರ್ಶನಗೊಂಡಿತು.