Friday, January 24, 2025
ಹೆಚ್ಚಿನ ಸುದ್ದಿ

ಫೇಲ್ ಮಾಡುವ ಬೆದರಿಕೆಯೊಡ್ಡಿ ಅತ್ಯಾಚಾರ ; ಪ್ರಾಧ್ಯಾಪಕನ ವಿರುದ್ದ ವಿದ್ಯಾರ್ಥಿನಿಯಿಂದ ದೂರು-ಕಹಳೆ ನ್ಯೂಸ್

ಹಾವೇರಿ : ಹಾವೇರಿ ಜಿಲ್ಲೆಯಲ್ಲಿ ಪರೀಕ್ಷೆಯಲ್ಲಿ ಪಾಸ್ ಮಾಡಬೇಕಾದ್ರೆ ನನ್ನ ಆಸೆ ಈಡೇರಿಸು. ಇಲ್ಲವಾದ್ರೆ ಫೇಲ್ ಮಾಡ್ತೇನೆ ಅಂತಾ ಬೆದರಿಸಿ ಪ್ರಾಧ್ಯಾಪಕನೋರ್ವ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಣೆಬೆನ್ನೂರು ತಾಲೂಕಿನ ಹನುಮನಟ್ಟಿ ಗ್ರಾಮದಲ್ಲಿರುವ ಕೃಷಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ನೂರ್ ನವಾಜ್ ವಿರುದ್ದ ರಾಣೆಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ.  ಯುವತಿ ಕೃಷಿ ಮಹಾವಿದ್ಯಾಲಯದಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದು, ಪ್ರಾಧ್ಯಾಪಕ ಡಾ.ನೂರ್ ನವಾಜ್ ಅವರು, ನೀನಂದ್ರೆ ನನಗೆ ಇಷ್ಟ. ನನ್ನ ಆಸೆ ಈಡೇರಿಸು. ಇಲ್ಲವಾದ್ರೆ ನಿನ್ನನ್ನು ಫೇಲ್ ಮಾಡುತ್ತೇನೆ ಎಂದು ಬೆದರಿಕೆಯೊಡ್ಡಿ ನನ್ನ ಮೇಲೆ  ಅವರ ಕೊಠಡಿಯಲ್ಲಿಯೇ ಅತ್ಯಾಚಾರವೆಸಗಿದ್ದಾರೆ. ಅಷ್ಟೇ ಅಲ್ಲದೇ ನನ್ನನ್ನು ಮನೆಗೆ ಕರೆದೊಯ್ದು ನನ್ನ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ್ದಾರೆಂದು ವಿದ್ಯಾರ್ಥಿನಿ ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ರಾಣಿಬೆನ್ನೂರು ಗ್ರಾಮಾಂತರ ಠಾಣೆಯ ಪೊಲೀಸರು ಆರೋಪಿ ಸಹಾಯಕ ಪ್ರಾಧ್ಯಾಪಕನನ್ನು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು