Monday, January 20, 2025
ಹೆಚ್ಚಿನ ಸುದ್ದಿ

ಗದಗದಲ್ಲಿ ಅಶ್ಲೀಲವಾಗಿ ಬೈದಾಡುತ್ತಿದ್ದ ವ್ಯಕ್ತಿಯೋರ್ವನ ಸರ್ಕಾರಿ ಕಚೇರಿಯ ಮುಂದೆಯೇ ಭೀಕರ ಕೊಲೆ !-ಕಹಳೆ ನ್ಯೂಸ್

ಗದಗ : ನಗರದ ಬೆಟಗೇರಿಯ ಕುರಹಟ್ಟಿ ಪೇಟೆನಲ್ಲಿ ಯುವಕನೋರ್ವ ಅಶ್ಲೀಲವಾಗಿ ಬೈದಾಡುತ್ತಿದ್ದ ಸಂಬಂಧಿಯನ್ನು ಬರ್ಬರವಾಗಿ ಕೊಲೆಗೈದ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕುರಹಟ್ಟಿ ಪೇಟೆ ನಿವಾಸಿ 23 ವರ್ಷದ ಪ್ರವೀಣ್ ಗದುಗಿನ ತನ್ನ ಸಂಬಂಧಿಯಾದ 44 ವರ್ಷದ ಮಂಜುನಾಥ್ ಗದುಗಿನ ನನ್ನು ಕೊಲೆ ಮಾಡಿದ್ದಾನೆ. ಮಂಜುನಾಥ್ ಆಗಾಗ ಪ್ರವೀಣ್ ಮನೆ ಬಳಿ ಬಂದು ಅಶ್ಲೀಲವಾಗಿ ಬೈದಾಡುತ್ತಿದ್ದ. ಮಂಗಳವಾರ ರಾತ್ರಿ ಸಹ ಮಂಜುನಾಥ್ ಬೈದಾಡುತ್ತಿದ್ದ. ಇದರಿಂದ ಕೋಪಗೊಂಡ ಪ್ರವೀಣ್ ಆತನ ಕುತ್ತಿಗೆಗೆ ಚಾಕು ಹಾಕಿ ಕೊಲೆಗೈದು ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ. ಬೆಟಗೇರಿ ನಾಡ ಕಾರ್ಯಾಲಯ ಬಳಿ ಈ ಭೀಕರ ಹತ್ಯೆ ನಡೆದಿದ್ದು, ಸ್ಥಳೀಯರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಬೆಟಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬೆಟಗೇರಿ ಠಾಣೆ ಪೊಲೀಸರು ನಾಪತ್ತೆಯಾದ ಆರೋಪಿಗೆ ಬಲೆ ಬೀಸಿದ್ದಾರೆ

ಜಾಹೀರಾತು
ಜಾಹೀರಾತು
ಜಾಹೀರಾತು