Monday, January 20, 2025
ಉಡುಪಿ

ಬಸ್ಸಿನಲ್ಲಿ ರಂಪಾಟ ಮಾಡುತ್ತಿದ್ದ ಮಾನಸಿಕ ಅಸ್ವಸ್ಥ ವೃದ್ಧೆಯನ್ನ ರಕ್ಷಿಸಿದ ವಿಶು ಶೆಟ್ಟಿ ಅಂಬಲಪಾಡಿ-ಕಹಳೆ ನ್ಯೂಸ್

ಉಡುಪಿ : ಸಿಟಿ ಬಸ್ಸಿನಲ್ಲಿ ಸಾರ್ವಜನಿಕರ ಮೇಲೆ ವಿನಾಕಾರಣ ಹಲ್ಲೆ ನಡೆಸುತ್ತಿದ್ದ ಅಪರಿಚಿತ ಮಾನಸಿಕ ಅಸ್ವಸ್ಥ ವೃದ್ಧೆಯನ್ನ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ರಕ್ಷಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಅಪರಿಚಿತ ಮಾನಸಿಕ ಅಸ್ವಸ್ಥ ವೃದ್ಧೆಯೊರ್ವರು, ಬಸ್ಸಿನಿಂದ ಇಳಿಯಲು ಕೇಳದೆ ರಂಪಾಟ ನಡೆಸಿದ್ದಾಳೆ. ಈ ಬಗ್ಗೆ ನಿರ್ವಾಹಕ ವಿಶು ಶೆಟ್ಟಿ ಅವರಿಗೆ ಮಾಹಿತಿ ನೀಡಿದ್ದು, ತಕ್ಷಣ ವಿಶು ಶೆಟ್ಟಿ ಅವರು ಮಹಿಳಾ ಪೊಲೀಸರ ಸಹಕಾರದಿಂದ ವೃದ್ಧೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಾರ್ಯಚರಣೆಯ ವೇಳೆ ವೃದ್ಧೆ ರಕ್ಷಣಕಾರರ ಮೇಲೆ ಹಲ್ಲೆಯನ್ನು ನಡೆಸಿದ್ದಾಳೆಂದು ತಿಳಿದು ಬಂದಿದೆ. ವೃದ್ಧೆ ಸುಶೀಲಾ ನಾಯಕ್ ಒಂತಿ ಬೆಟ್ಟುವಿನ ನಿವಾಸಿ ಎಂದು ತಿಳಿದುಬಂದಿದ್ದು, ಸಂಬಂಧಿಕರು ತುರ್ತಾಗಿ ದೊಡ್ಡಣಗುಡ್ಠೆ ಡಾ ಎ ವಿ ಬಾಳಿಗ ಆಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.