Recent Posts

Tuesday, January 21, 2025
ಹೆಚ್ಚಿನ ಸುದ್ದಿ

ಅಮೇರಿಕಾದ ಮೂರು ಪ್ರತ್ಯೇಕ ಸ್ಥಳದಲ್ಲಿ ಬಂದೂಕುಧಾರಿಗಳ ದಾಳಿ ; 8 ಮಂದಿ ಸಾವು-ಕಹಳೆ ನ್ಯೂಸ್

ಅಮೇರಿಕಾದ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಬಂದೂಕುಧಾರಿಗಳು ದಾಳಿ ನಡೆಸಿದ್ದು, ಘಟನೆಯಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ 8 ಮಂದಿ ಮೃತಪಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈಶಾನ್ಯ ಅಟ್ಲಾಂಟಾದಲ್ಲಿ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದು, ಚೆರೋಕೀ ಕೌಂಟಿ ಪಾರ್ಲರ್ ನಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಅಟ್ಲಾಂಟಾ ಪೊಲೀಸ್ ಮುಖ್ಯಸ್ಥ ರೋಡ್ನಿ ಬ್ರ್ಯಾಂಟ್, ಸಂಜೆ 5ಗಂಟೆ ವೇಳೆಗೆ ಚೆರೋಕೀ ಕೌಂಟಿ ಪಾರ್ಲರ್ ನ ಮೇಲೆ ದಾಳಿ ನಡೆದಿದ್ದು, ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದರು. ಬಳಿಕ ಗೋಲ್ಡ್ ಸ್ಪಾದಲ್ಲಿ ಎರಡು ದಾಳಿ ನಡೆದಿದ್ದು, ನಾಲ್ಕು ಮಂದಿ ಬಲಿಯಾಗಿದ್ದಾರೆ. ದಾಳಿ ನಡೆಸಿದ ಶಂಕಿತ ಬಂದೂಕುಧಾರಿ ರಾಬರ್ಟ್ ಆರನ್ ಲಾಂಗ್ ನನ್ನು ಬಂಧಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು