Monday, January 20, 2025
ಹೆಚ್ಚಿನ ಸುದ್ದಿ

ಸರ್ಕಾರಿ ಆಸ್ಪತ್ರೆಯ ಮುಂದೆ ನವಜಾತ ಶಿಶುವಿನ ಮೃತದೇಹವನ್ನು ಕಚ್ಚಿ ಎಳೆದಾಡಿದ ಬೀದಿ ನಾಯಿಗಳು-ಕಹಳೆ ನ್ಯೂಸ್

ಭುವನೇಶ್ವರ : ಸರ್ಕಾರಿ ಆಸ್ಪತ್ರೆಯ ಮುಂದೆ ನವಜಾತ ಶಿಶುವಿನ ದೇಹವನ್ನು ಬೀದಿ ನಾಯಿಗಳು ಕಚ್ಚಿ ಎಳೆದಾಡಿದ ಘಟನೆ ಹೃದಯ ವಿದ್ರಾವಕ ನಡೆದಿದೆ. ಈ ಘಟನೆ ಒಡಿಶಾದ ಭದ್ರಾಕ್ ಜಿಲ್ಲಾ ಕೇಂದ್ರದಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಂತರ ಬೀದಿ ನಾಯಿಗಳನ್ನು ಸ್ಥಳೀಯರು ಬೆನ್ನಟ್ಟಿ ಶವವನ್ನು ವಶಪಡಿಸಿಕೊಂಡಿದ್ದು, ಜನರು ನಾಯಿಗಳನ್ನು ಬೆನ್ನಟ್ಟುತ್ತಿದ್ದಂತೆ ಶಿಶುವಿನ ದೇಹವನ್ನು ತ್ಯಜಿಸಿ ಓಡಿಹೋಗಿದೆ ಎಂದು ತಿಳಿದು ಬಂದಿದೆ. ತಾನು ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದಾಗ, ನವಜಾತ ಶಿಶುವಿನ ಮೃತದೇಹವನ್ನು ಬೀದಿ ನಾಯಿಗಳು ಕಚ್ಚಿ ಎಳೆದಾಡುವುದನ್ನು ನೋಡಿರುವುದಾಗಿ ಪ್ರತ್ಯಕ್ಷದರ್ಶಿಯೊಬ್ಬರು ಹೇಳುತ್ತಾರೆ. ನಾನು ಆ ದೃಶ್ಯವನ್ನು ನೋಡಿ ಬೊಬ್ಬೆ ಹಾಕಿ ಅದರ ಹಿಂದೆ ಓಡಿದೆ. ಸ್ವಲ್ಪ ದೂರ ಓಡಿದಾಗ ಬೀದಿ ನಾಯಿಗಳು ನವಜಾತ ಶಿಶುವನ್ನು ತ್ಯಜಿಸಿ ಓಡಿಹೋದವು ಎಂದು ಪ್ರತ್ಯಕ್ಷದರ್ಶಿ ಹೇಳುತ್ತಾರೆ. ಆಸ್ಪತ್ರೆಯಿಂದ ಈ ಎಡವಟ್ಟಾಗಿದೆ ಎಂದು ಆರೋಪಿಸಲಾಗಿದೆ. ಮಗುವಿನ ಮೃತದೇಹವನ್ನು ಆಸ್ಪತ್ರೆಯ ಅಧಿಕಾರಿಗಳು ತೆರೆದ ಸ್ಥಳದಲ್ಲಿ ಬಿಟ್ಟಿದ್ದರು ಎಂದು ವರದಿಯಾಗಿದೆ. ನಂತರ ಶವವನ್ನು ನಾಯಿಗಳು ಎಳೆದುಕೊಂಡು ಹೋಗಿದೆ ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು