ಕಡಬದಲ್ಲಿ ಮೂರನೇ ದಿನವೂ ಮುಂದುವರೆದ ಅರಣ್ಯಾಧಿಕಾರಿಗಳ ದೌರ್ಜನ್ಯ ಖಂಡಿಸಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ; ಧರಣಿ ನಿರತ ಇಬ್ಬರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲು –ಕಹಳೆ ನ್ಯೂಸ್
ಕಡಬ : ಅರಣ್ಯಾಧಿಕಾರಿಗಳ ದೌರ್ಜನ್ಯ ದ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಆಗ್ರಹಿಸಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ಮೂರನೇದಿನವೂ ಮುಂದುವರೆದಿದೆ.
ಧರಣಿಯಲ್ಲಿ ನಿರತರಾಗಿದ್ದ ವೃದ್ದ ಮಹಿಳೆಯೊಬ್ಬರು ಮತ್ತು ನೀತಿ ತಂಡದ ರಾಜ್ಯಧ್ಯಕ್ಷ ಜಯನ್ ಟಿ ಅವರು ಅಸ್ವಸ್ಥಗೊಂಡಿದ್ದು, ಅವರನ್ನು ಅಂಬ್ಯುಲನ್ಸ್ ಮೂಲಕ ಕಡಬದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.
ಪುತ್ತೂರು ಎಸಿಯವರು ನಿನ್ನೆ ಭೇಟಿ ನೀಡಿದ ಸಂದರ್ಭದಲ್ಲಿ ಗುರುವಾರ ಸಂಜೆಯ ಒಳಗೆ ಎಸ್ಪಿ ಅವರಿಂದ ಹಿಂಬರಹ ನೀಡುವುದಾಗಿ ಭರವಸೆ ನೀಡಿದ್ದರು.
ಅದರಂತೆ ಹಿಂಬರಹ ಸಿಗುವವರೆಗೂ ಧರಣಿ ಮಾಡುವುದಾಗಿ ಪ್ರತಿಭಟನಾ ನಿರತರು ತಿಳಿಸಿದ್ದರು.
ಘಟನೆ ಸಂಬಂಧಿಸಿ ಸ್ಥಳೀಯ ರಾಜಕೀಯ ನಾಯಕರು ಕೆಲ ಜನ ಪ್ರತಿನಿಧಿಗಳು ಮಾತ್ರ ಮೌನ ತಾಳಿರುವುದು ಮಾತ್ರ ವಿಪರ್ಯಾಸವಾಗಿದೆ.