Friday, November 22, 2024
ಸುಬ್ರಹ್ಮಣ್ಯ

ಹರಿಹರ : ವೈನ್ ಶಾಪ್ ಗೆ ವಿರೋಧ, ವಿಶೇಷ ಗ್ರಾಮ ಸಭೆಗೆ ನಿರ್ಧಾರ; ಮದ್ಯದಂಗಡಿ, ವಿರೋಧಿ ಸಮಿತಿ ಅಸ್ತಿತ್ವಕ್ಕೆ-ಕಹಳೆ ನ್ಯೂಸ್

ಸುಬ್ರಹ್ಮಣ್ಯ : ಹರಿಹರ ಪಲ್ಲತ್ತಡ್ಕ ಗ್ರಾಮದಲ್ಲಿ ವೈನ್ ಶಾಪ್ ತೆರೆಯಲು ಪ್ರಯತ್ನ ನಡೆಸುತ್ತಿರುವುದರ ಬೆನ್ನಲ್ಲೆ ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಹರಿಹರ ಪಳ್ಳತ್ತಡ್ಕ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ನಾಗರಿಕರು, ಶ್ರೀ ಕ್ಷೇ..ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದವರು ಎಲ್ಲರು ವೈನ್ ಶಾಪ್ ತೆರೆಯುವುದನ್ನು ವಿರೋಧಿಸಿದ್ದು, ಮಂಗಳವಾರ ಶ್ರೀ ಹರಿಹರೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರಮುಖರ ಸಭೆ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಭೆಯಲ್ಲಿ ಪಕ್ಷ ಬೇಧ ಮರೆತು ಎಲ್ಲರು ವೈನ್ ಶಾಪ್ ತೆರೆಯುವುದಕ್ಕೆ ವಿರೋಧ ವ್ಯಕ್ತಪಡಿಸಿದರು 1994ರಲ್ಲಿ ಮದ್ಯದಂಗಡಿ ವಿರೋಧಿ ಹೋರಾಟದ ಅಧ್ಯಕ್ಷರಾಗಿದ್ದ ದುರ್ಗಾದಾಸ್ ಮಲ್ಲಾರ ಅಂದಿನ ಹೋರಾಟಗಳ ಕುರಿತು ಬೆಳಕು ಚೆಲ್ಲಿದರು. ಅಂದು ಎಲ್ಲರ ಸಹಕಾರದಿಂದ ಜಯ ಸಿಕ್ಕಿದೆ. ಅನಂತರದಲ್ಲಿ ಗ್ರಾಮದಲ್ಲಿ ನೆಮ್ಮದಿ ಮೂಡಿದೆ. ಮತ್ತೆ ಅಂತಹ ದಿನಗಳು ಬರದಂತೆ ಎಲ್ಲರು ಸೇರಿ ಇದನ್ನು ವಿರೋಧಿಸಬೇಕಿದೆ ಎಂದರು. ಗ್ರಾ.ಪಂ ಮಾಜಿ ಅಧ್ಯಕ್ಷ ಹಿಮ್ಮತ್ ಕೆ.ಸಿ, ಸತೀಶ್ ಕೂಜುಗೋಡು, ವಿನೂಪ್ ಮಲ್ಲಾರ, ಮಾಧವ ಚಾಂತಳ, ಪ್ರದೀಪ್ ಕುಮಾರ್ ಕೆ. ಎಲ್, ಸತೀಸ್ ಟಿ.ಎನ್ ಮೊದಲಾದವರು ವಿರೋಧ ವ್ಯಕ್ತಪಡಿಸಿ ಮಾತನಾಡಿದರು. ವಿಶೇಷ ಗ್ರಾಮ ಸಭೆ ನಡೆಸುವುದು, ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಸಹಿತ ಹಲವಾರು ವಿಚಾರಗಳ ಕುರಿತು ತೀರ್ಮಾನ ತೆಗೆದುಕೊಳ್ಳಲಾಯಿತು.

ವೇದಿಕೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತಾಲೂಕು ಯೋಜನಾಧಿಕಾರಿ ಸಂತೋಷ್ ಕುಮಾಮಾ ರೈ, ಹಿರಿಯರಾದ ದುರ್ಗಾದಾಸ್ ಮಲ್ಲಾರ, ಹರಿಹರ ಗ್ರಾ.ಪಂ ಅಧ್ಯಕ್ಷ ಜಯಂತ ಬಾಳುಗೋಡು, ಉಪಾಧ್ಯಕ್ಷ ವಿಜಯ ಅಂಞಣ, ಸದಸ್ಯರಾದ ಬಿಂದು ಪಿ. ಕೊಲ್ಲಮೊಗ್ರು ಗ್ರಾ.ಪಂ ಸದಸ್ಯ ಮಾದವ ಚಾಂತಾಳ, ಹರಿಹರ ಕೊಲ್ಲಮೊಗ್ರು ಪ್ರಾ.ಕ್ರ ಪ.ಸಹಕಾರಿ ಸಂಘದ ಅಧ್ಯಕ್ಷ ವಿನೂಪ ಮಲ್ಲಾರ, , ಗ್ರಾ.ಪಂ ಮಾಜಿ ಅಧ್ಯಕ್ಷ ಹಿಮ್ಮತ್ ಕೆ.ಸಿ, ನ್ಯಾಯವಾಧಿ ಪ್ರದೀಪ್ ಕುಮಾರ್ ಕೆ.ಎಲ್, ಜನಜಾಗ್ರತಿ ವೇದಿಕೆಯ ಸತೀಶ್ ಕೂಜುಗೋಡು, ಪುಷ್ಪರಾಜ್ ಪಡ್ಪು, ಗ್ರಾ.ಪಂ ಮಾಜಿ ಅಧಕ್ಷ ಸತೀಶ್ ಟಿ ಎನ್ ಉಪಸ್ಥಿತರಿದ್ದರು. ಮದ್ಯದಂಗಡಿ ವಿರೋಧಿ ಸಮಿತಿ ರಚನೆ ಮಾಡಲಾಯಿತು.

ಗೌರವಾಧ್ಯಕ್ಷ ದುರ್ಗಾದಾಸ್ ಮಲ್ಲಾರ, ಅದ್ಯ್ಯಕ್ಷರಾಗಿ ಹಿಮ್ಮತ್ ಕೆ ಸಿ, ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ, ಜತೆ ಕಾರ್ಯದರ್ಶಿ ಬಿಂದು ಪಿ. ಉಪಾದ್ಯಕ್ಷ ಹಾಗೂ ಕಾನೂನು ಸಲಹೆಗಾರರಾಗಿ ಪ್ರದೀಪ್ ಕೆ. ಎಲ್, ಉಪದ್ಯಕ್ಷರುಗಳಾಗಿ ಸತೀಶ್ ಟಿ ಎನ್, ಚಂದ್ರಹಾಸ ಶಿವಾಲ, ಮಾಧವ ಚಾಂತಳ, ಅನಂತ ಅಂಗಣ,ಜಯರಾಮ ಕರಂಗಲ್ಲು, ನಿತ್ಯಾನಂದ ಭೀಮಗುಳಿ, ಹಾಗು ಗೌರವ ಸಲಹೆಗಾರರಾಗಿ ಪಂಚಾಯತ್ ಹಾಗು ಒಕ್ಕೂಟದ ಎಲ್ಲಾ ಅಧ್ಯಕ್ಷರು ಸದಸ್ಯರುಗಳು ಉಪಸ್ಥಿತರಿದ್ದರು.

ರಾಜ್ಯದಲ್ಲೆ ಗಮನ ಸೆಳೆದ ಗ್ರಾಮ

ಶ್ರೀ ಕ್ಷೇತ್ರ `ಧರ್ಮಸ್ಥಳದ `ಧರ್ಮಾಧಿಕಾರಿ ಡಾ| ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ 1994ರಲ್ಲಿ ಮದ್ಯದಂಗಡಿ ವಿರೋಧಿ ಚಳುವಳಿ ಪ್ರಥಮ ಬಾರಿಗೆ ಈ ಭಾಗದಲ್ಲಿ ನಡೆದಿತ್ತು. ಅಂದು ಭಾರಿ ಹೋರಾಟಗಳು ನಡೆದಿತ್ತು. ಈ ಭಾಗದ ಎಲ್ಲ ಗ್ರಾಮದವರು ಒಗ್ಗಟ್ಟು ಪ್ರದರ್ಶಿಸಿದ್ದರು. ನಾಗರಿಕರ ಹೋರಾಟದ ಲವಾಗಿ 1994 ಜುಲೈ ತಿಂಗಳಿನಿಂದ ಮದ್ಯದಂಗಡಿ ತೆರವುಗೊಂಡಿತ್ತು. ಪ್ರಥಮ ಬಾರಿಗೆ ರಾಜ್ಯದಲ್ಲೆ ಸರಕಾರದ ಲೈಸೆನ್ಸ್ ಪಡೆದ ಮದ್ಯದಂಗಡಿಯನ್ನು ಬಂದ್ ಗೊಳಿಸಿದ ಕೀರ್ತಿ ಎಂಬ ಹೆಗ್ಗಳಿಕೆಯನ್ನು ಗ್ರಾಮ ಪಡೆದಿತ್ತು. ಅನಂತರದಲ್ಲಿ ಊರಿನಲ್ಲಿ ನೆಮ್ಮದಿ ಮೂಡಿತ್ತು.ಇದೀಗ ಮತ್ತೆ ಅಂಗಡಿ ತೆರೆಯುವದಕ್ಕೆ ವ್ಯಾಪಕ ವಿರೋಧ ವ್ಯಕ್ರವಾಗಿದ್ದು, ಯೋಜನೆಯವರು, ಸಾರ್ವಜನಿಕರು ವಿರೋಧ` ವ್ಯಕ್ತಪಡಿಸಿ ಗ್ರಾ.ಪಂಗೆ ಈಗಾಗಲೆ ಮನವಿ ಸಲ್ಲಿಸಿದ್ದಾರೆ.ಹೋರಾಟ ಬಲಗೊಳ್ಳುತ್ತಿದೆ.