Thursday, January 23, 2025
ಸುದ್ದಿ

ಒಂದು ಚಿನ್ನದ ನಾಣ್ಯಕ್ಕೆ 1 ಸಾವಿರವೆಂದು, ನಕಲಿ ನಾಣ್ಯ ನೀಡಿ 7.35 ಲಕ್ಷ ವಂಚನೆ-ಕಹಳೆ ನ್ಯೂಸ್

ಮಂಗಳೂರು : ಒಂದು ಬಂಗಾರ ನಾಣ್ಯಕ್ಕೆ ಕೇವಲ ಒಂದು ರೂಪಾಯಿ ಎಂದು ಮೊದಲಿಗೆ ಒಂದು ಅಸಲಿ ಚಿನ್ನದ ನಾಣ್ಯ ನೀಡಿ ನಂಬಿಕೆ ಬರುವಂತೆ ಮಾಡಿ, ನಂತರ ಒಂದು ಕಿಲೋಗ್ರಾಂ ನಕಲಿ ಚಿನ್ನದ ನಾಣ್ಯ ನೀಡಿ 7.35 ಲಕ್ಷ ರೂಪಾಯಿ ಪಡೆದು ವಂಚಿಸಿದ ಬಗ್ಗೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಾಗಲಕೋಟೆಯ ಉಮೇಶ್ ಎಂದು ಪರಿಚಯಿಸಿಕೊಂಡು ಕರೆ ಮಾಡಿ ಜಮೀನಿನಲ್ಲಿ ಕೆಲಸ ಮಾಡುತ್ತಿರುವಾಗ ಚಿನ್ನದ ಹಾಗೂ ಬೆಳ್ಳಿಯ ನಾಣ್ಯಗಳು ದೊರೆತಿದ್ದು ಈ ಪೈಕಿ ಬಂಗಾರದ ನಾಣ್ಯ ಮಾರಾಟ ಮಾಡುವುದನ್ನು ಹೇಳಿಕೊಂಡು ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾನೆ. ಬೇಡವೆಂದರೂ ಒತ್ತಾಯಿಸಿದಾಗ ದೂರುದಾರರು ಒಂದು ನಾಣ್ಯವನ್ನು 1000 ರೂ. ಗೆ ನೋಡಿ ಖರೀದಿಸಿ ಇದನ್ನು ಅಕ್ಕಸಾಲಿಗ ರಿಂದ ಪರಿಶೀಲಿಸಿದಾಗ ಅಸಲಿ ನಾಣ್ಯ ಎಂದು ತಿಳಿದುಬಂದಿತ್ತು. ಆ ಬಳಿಕ ಕಾರ್ನಾಡು ಗ್ರಾಮದ ಕೊಲ್ನಾಡು ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅಪರಿಚಿತನಿಂದ ಒಂದು ಕಿಲೋ ಗ್ರಾಂ ಚಿನ್ನದ ನಾಣ್ಯ ಕರೆದಿದ್ದಾರೆ ಅದನ್ನು ಸ್ವಲ್ಪ ದಿನ ಬಿಟ್ಟು ಪರಿಶೀಲಿಸಿದಾಗ ಅದು ನಕಲಿ ನಾಣ್ಯ ಎಂಬುದು ಗೊತ್ತಾಗಿದೆ. ಅಪರಿಚಿತನಿಗೆ ಕರೆಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದೆ ಆ ಬಳಿಕ ಮೂಲ್ಕಿ ಠಾಣೆಯಲ್ಲಿ ಮೋಸ ಹೋಗಿರುವ ಬಗ್ಗೆ ದೂರು ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು