Sunday, November 24, 2024
ಸುದ್ದಿ

ಮುಸ್ಲಿಂ ಮಗುವಿಗೆ ಕೊರಗಜ್ಜನ ಅಭಯ…!-ಕಹಳೆ ನ್ಯೂಸ್

ಮಂಗಳೂರು : ಮುಸ್ಲಿಂ ಬಾಲಕರ್ನೊವನಿಗೆ ಕೊರಗಜ್ಜ ಅಭಯ ನೀಡುವ ದೃಶ್ಯ ಕರಾವಳಿಯಾದ್ಯಂತ ಭಾರೀ ವೈರಲ್ ಆಗಿದೆ. ಪುಟ್ಟ ಬಾಲಕರ್ನೊವ ಅನಾರೋಗ್ಯಕ್ಕೆ ತುತ್ತಾಗಿದ್ದು, ಈ ಮಗುವನ್ನ ಆ ಮುಸ್ಲಿಂ ಕುಟುಂಬ ಕೊರಗಜ್ಜನ ಮಡಿಲಿಗೆ ಹಾಕಿ ಬಾಲಕನಿಗಿರುವ ಖಾಯಿಲೆಯನ್ನ ಗುಣಪಡಿಸಬೇಕೆಂದು ಪ್ರಾರ್ಥಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಎಲ್ಲೂ ಗುಣವಾಗದ ಕಾರಣ ಆ ಮುಸ್ಲಿಂ ಕುಟುಂಬ ಕೊರಗಜ್ಜನಿಗೆ ಹರಕೆ ಹೇಳಿ ಮಗುವಿನ ಕಷ್ಟವನ್ನ ದೂರಮಾಡಿ ಆರೋಗ್ಯವಂತನಾಗಲು ಪ್ರಾರ್ಥಿಸಿದ್ದು, ಇದೀಗ ಆ ಮಗುವಿಗೆ ಆರ್ಶೀವಾದಿಸಿರುವ ಕೊರಗಜ್ಜ ಮಗುವನ್ನ ಆರೋಗ್ಯವಂತನಾಗಿ ಮಾಡಿ ಇಡೀ ಕುಟುಂಬವನ್ನ ಬೆಳಗುವಂತೆ ಮಾಡುತ್ತೇನೆ ಅಂತ ಅಭಯ ನೀಡಿದ್ದಾನೆ. ಇಲ್ಲಿ ಜಾತಿ-ಮತದ ಪ್ರಶ್ನೆಯಲ್ಲ ದೇವರು ಎಲ್ಲರಿಗೂ ಒಂದೇ ಆ ಅಲ್ಲಾಹುನು ಈಶ್ವರನೂ ಬೇರೆಯಲ್ಲ ಮನುಷ್ಯ ಜಾತಿಯಾದ ನಮ್ಮಲ್ಲಿರುವ ಜಾತಿಯ ವಿಷ ಬೀಜವನ್ನ ಕಿತ್ತು ಹಾಕಬೇಕಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು