ಮಂಗಳೂರು : ಸುಮಾರು 15 ದಿನಗಳಿಂದ ಕೆಮ್ಮು, ಜ್ವರದಿಂದ ಬಳಲುತ್ತಿದ್ದ ಮಂಗಳೂರಿನ ಬಜಾಲ್ ಪಕ್ಕಲಡ್ಕ ನಿವಾಸಿ ಅಬ್ದುಲ್ ಖಾದರ್ ಪುತ್ರ ಮುಬಶ್ಶೀರ್ (12)ಗೆ ಕ್ಲಿನಿಕ್‍ನಲ್ಲಿ ಚಿಕಿತ್ಸೆ ಕೊಡಿಸಿದರೂ ಕೆಮ್ಮು-ಜ್ವರ ಕಡಿಮೆ ಆಗುತ್ತಿರಲಿಲ್ಲ.
ಕೊನೆಗೂ ಮಗನ ಆರೋಗ್ಯ ಕೆಟ್ಟಿದೆ, ಸರಿ ಮಾಡಿ ಡಾಕ್ಟ್ರೇ ಎಂದು ಬಾಲಕನ ಪಾಲಕರು ಕಂಕನಾಡಿಯ ಮಕ್ಕಳ ತಜ್ಞ ಡಾ.ರಾಮ್ ಗೋಪಾಲ್ ಶಾಸ್ತ್ರಿ ಬಳಿ ಹೋದರು. ಬಾಲಕನ ಎಕ್ಸ್ ರೇ ತೆಗೆಸಿದ ವೈದ್ಯರು ಬಾಲಕನ ಬಲಬದಿಯ ಶ್ವಾಸಕೋಶದಲ್ಲಿ ನೋಟಿಸ್ ಬೋರ್ಡಿಗೆ ಅಂಟಿಸುವ ಗುಂಡುಸೂಜಿ ಪತ್ತೆಯಾಗಿದೆ ಎಂದರು. ಬಾಲಕನಿಗೆ ಶಸ್ತ್ರಚಿಕಿತ್ಸೆ ನೀಡಲೆಂದು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿನ ವೈದ್ಯರು ಶಸ್ತ್ರಚಿಕಿತ್ಸೆ ಮಾಡದೆ ಪೈಪ್ ಮಾದರಿಯ ವಸ್ತುವೊಂದರ ಸಹಾಯದಿಂದ ಗುಂಡುಸೂಜಿಯನ್ನು ಯಶಸ್ವಿಯಾಗಿ ಹೊರತೆಗೆದು ಬಾಲಕನ ಜೀವ ಉಳಿಸಿದ್ದಾರೆ.