ಉಜಿರೆ ಬೆನಕ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಗ್ಯಾಸ್ಟ್ರೋ ಎಂಡೋಸ್ಕೋಪಿಕ್ ಉಪಕರಣ, ಗ್ರಾಮೀಣ ಪ್ರದೇಶದಲ್ಲಿ ಆಧುನಿಕ ಸೌಲಭ್ಯಗಳನ್ನು ಒದಗಿಸುವುದು ಅಭಿನಂದನೀಯ-ಕಹಳೆ ನ್ಯೂಸ್
ಉಜಿರೆ : ಸಾಮಾನ್ಯವಾಗಿ ಪಟ್ಟಣಿಗರಿಗೆ ಸಿಗುª ಸೌಲಭ್ಯವನ್ನು ಉಜಿರೆಯಂತಹ ಗ್ರಾಮೀಣ ಪ್ರದೇಶದಲ್ಲಿಒದಗಿಸಿರುವುದು ಅಭಿನಂದನೀಯ ಎಂದು ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯ ಗ್ಯಾಸ್ಟ್ರೊ ಎಂಟರಾಲಜಿಸ್ಟ್ ಡಾ.ಅನುರಾಗ್ ಶೆಟ್ಟಿ ಅಭಿಪ್ರಾಯಪಟ್ಟರು. ಡಾ.ಅನುರಾಗ್ ಶೆಟ್ಟಿ ಅವರು ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ನೂತನ ಗ್ಯಾಸ್ಟ್ರೊ ಎಂಟರಾಲಜಿ ವಿಭಾಗವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಟೊಳ್ಳಾದ ಅಂಗ, ದೇಹದ ಕುಹರದ ಒಳಭಾಗವನ್ನು ಹಾಗೂ ಜೀರ್ಣಾಂಗವ್ಯೂಹವನ್ನು ಪರೀಕ್ಷಿಸಲು ಎಂಡೋಸ್ಕೋಪಿಯನ್ನು ಬಳಸಲಾಗುತ್ತದೆ. ಹೊಟ್ಟೆನೋವು, ಹುಣ್ಣು, ಜಠರದುರಿತ, ಜೀರ್ಣಾಂಗವ್ಯೂಹದ ರಕ್ತಸ್ತ್ರಾವ, ದೀರ್ಘಕಾಲಿಕ ಮಲಬದ್ಧತೆ ಅಥವಾ ಅತಿಸಾರ ಮೊದಲಾದ ಕಾಯಿಲೆಗಳನ್ನು ಪತ್ತೆ ಹಚ್ಚುವ ಆಧುನಿಕ ವಿಧಾನವಾಗಿದೆ ಎಂದು ಮಂಗಳೂರಿನ ಯೆನಪೋಯ ಆಸ್ಪತ್ರೆಯ ಜನರಲ್ ಸರ್ಜನ್ ಡಾ.ವಿಜೇತ್‍ರೈ ಅವರು ಗ್ಯಾಸ್ಟ್ರೋ ಎಂಡೋಸ್ಕೋಪಿಕ್ ಯಂತ್ರವನ್ನು ಅನಾವರಣಗೊಳಿಸಿ ತಿಳಿಸಿದರು. ಬೆನಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಗೋಪಾಲಕೃಷ್ಣ ಅವರು ಪ್ರಾಸ್ತವಿಕವಾಗಿ ಮಾತನಾಡುತ್ತಾ ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಗುಣಮಟ್ಟದ ಆಧುನಿಕ ಸೇವೆಯನ್ನು ಒದಗಿಸುವ ಉದ್ದೇಶದಿಂದ ನೂತನ ವಿಭಾಗವನ್ನು ಅಣಿಗೊಳಿಸಲಾಗಿದೆ, ತಿಂಗಳ ಮೂರನೇ ಬುಧವಾರ ಗ್ಯಾಸ್ಟ್ರೊ ಎಂಟರಾಲಜಿಸ್ಟ್ ಡಾ.ಅನುರಾಗ್ ಹಾಗೂ ವಾರದ ಐದು ದಿನ ಸಂಜೆ ಜನರಲ್ ಸರ್ಜನ್ ಡಾ.ವಿಜೇತ್ ರೈ ಅವರು ಸಲಹೆ ಹಾಗೂ ಚಿಕಿತ್ಸೆಗೆ ಲಭ್ಯರಿರುತ್ತಾರೆ ಎಂದು ತಿಳಿಸಿದರು. ಬೆನಕ ಆಸ್ಪತ್ರೆಯ ಸಿಬ್ಬಂದಿ ಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಕಾರ್ಯನಿರ್ವಹಣಾಧಿಕಾರಿ ಶ್ರೀ ದೇವಸ್ಯ ವರ್ಗೀಸ್ ಸ್ವಾಗತಿಸಿ, ಡಾ.ಭಾರತಿ.ಜಿ.ಕೆ ವಂದಿಸಿದರು.