Recent Posts

Monday, April 14, 2025
ಹೆಚ್ಚಿನ ಸುದ್ದಿ

ಕೊಯಿಲ ಗ್ರಾಮದ ಸಬಳೂರು ಸರ್ಕಾರಿ ಶಾಲಾ ಬಳಿಯ ರಬ್ಬರ್ ತೋಟಕ್ಕೆ ಬೆಂಕಿ-ಕಹಳೆ ನ್ಯೂಸ್

ರಾಮಕುಂಜ : ಕೊಯಿಲ ಗ್ರಾಮದ ಸಬಳೂರು ಸರ್ಕಾರಿ ಶಾಲಾ ಪಕ್ಕದ ಖಾಸಗಿ ವ್ಯಕ್ತ್ತಿಯೋರ್ವರ ರಬ್ಬರ್ ತೋಟಕ್ಕೆ ಮಾರ್ಚ್ 15ರಂದು ಸಂಜೆ ಆಕಸ್ಮಿಕವಾಗಿ ಬೆಂಕಿ ತಗುಲಿ ರಬ್ಬರ್ ಗಿಡಗಳಿಗೆ ಹಾನಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಬ್ಬರ್ ತೋಟದ ಪಕ್ಕದಲ್ಲಿ ಹಾದು ಹೋಗಿರುವ ವಿದ್ಯುತ್ ಲೈನ್‍ನಲ್ಲಿರುವ ಚೇಂಜ್ ಓವರ್ ಸ್ವಿಚ್ ಬಳಿ ಬೆಂಕಿ ಕಾಣಿಸಿಕೊಂಡು ಈ ಘಟನೆ ನಡೆದಿದೆ ಎನ್ನಲಾಗಿದೆ. ಕೊಯಿಲ ಗ್ರಾ.ಪಂ ಸದಸ್ಯ ಚಿದಾನಂದ ಪಾನ್ಯಾಲು ನೇತೃತ್ವದಲ್ಲಿ ಸ್ಥಳೀಯರ ತಂಡ ಬೆಂಕಿ ನಂದಿಸಲು ಪ್ರಯತ್ನಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದರು. ಬಳಿಕ ಆಗಮಿಸಿದ ಅಗ್ನಿ ಶಾಮಕದಳ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದರು. ಮೆಸ್ಕಾಂ ಸಿಬ್ಬಂದಿ ವಿಶ್ವನಾಥ ರಾಮಕುಂಜ ಸಹಕರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ