Thursday, January 23, 2025
ಹೆಚ್ಚಿನ ಸುದ್ದಿ

ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನದಲ್ಲಿ ಮುಸ್ಲೀ ಕುಟುಂಬದಿಂದ ತುಲಾಭಾರ ಸೇವೆ –ಕಹಳೆ ನ್ಯೂಸ್

ಕೋಟ : ಪ್ರಸಿದ್ದ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿರುವ ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನದಲ್ಲಿ ಮುಸ್ಲಿಂ ಮಹಿಳೆಯೋರ್ವರು ಮಗುವಿನೊಂದಿಗೆ ತುಲಾಭಾರ ಸೇವೆ ಸಲ್ಲಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೂಲತಃ ಕೋಟದ ನಿವಾಸಿಯಾಗಿದ್ದು, ಪ್ರಸ್ತುತ ಉಡುಪಿಯಲ್ಲಿ ವಾಸವಾಗಿರುವ ಮುಸ್ಲಿಂ ಕುಟುಂಬದವರು ಹರಿಕೆಯನ್ನು ಹೊತ್ತುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಹರಿಕೆಯನ್ನು ಸಲ್ಲಿಸಿದ್ದಾರೆ. ತುಲಾಭಾರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಧಾರ್ಮಿಕ ಸೌಹಾರ್ದತೆಯ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಅಷ್ಟೇ ಅಲ್ಲಾ ಅಮೃತೇಶ್ವರಿಯ ಸನ್ನಿಧಿಯಲ್ಲಿ ಈ ಹಿಂದೆ ಅನ್ಯಧರ್ಮೀಯ ಭಕ್ತರೊಬ್ಬರು ಬೆಳಕಿನ ಸೇವೆಯ ಹರಿಕೆ ಹೊತ್ತುಕೊಂಡು ಯಕ್ಷಗಾನ ಸೇವೆಯನ್ನು ನೇರವೇರಿಸಿದ್ದರು. ಹಲವು ಮಕ್ಕಳ ತಾಯಿ ಈಗಾಗಲೇ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಿದ್ದು, ಇದೀಗ ಧಾರ್ಮಿಕ ಸೌಹಾರ್ದತೆಯಿಂದಲೂ ಖ್ಯಾತಿಯನ್ನು ಹೆಚ್ಚಿಸಿಕೊಂಡಿದೆ.