Monday, January 20, 2025
ಸುಬ್ರಹ್ಮಣ್ಯ

ಸುಬ್ರಹ್ಮಣ್ಯ ಇಲ್ಲಿನ ಅಸಹಾಯಕ ವಯೋವೃದ್ಧೆಯ ಮನೆ ದುರಸ್ತಿ ಮಾಡಿದ ವಿಪತ್ತು ನಿರ್ವಹಣಾ ತಂಡ-ಕಹಳೆ ನ್ಯೂಸ್

ಸುಬ್ರಹ್ಮಣ್ಯ : ಇಲ್ಲಿನ ವಲಯ ವಿಪತ್ತು ನಿರ್ವಹಣೆ ಘಟಕದವರಿಂದ ಕೊಲ್ಲಮೊಗ್ರು ಗ್ರಾಮದ ಕಟ್ಟದಲ್ಲಿರುವ ಯೋವೃದ್ಧೆಯ ಮನೆ ದುರಸ್ತಿ ಮಾಡಿ ಮಾದರಿ ಕಾರ್ಯ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾನಿಕ ಎಂಬ ಅಸಹಾಯಕ ವಯೋವೃದ್ಧೆಯ ಮನೆಯ ಛಾವಣಿ ಮಾಡಿದ್ದು ಮುಂಜಾನೆ ಬೆಳಗ್ಗೆ 8.30 ರಿಂದ ರಾತ್ರಿ 8.00 ಗಂಟೆ ವರೆಗೆ ಕೆಲಸ ಮಾಡಿದ್ದಾರೆ. ವಿಪತ್ತು ನಿರ್ವಹಣೆ ಘಟಕದ ಸಂಯೋಜಕರಾದ ಸತೀಶ್ ಟಿ ಎನ್, ಮಣಿಕಂಠ ಕಟ್ಟ, ಮತ್ತು ಲಕ್ಷ್ಮಣ ಐನೆಕಿದು, ಕುಸುಮಾಧರ ಪಿ, ಯಶವಂತ, ಚಂದ್ರಶೇಖರ ಕೊನಡ್ಕ, ಮುತ್ತಪ್ಪ ಕೆ, ಸದಾಶಿವ ಕಟ್ಟ, ಶ್ರೀನಿವಾಸ, ಕುಶಾಲಪ್ಪ ಜಾಲುಮನೆ, ಬಾಲಸುಬ್ರಹ್ಮಣ್ಯ, ಅಶೋಕ ಮಿತ್ತೋಡಿ, ಜಯಪ್ರಕಾಶ ಕಲ್ಲೇರಿಕಟ್ಟ , ಕೆ. ಹರ್ಷ ಅಡ್ನೂರು ಇವರುಗಳು ಶ್ರಮಸೇವೆ ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು