Sunday, November 24, 2024
ಹೆಚ್ಚಿನ ಸುದ್ದಿ

ಕುದ್ಮಾರುನಲ್ಲಿ ಕ್ರೀಡಾಂಗಣಕ್ಕೆ ಕಾಯ್ದಿರಿಸಿದ್ದ ಜಾಗದಲ್ಲಿ ಇರುವ ಕಟ್ಟಡ ತೆರವುಗೊಳಿಸುವಂತೆ ಕುದ್ಮಾರು ಸ್ಕಂದಶ್ರೀ ಯುವಕ ಮಂಡಲದ ಪದಾಧಿಕಾರಿಗಳಿಂದ ಗ್ರಾ.ಪಂ ಗೆ ಮನವಿ-ಕಹಳೆ ನ್ಯೂಸ್

ಕಾಣಿಯೂರು : ಕುದ್ಮಾರು ಸ್ಕಂದಶ್ರೀ ಯುವಕ ಮಂಡಲದ ಪದಾಧಿಕಾರಿಗಳು ಕುದ್ಮಾರು ಸಮೀಪ 2.5 ಎಕ್ರೆ ಜಾಗವನ್ನು ಕ್ರೀಡಾಂಗಣಕ್ಕೆ ಕಾಯ್ದಿರಿಸಿದ್ದು, ಅತಿಕ್ರಮಣ ಕಟ್ಟಡವನ್ನು ತೆರವುಗೊಳಿಸಿ ಹಾಗೂ ಯಾವುದೇ ಕಟ್ಟಡ ರಚನೆಗೆ ಅನುಮತಿ ನೀಡದಂತೆ ಬೆಳಂದೂರು ಗ್ರಾ.ಪಂ.ಗೆ ಮನವಿ ಸಲ್ಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಮೂಲಕ ಸ.ನಂ. 170/1ರಲ್ಲಿ 2.5 ಎಕ್ರೆ ಜಾಗವನ್ನು ಕ್ರೀಡಾಂಗಣಕ್ಕೆ ಕಾಯ್ದಿರಿಸಲಾಗಿದೆ. ಕಾಯ್ದಿರಿಸಿದ ಪ್ರಕಾರ ಕಂದಾಯ ಇಲಾಖೆಯ ಆದೇಶದಂತೆ ಕ್ರೀಡಾಂಗಣದ ಜಾಗವನ್ನು ಸರ್ವೆಗೊಳಿಸಿ ಅತಿಕ್ರಮಣದ ವರದಿ ಸಲ್ಲಿಕೆಯನ್ನು ತಯಾರಿಸಲಾಗಿದೆ. ಜಿಲ್ಲಾಧಿಕಾರಿಗಳ ಆದೇಶದಂತೆ ಸಹಾಯಕ ಆಯುಕ್ತರಿಗೆ ಅತಿಕ್ರಮಣ ತೆರವಿಗಾಗಿ ಆದೇಶಿಸಿರುತ್ತಾರೆ ಎಂದು ಅಧ್ಯಕ್ಷರಿಗೆ ನೀಡಿರುವ ಮನವಿಯಲ್ಲಿ ಪ್ರಸ್ತಾಪಿಸಲಾಗಿದ್ದು, ಕ್ರೀಡಾಂಗಣಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಮನವಿ ಜೊತೆ ಸಲ್ಲಿಸಿದ್ದಾರೆ. ಗ್ರಾ.ಪಂ. ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟರವರು ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷ ದೇವರಾಜ ನೂಜಿ, ಕಾರ್ಯದರ್ಶಿ ಪದ್ಮನಾಭ ಕೆರೆನಾರು, ಸದಸ್ಯರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು