Tuesday, January 21, 2025
ಹೆಚ್ಚಿನ ಸುದ್ದಿ

ಕುಂಭಮೇಳದ ಹಿನ್ನಲೆ ಕೋವಿಡ್-19 ಶಿಷ್ಠಾಚಾರ ಪಾಲನೆ ಪರಾಮರ್ಶೆಗೆ ಉನ್ನತ ಮಟ್ಟದ ಕೇಂದ್ರ ಸಮಿತಿ ರಚನೆ-ಕಹಳೆ ನ್ಯೂಸ್

ರಾಷ್ಟ್ರೀಯ ಕೇಂದ್ರ ನಿರ್ದೇಶಕ ಡಾ. ಎಸ್. ಕೆ. ಸಿಂಗ್ ನೇತೃತ್ವದಲ್ಲಿ ಹರಿದ್ವಾರದಲ್ಲಿ ಏಪ್ರಿಲ್ 1ರಂದು ಪ್ರಾರಂಭವಾಗಲಿರುವ ಕುಂಭ ಮೇಳದ ಹಿನ್ನೆಲೆ ಕೋವಿಡ್-19 ಶಿಷ್ಠಾಚಾರಗಳನ್ನು ಸರಿಯಾಗಿ ಪಾಲಿಸಲಾಗುತ್ತಿದೆಯೇ ಎಂದು ತಪಾಸಣೆ ನಡೆಸಲು ಉನ್ನತ ಮಟ್ಟದ ಕೇಂದ್ರ ಸಮಿತಿಯನ್ನು ನೇಮಕ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಡಾ. ಎಸ್. ಕೆ. ಸಿಂಗ್ ನೇತೃತ್ವದ ತಂಡ ಇಂದು ಹರಿದ್ವಾರಕ್ಕೆ ಹೊರಡಲಿದ್ದು, ಕೋವಿಡ್-19 ಹಿನ್ನೆಲೆ ಕುಂಭ ಮೇಳ ಸಂದರ್ಭದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಹಾಗೂ ವೈದ್ಯಕೀಯ ನೆರವಿನ ಬಗ್ಗೆ ಹೇಗೆ ವ್ಯವಸ್ಥೆ ಮಾಡಲಾಗಿದೆ ಎಂದು ಪರಾಮರ್ಶೆ ನಡೆಸಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು