Monday, January 20, 2025
ಹೆಚ್ಚಿನ ಸುದ್ದಿ

ಬಾಗೇಪಲ್ಲಿ ತಾಲೂಕು ಪಂಚಾಯತಿ ನೂತನ ಕಟ್ಟಡ ಉದ್ಘಾಟನೆ –ಕಹಳೆ ನ್ಯೂಸ್

ಬಾಗೇಪಲ್ಲಿ : ಪಟ್ಟಣದಲ್ಲಿ ತಾಲೂಕು ಪಂಚಾಯತಿ ನೂತನ ಸುಂದರ ಕಟ್ಟಡ ಸಾರ್ವಜನಿಕರ ಸೌಲಭ್ಯಕ್ಕೆ ಸಿದ್ದವಾಗಿದ್ದು ಸರ್ಕಾರ ಜನರಿಗಾಗಿ ರೂಪಿಸಿದ ಯೋಜನೆಗಳು ಜನರಿಗೆ ಮುಟ್ಟಿಸುವ ಮೂಲಕ ಸಾರ್ಥಿಕತೆ ಪಡೆಯಬೇಕು, ಸರ್ಕಾರಿ ನೌಕರರಲ್ಲಿ ನಿಸ್ವಾರ್ಥ ಸೇವೆ ಮಾಡುವ ಮನಸ್ಥಿತಿ ಗಟ್ಟಿಯಾಗಿರಬೇಕು’ ಎಂದು ಬಾಗೇಪಲ್ಲಿ ತಾಲೂಕು ಜನಪ್ರಿಯ ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸರ್ಕಾರಿ ವತಿಯಿಂದ ನಿರ್ಮಿಸಲಾದ ತಾಲೂಕು ಪಂಚಾಯತಿ ನೂತನ ಕಟ್ಟಡ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರದ ನಿಧಿಯಿಂದ ₹ 50 ಲಕ್ಷ ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣವಾಗಿದ್ದು, ತಾಲೂಕು ಪಂಚಾಯತಿ ಕಟ್ಟಡ ನೋಡಲು ಸೊಗಸಾಗಿದ್ದರಷ್ಟೇ ಸಾಲದು ಜನಪರ ಕಾಲಜಿಯಿದ್ದರೆ ಮಾತ್ರ ಕಟ್ಟಡದ ಜೊತೆ ಜನರ ಬದುಕು ಸುಂದರವಾಗಿರುತ್ತದೆ ತಾಲೂಕು ಪಂಚಾಯತಿನಲ್ಲಿ ಸಿಬ್ಬಂದಿ ಸಂಖ್ಯೆ ಕಡಿಮೆಯಾಗಿದ್ದರೂ ಶ್ರದ್ಧೆಯಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ತಾಲೂಕು ಪಂಚಾಯತಿ ಅದ್ಯಕ್ಷ ಕೆ,ಆರ್.ನರೇಂದ್ರ ಬಾಬು ಮಾತನಾಡಿ, ಗ್ರಾಮಗಳ ಅಭಿವೃದ್ಧಿಯಲ್ಲಿ ತಾಲೂಕು ಪಂಚಾಯಿತಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ.

ಜನರ ತಾಲ್ಲೂಕು ಪಂಚಾಯಿತಿಯ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು. ಅಂದಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಸರಸ್ವತಮ್ಮ, ಸಿಇಓ ಮಂಜುನಾಥ ಸ್ವಾಮಿ ಪುರಸಭೆ ಅದ್ಯಕ್ಷೆ ಗುಲ್ನಾಜ್ ಬೇಗಂ, ಉಪಾಧ್ಯಕ್ಷ ಎ.ಶ್ರೀನಿವಾಸ್, ಜಿಲ್ಲಾ ಪಂಚಾಯತಿ ಸದಸ್ಯ ಲಕ್ಷ್ಮೀನರಸಿಂಹಪ್ಪ, ತಾಲ್ಲೂಕು ಪಂಚಾಯತಿ ಸದಸ್ಯರಾದ ಕಲ್ಲಿಪಲ್ಲಿ ವೆಂಕಟೇಶ್, ಶ್ರೀರಾಮ ನಾಯಕ್,ಸುಧಾಕರೆಡ್ಡಿ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಮಂಜುನಾಥ, ಸುಧಾಕರ್ ರೆಡ್ಡಿ ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.