Thursday, January 23, 2025
ಹೆಚ್ಚಿನ ಸುದ್ದಿ

ಹರಿದ ಜೀನ್ಸ್ ಧರಿಸುವ ಯುವತಿಯವರು ಸಮಾಜದಲ್ಲಿ ಕೆಟ್ಟ ನಿದರ್ಶನಗಳನ್ನು ಹುಟ್ಟುಹಾಕುತ್ತಿದ್ದಾರೆ ; ಉತ್ತರಾಖಂಡ ಸಿಎಂ ವಿವಾದಾತ್ಮಕ ಹೇಳಿಕೆ-ಕಹಳೆ ನ್ಯೂಸ್

ಉತ್ತರಾಖಂಡ : ಉತ್ತರಾಖಂಡ ಸಿಎಂ ತೀರಥ್ ಸಿಂಗ್ ರಾವತ್ ಅವರು, ಹರಿದ ಜೀನ್ಸ್ ಧರಿಸುವ ಯುವತಿಯವರು ಸಮಾಜದಲ್ಲಿ ಕೆಟ್ಟ ನಿದರ್ಶನಗಳನ್ನು ಹುಟ್ಟುಹಾಕುತ್ತಿದ್ದಾರೆ ಎಂದು ಹೊಸದಾಗಿ ನೇಮಕಗೊಂಡಿರುವ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತು ಭಾಷಣವೊಂದರಲ್ಲಿ ಮಾತನಾಡಿದ ಅವರು, “ಮಂಡಿಗಳನ್ನು ತೋರಿಸಿಕೊಂಡು ಹರಿದ ಜೀನ್ಸ್ ಧರಿಸುವುದು ಶ್ರೀಮಂತರ ಮಕ್ಕಳಂತೆ ಕಾಣುವುದು ಈಗಿನ ಟ್ರೆಂಡ್ ಆಗಿಬಿಟ್ಟಿದೆ. ಮನೆಯಿಂದ ಅಲ್ಲದೇ ಇವೆಲ್ಲಾ ಎಲ್ಲಿಂದ ಬರುತ್ತಿವೆ ? ಹರಿದ ಜೀನ್ಸ್‍ನಲ್ಲಿ ತನ್ನ ಮಂಡಿ ತೋರಿಸಿಕೊಳ್ಳುವ ನನ್ನ ಮಗನನ್ನು ನಾನು ಎತ್ತ ಕೊಂಡೊಯ್ಯುತ್ತಿದ್ದೇನೆ ಎಂಬುದನ್ನು ಮನೆಯವರು ಯೋಚಿಸಬೇಕು” ಎಂದು ಹೇಳಿದ್ದರು. ಇನ್ನು ಸಿಎಂ ರಾವತ್ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವರ ಹೇಳಿಕೆಯ ಪರ-ವಿರೋಧದ ಮಾತುಗಳು ಕಾಮೆಂಟ್‍ಗಳ ರೂಪದಲ್ಲಿ ಬರುತ್ತಿದೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು