ಸಾಂಪ್ರದಾಯಿಕ ಮತ್ತು ಸಾಂಪ್ರದಾಯಿಕವಲ್ಲದ ವಿಧಾನಗಳಿಂದ ಮಾಡಿದ ಸಂಶೋಧನೆಯಲ್ಲಿ ಅಧ್ಯಾತ್ಮ ಮತ್ತು ವೈದ್ಯಕೀಯ ಶಾಸ್ತ್ರದ ನಡುವೆ ನೇರ ಸಂಬಂಧವಿದೆ ! ಶ್ರೀ. ಶಾನ್ ಕ್ಲಾರ್ಕ್-ಕಹಳೆ ನ್ಯೂಸ್
ಮಾನವನ ಆರೋಗ್ಯದ ಮೇಲೆ ಪರಿಣಾಮ ಬೀರುವ ಆಧ್ಯಾತ್ಮಿಕ ಆಯಾಮಗಳನ್ನು ಆಧುನಿಕ ವೈದ್ಯಕೀಯ ಶಾಸ್ತ್ರವು ನಿರಾಕರಿಸುತ್ತದೆ; ಆದರೆ ಆಯುರ್ವೇದವು ರೋಗದ ಕಾರಣ ಮತ್ತು ಚಿಕಿತ್ಸೆ ಇವೆರಡರ ಆಧ್ಯಾತ್ಮಿಕ ಮತ್ತು ಸೂಕ್ಷ್ಮ ಅಂಶಗಳನ್ನು ಪರಿಗಣಿಸಿ ವಿಚಾರ ಮಾಡುತ್ತದೆ.
ಅಧ್ಯಾತ್ಮ ಮತ್ತು ವೈದ್ಯಕೀಯಶಾಸ್ತ್ರದ ನಡುವಿರುವ ಸಮಾನ ಕೊಂಡಿ ಯಾವುದು, ಇದರ ಅಭ್ಯಾಸವನ್ನು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ನಡೆಸಿದ ಸಾಂಪ್ರದಾಯಿಕ (ವೈಜ್ಞಾನಿಕ) ಮತ್ತು ಸಾಂಪ್ರದಾಯಿಕವಲ್ಲದ (ಸೂಕ್ಷ್ಮ-ಜ್ಞಾನ) ಪದ್ಧತಿಗಳಿಂದ ಮಾಡಿದ ಸಂಶೋಧನೆಯಲ್ಲಿ ಅಧ್ಯಾತ್ಮ ಮತ್ತು ವೈದ್ಯಕೀಯಶಾಸ್ತ್ರದ ನಡುವೆ ನೇರ ಸಂಬಂಧವಿದೆ ಎಂದು ಸ್ಪಷ್ಟವಾಗಿದೆ, ಎಂದು ಶ್ರೀ. ಶಾನ್ ಕ್ಲಾರ್ಕ ಇವರು 15 ಮಾರ್ಚ್ 2021 ರಂದು ನಡೆದ ‘ವರ್ಚುವಲ್ ಆನ್ಯುವಲ್ ಇಂಟರನ್ಯಾಶನಲ್ ಕಾನ್ಫರೆನ್ಸ್ ಆನ್ ಸ್ಪಿರಿಚ್ಯುವಾಲಿಟಿ ಆಂಡ್ ಸೈಕಾಲಾಜಿ (ಐಸಿಎಸ್‍ಪಿ 2021)’ ಈ ಅಂತರರಾಷ್ಟ್ರೀಯ ಪರಿಷತ್ತಿನಲ್ಲಿ ತಮ್ಮ ಪ್ರಬಂಧವನ್ನು ಮಂಡಿಸಿದರು. ಈ ಪರಿಷತ್ತನ್ನು ಸರ್ಬಿಯಾದ ‘ಟುಮಾರೊ ಪೀಪಲ್ ಆರ್ಗನೈಸೇಶನ್’ ಆಯೋಜಿಸಿತ್ತು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಅವರು ’ರೋಗಗಳ ಕಾರಣಗಳು, ಚಿಕಿತ್ಸೆ ಮತ್ತು ತಡೆಗಟ್ಟುವಲ್ಲಿ ಅಧ್ಯಾತ್ಮಶಾಸ್ತ್ರದ ಸ್ಥಾನ’ ಎಂಬ ವಿಷಯದ ಕುರಿತು ಸಂಶೋಧನಾ ಪ್ರಬಂಧವನ್ನು ಮಂಡಿಸಿದರು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಪರಾತ್ಪರ ಗುರು. ಡಾ. ಜಯಂತ ಆಠವಲೆಯವರು ಈ ಪ್ರಬಂಧದ ಲೇಖಕರಾಗಿದ್ದು ಶ್ರೀ. ಶಾನ್ ಕ್ಲಾರ್ಕ್ ಇವರು ಸಹಲೇಖಕರಾಗಿದ್ದಾರೆ ಮೇಲಿನ ಪ್ರಬಂಧವು ವೈಜ್ಞಾನಿಕ ಸಮ್ಮೇಳನದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಮಂಡಿಸಿದ 67 ನೇ ಪ್ರಬಂಧವಾಗಿದೆ. ವಿಶ್ವವಿದ್ಯಾಲಯವು ಈ ಹಿಂದೆ 15 ರಾಷ್ಟ್ರೀಯ ಮತ್ತು 51 ಅಂತರರಾಷ್ಟ್ರೀಯ ವೈಜ್ಞಾನಿಕ ಸಮ್ಮೇಳನಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದೆ. ಇದರಲ್ಲಿ 4 ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ವಿಶ್ವವಿದ್ಯಾಲಯವು ‘ಅತ್ಯುತ್ತಮ ಸಂಶೋಧನಾ ಪ್ರಬಂಧ’ ಪ್ರಶಸ್ತಿಯನ್ನು ಪಡೆದಿದೆ. ರೋಗ ಪತ್ತೆ ಮತ್ತು ಚಿಕಿತ್ಸೆಗಾಗಿ ರೋಗದ ಮೂಲಕ್ಕೆ ಹೋಗುವುದು ಅನಿವಾರ್ಯವಾಗಿದೆ. ಪ್ರತಿಯೊಂದು ಕಾಯಿಲೆಗೆ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಹೀಗೆ 3 ಸಂಭವನೀಯ ಕಾರಣಗಳಿವೆ ಎಂದು ಸಂಶೋಧನೆಯಿಂದ ಕಂಡುಬಂದಿದೆ. ರೋಗವು ಈ ಒಂದು ಅಥವಾ ಹೆಚ್ಚಿನ ಕಾರಣಗಳಿಂದ ಉಂಟಾಗುತ್ತದೆ. ವೈದ್ಯಕೀಯ ಕಾಯಿಲೆಯು ಸೇರಿದಂತೆ ಜೀವನದ ಹೆಚ್ಚಿನ ಸಮಸ್ಯೆಗಳಿಗೆ ‘ಪ್ರಾರಬ್ಧ’ವು ಮೂಲ ಕಾರಣವಾಗಿದೆ. ಇದರೊಂದಿಗೆ ಕೆಟ್ಟ್ಟ ಶಕ್ತಿಗಳು, ಪೂರ್ವಜರ ಸೂಕ್ಷ್ಮದೇಹಗಳು ಇತ್ಯಾದಿಗಳನ್ನು ಒಳಗೊಂಡಂತೆ ಆಧ್ಯಾತ್ಮಿಕ ಕಾರಣಗಳಿಂದ ದೈಹಿಕ (ಉದಾ. ಚರ್ಮರೋಗ) ಅಥವಾ ಮಾನಸಿಕ (ಉದಾ. ವ್ಯಸನಗಳು) ಕಾಯಿಲೆಗಳು ಬರಬಹುದು. ಆದ್ದರಿಂದ, ರೋಗವನ್ನು ಪತ್ತೆ ಹಚ್ಚುವಲ್ಲಿ, ವೈದ್ಯರು ವಾಸ್ತವವಾಗಿ ಮೂರು ಮೂಲಭೂತ ಕಾರಣಗಳನ್ನು ಪರಿಗಣಿಸಬೇಕು ಮತ್ತು ಅದಕ್ಕೆ ತಕ್ಕಂತೆ ಚಿಕಿತ್ಸೆ ನೀಡಬೇಕು. ಉದಾ. ಒಂದು ರೋಗಕ್ಕೆ ಪ್ರಾರಬ್ಧ ಅಥವಾ ಕೆಟ್ಟ ಶಕ್ತಿಗಳ ತೊಂದರೆಯು ಕಾರಣವಾಗಿದ್ದಲ್ಲಿ ದೈಹಿಕ ಮತ್ತು ಮಾನಸಿಕ ಶುಶ್ರೂಷೆಯೊಂದಿಗೆ ಆಧ್ಯಾತ್ಮಿಕ ಶುಶ್ರೂಷೆಯನ್ನು ಜೋಡಿಸುವುದು ಆವಶ್ಯಕವಾಗಿದೆ. ಈ ರೀತಿ ಮಾಡಿದರೆ ರೋಗಿಯು ಸಂಪೂರ್ಣವಾಗಿ ಗುಣಮುಖನಾಗುವನು. ಮತ್ತೊಂದೆಡೆ, ದೈಹಿಕ ಮತ್ತು ಮಾನಸಿಕ ಚಿಕಿತ್ಸೆಯಿಂದ ಕೇವಲ ರೋಗದ ಲಕ್ಷಣಗಳನ್ನು ಮಾತ್ರ ನಿವಾರಿಸಬಹುದು ಎಂದು ಸಂಶೋಧನೆಗಳಿಂದ ನಿರೀಕ್ಷಣೆಯಾಗಿದೆ. ಆಧ್ಯಾತ್ಮಿಕ ಸ್ತರದ ಉಪಚಾರಗಳ ಅಂತರ್ಗತ ಸಾಧನೆ ಅಂದರೆ ನಿತ್ಯ ಉಪಾಸನೆಯೇ ಸರ್ವೋತ್ತಮ ಪರಿಹಾರವಾಗಿದೆ. ಸಾಧನೆಯನ್ನು ಮಾಡುವುದರಿಂದ ಪ್ರಾರಬ್ಧವನ್ನು ಎದುರಿಸಬಹುದು ಅಥವಾ ಸುಸಹ್ಯವನ್ನಾಗಿಬಹುದು ಎಂದು ಶ್ರೀ.ಶಾನ್ ಕ್ಲಾರ್ಕ್ ಈ ಸಮಯದಲ್ಲಿ ಹೇಳಿದರು.