Tuesday, January 21, 2025
ಪುತ್ತೂರು

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಹೆತ್ತವರ ಸಭೆ –ಕಹಳೆ ನ್ಯೂಸ್

ಪುತ್ತೂರು : ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಹೆತ್ತವರು ಮತ್ತು ಶಿಕ್ಷಕರ ಪಾತ್ರ ಹಿರಿದು. ತಮ್ಮ ಮಕ್ಕಳೊಡನೆ ಸೂಕ್ಷ್ಮ ಬಾಂಧವ್ಯವನ್ನು ಬೆಳೆಸಿಕೊಂಡು ಅವರ ಸಂವೇದನೆಗೆ ಸ್ಪಂದಿಸಬೇಕು. ಈ ಮೂಲಕ ಸ್ವತಂತ್ರ ವ್ಯಕ್ತಿತ್ವವನ್ನು ಬೆಳೆಸಲು ಸಹಾಯ ಮಾಡಬೇಕು. ಭವಿಷ್ಯದ ಗುರಿಯು ಪ್ರಾಮಾಣಿಕವಾಗಿದ್ದು ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಂಡರೆ ಯಶಸ್ಸು ಸಾಧ್ಯ ಎಂದು ವಿವೇಕಾನಂದ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ಶ್ರೀಧರ ಶೆಟ್ಟಿಗಾರ್ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳ ಹೆತ್ತವರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಆದರ್ಶ, ಸಂಸ್ಕಾರ ಮತ್ತು ರಾಷ್ಟ್ರಭಕ್ತಿಯನ್ನು ಪ್ರೇರೇಪಿಸುವ ಮೂಲಕ ವಿದ್ಯಾರ್ಥಿಗಳ ಉನ್ನತಿಗೆ ಸಹಾಯ ಮಾಡುತ್ತದೆ. ವಿದ್ಯಾರ್ಥಿಗಳು ಸಾಧನೆಯ ಹಾದಿಯಲ್ಲಿ ಸಾಗಬೇಕು. ಕಠಿಣ ಪರಿಶ್ರಮದ ಮೂಲಕ ಒಳ್ಳೆಯ ಫಲಿತಾಂಶವನ್ನು ಪಡೆಯಬೇಕು ಎಂದರು. ಕಾಲೇಜಿನ ಪ್ರಾಂಶುಪಾಲ ಮಹೇಶ ನಿಟಿಲಾಪುರ ಮಾತನಾಡಿ ಶಿಕ್ಷಣವು ಮಗುವಿನ ಮನಸ್ಸನ್ನು ಸಂಸ್ಕರಿಸುವ ಕೆಲಸವನ್ನು ಮಾಡುತ್ತದೆ. ಪಾಠಪ್ರವಚನಗಳ ಜೊತೆಗೆ ಬದುಕಿನ ಶಿಕ್ಷಣವನ್ನೂ ಕಲಿಸಿಕೊಡುತ್ತಿದೆ.ಅಂಥ ಶಿಕ್ಷಣವು ಬದುಕಿಗೊಂದು ದಾರಿ ಮತ್ತು ದಿಕ್ಕನ್ನು ತೋರಿಸುತ್ತದೆ.

ವಿದ್ಯಾರ್ಥಿಗಳು ನೈತಿಕತೆ, ಆದರ್ಶ ಮತ್ತು ಸಾಧನೆಗಳ ಮೂಲಕ ಪಕ್ವಗೊಳ್ಳಬೇಕು.ಇದಕ್ಕೆ ಶಿಕ್ಷಕರಷ್ಟೇ ಅಲ್ಲದೆ ಹೆತ್ತವರ ಸಹಕಾರವೂ ಮುಖ್ಯ ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಸಂತೋಷ್ ಬಿ, ಸದಸ್ಯ ರವಿ ಮುಂಗ್ಲಿಮನೆ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಉಷಾ ಉಪಸ್ಥಿತರಿದ್ದರು. ಜೀವಶಾಸ್ತ್ರ ವಿಭಾಗದ ಉಪನ್ಯಾಸಕ ಸುಪ್ರೀತ್ ಕಾಲೇಜಿನ ನೀತಿ ನಿಯಮಾವಳಿ ಬಗ್ಗೆ ಸ್ಥೂಲ ಪರಿಚಯವನ್ನು ನೀಡಿದರು. ಉಪನ್ಯಾಸಕ ದೇವಿಪ್ರಸಾದ್ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕಿ ಚೈತ್ರಾ ಮತ್ತು ಸ್ನೇಹ ಕಾರ್ಯಕ್ರಮವನ್ನು ನಿರೂಪಿಸಿ ಭಾಗ್ಯಶ್ರೀ ವಂದಿಸಿದರು.