Friday, April 11, 2025
ಕಡಬ

ನಾನು ನಾಪತ್ತೆಯಾಗಿಲ್ಲ, ಉದ್ಯೋಗದಲ್ಲಿದ್ದೇನೆ ಎಂದು ಸ್ಪಷ್ಟನೆ ನೀಡಿದ ಯುವಕ-ಕಹಳೆ ನ್ಯೂಸ್

ಕಡಬ : ಕಡಬ ಫರ್ನಿಚರ್ಸ್ ಅಂಗಡಿಯಲ್ಲಿ ಕೆಲಸಕ್ಕಿದ್ದ ಯುವಕನೋರ್ವ ಮಾರ್ಚ್ 9ರಂದು ನಾಪತ್ತೆಯಾಗಿದ್ದಾರೆಂದು ಕಡಬ ಠಾಣೆಯಲ್ಲಿ ದೂರು ದಾಖಲಾಗಿದ್ದು, ನಾಪತ್ತೆಯಾಗಿದ್ದಾರೆ ಎನ್ನಲಾದ ಯುವಕ ನಾನು ಮಂಗಳೂರಿನಲ್ಲಿ ಉದ್ಯೋಗಲ್ಲಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೋಡಿಂಬಾಳ ಗ್ರಾಮದ ಕುತ್ಯಾಡಿ ನಿವಾಸಿ ಕಾಂತಪ್ಪ ಗೌಡರ ಪುತ್ರ ದೇವಿಪ್ರಸಾದ್ ಎಂಬವರು ಮಾರ್ಚ್ 9ರಂದು ಮನೆಯಿಂದ ಅಂಗಡಿಗೆಂದು ಬಂದವರು ಅಂಗಡಿಗೂ ಬಾರದೆ ನಾಪತ್ತೆಯಾಗಿದ್ದರು, ಈ ಬಗ್ಗೆ ದೇವಿಪ್ರಸಾದ್ ಅವರ ತಂದೆ ಕಡಬ ಠಾಣೆಗೆ ದೂರು ನೀಡಿದ್ದರು. ಆದರೆ ದೇವಿಪ್ರಸಾದ್ ಅವರು ಉದ್ಯೋಗದ ನಿಮಿತ್ತ ಮಂಗಳೂರಿಗೆ ಹೋಗುವ ವಿಚಾರವನ್ನು ಮನೆಯಲ್ಲಿ ತಿಳಿಸಿದ್ದೆ, ಬಳಿಕ ನನ್ನ ಮೊಬೈಲ್ ಕೆಟ್ಟು ಹೋದ ಕಾರಣ ಯಾರನ್ನು ಸಂಪರ್ಕ ಮಾಡಲು ಸಾಧ್ಯವಾಗಿಲ್ಲ, ಆದುದರಿಂದ ನಾನು ನಾಪತ್ತೆಯಾಗಿದ್ದೇನೆ ಎಂಬುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ, ಈ ಹಿನ್ನಲೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ