Sunday, January 19, 2025
ಸುದ್ದಿ

ತೆಗ್ಗು ಸರಕಾರಿ ಶಾಲೆಯ ಸುವರ್ಣ ಸಂಭ್ರಮ ಸಮಾಜಕ್ಕೆ ಕೊಡುಗೆ…! ಪರ್ಣದ ಉಳಿವಿಗೆ ವರ್ಣದ ಕಾಣಿಕೆ…! ಬನ್ನಿ ಶಾಲೆಯ ತೇರು ಎಳೆಯೋಣ.

ಪುತ್ತೂರು: ಒಂದು ಶಾಲೆಯ ಸುವರ್ಣ ಸಂಭ್ರಮ. ಈ ನೆನಪು ಶಾಶ್ವತವಾಗಲು ವಿವಿದೆಡೆ ವಿವಿಧ ಕಾರ್ಯಕ್ರಮ ಆಯೋಜನೆಯಾಗುತ್ತದೆ. ಆದರೆ

ಪುತ್ತೂರು ತಾಲೂಕಿನ ತಿಂಗಳಾಡಿ ಬಳಿಯ ತೆಗ್ಗು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪರಿಸರ ಸಂರಕ್ಷಣೆಯ ಸಂದೇಶ. ಇದಕ್ಕೆ ಆಯ್ಕೆ ಮಾಡಿಕೊಂಡ ಮಾಧ್ಯಮ ಕಲೆ. ಕಳೆಯ ಮೂಲಕ ಇಡೀ ಜಿಲ್ಲೆಗೆ ಪರಿಸರ ಸಂರಕ್ಷಣೆಯ ಸಂದೇಶ ನೀಡುತ್ತಿದೆ. ಈ ಶಾಲೆಯ ತೇರು ಎಳೆಯಲು ಜಿಲ್ಲೆಯ ಮಂದಿ ಒಂದಾಗಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು

ಶಾಲೆಯ ಸುವರ್ಣ ಸಂಭ್ರಮಕ್ಕೆ ಇಡೀ ಶಾಲೆಯನ್ನು ಹಸಿರಾಗಿಸುವ ಜೊತೆಗೆ ಶಾಲೆಯ ಬಳಿ ಇರುವ ಕಾಡಿನ ರಕ್ಷಣೆ, ಇರುವ ಜಾಗದಲ್ಲಿ ಕೃಷಿ ಮಾಡುವುದು, ಇದರ ಜೊತೆಗೆ ಇಡೀ ಜಿಲ್ಲೆಗೆ ಪರಿಸರ ಸಂರಕ್ಷಣೆಯ ಸಂದೇಶ ನೀಡುವ ಅಪರೂಪದ ಕಾರ್ಯಕ್ರಮ. ಇಂತಹ ಅಪರೂಪದ ಕಾರ್ಯಕ್ರಮ ಹಮ್ಮಿಕೊಂಡದ್ದು ತೆಗ್ಗು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಇದಕ್ಕಾಗಿ ಆಯ್ಕೆ ಮಾಡಿಕೊಂಡ ಮಾಧ್ಯಮ ಕಲೆ. ಜಿಲ್ಲೆಯ ವಿವಿಧ ಶಾಲೆಯ ಸುಮಾರು ೪೦ ಚಿತ್ರ ಕಲಾ ಶಿಕ್ಷಕರು ಪರಿಸರ ಜಾಗ್ರತಿಯ ಚಿತ್ರವನ್ನು ಶಾಲೆಯಲ್ಲೇ ತಯಾರು ಮಾಡಿ ಇಡೀ ಜಿಲ್ಲೆಯ ವಿವಿದೆಡೆ ಪ್ರದರ್ಶನ ಮಾಡಿ ತೆಗ್ಗು ಶಾಲೆಯ ಮೂಲಕ ಪರಿಸರ ಉಳಿವಿನ ಸಂದೇಶ ಸಾರಲಾಗುತ್ತಿದ್ದೆ.ಇದಕ್ಕಾಗಿ ಪರ್ಣದ ಉಳಿವಿಗೆ ವರ್ಣದ ಕಾಣಿಕೆ ಎಂಬ ಹೆಸರಿನ ಕಾರ್ಯಕ್ರಮ ಶುಕ್ರವಾರ ಉದ್ಘಾಟನೆಗೊಂಡಿತು. ಎಲ್ಲ ೪೦ ಮಂದಿ ಚಿತ್ರಕಲಾ ಶಿಕ್ಷಕರು ಪರಿಸರ ಜಾಗೃತಿ ಸಂದೇಶ ಸಾರುವ ಚಿತ್ರ ಬಿಡಿಸುತ್ತಾರೆ. ೩ ದಿನಗಳ ಕಾಲ ನಡೆಯುವ ವರ್ಣದ ಕೆಲಸ ಭಾನುವಾರ ಸಮಾರೂಪಗೊಳ್ಳಲಿದೆ.
ಕಾರ್ಯಕ್ರಮ ಉದ್ಹಾಟಿಸಿದ ಉದ್ಯಮಿ, ಮಾಸ್ಟರ್ ಪ್ಲಾನರಿಯ ಎಸ್.ಕೆ.ಆನಂದ ಮಾತನಾಡಿ ಕಾಡು ನಾಶವಾಗುತ್ತಿದೆ. ನಾಡು ಬರಿದಾಗುತ್ತಿದೆ. ಹೀಗಾಗಿ ಇಂದು ಶಾಲೆಯ ಮೂಲಕ ಪರಿಸರ ಉಳಿವಿನ ಕೆಲಸವಾಗಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭ ಉದ್ಯಮಿ ಜಯಂತ ನಡುಬೈಲು, ಪ್ರಗತಿ ಸ್ಟಡಿ ಸೆಂಟರ್ ಸಂಚಾಲಕ ಗೋಕುಲ್ ನಾಥ್, ವಕೀಲರ ಸಂಘದ ಅಧ್ಯಕ್ಷ ಭಾಸ್ಕರ ಕೋಡಿಮಬಾಳ, ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ, ಜಿಲ್ಲಾ ಚಿತ್ರಕಲ್ಲ ಸಂಘದ ಅಧ್ಯಕ್ಷ ಮಹಾಬಲ ಕುಳ, ಸ್ನೇಹಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಶುಭಪ್ರಕಾಶ್ ಎರೆಬೈಲು, ಸಾಮಾಜಿಕ ಕಾರ್ಯಕರ್ತ ಲೋಕೇಶ್ ಅಲುoಬುಡ, ತೆಗ್ಗು ಶಾಲಾ ಸುವರ್ಣ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅಬ್ದುಲ್ ಖಾದರ್ ಮೇರ್ಲ, ಗೌರವಾಧ್ಯಕ್ಷ ಮೋಹನ್ ರೈ ಓಲೆಮುಂಡೋವು, ಪ್ರಧಾನ ಕಾರ್ಯದರ್ಶಿ ಮೋಹನ ಗೌಡ ಎರಕ್ಕಳ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಶೇಖರ ನೆಲ್ಲಿಗುರಿ, ಶಾಲಾ ಮುಖ್ಯಗುರು ಭಾರತೀ ಸ್ವರಮನೆ ಉಪಸ್ಥಿತರಿದ್ದರು.
ಶಾಲಾ ಶಿಕ್ಷಕ ರಮೇಶ್ ಉಳಯ ಸ್ವಾಗತಿಸಿ ಪ್ರಸ್ತಾವನೆಗೈದರು. ಶಾಲಾ ಮುಖ್ಯಗುರು ಭಾರತೀ ಸ್ವರಮನೆ ವಂದಿಸಿದರು. ಇದೇ ಸಂದರ್ಭ ತಿಂಗಳಾಡಿ ಶಾಲೆಗೆ ಕಂಪ್ಯೂಟರ್ ಕೊಡುಗೆಯನ್ನು ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response