Friday, January 24, 2025
ಹೆಚ್ಚಿನ ಸುದ್ದಿ

ದೈಹಿಕ ಶಿಕ್ಷಕನೊಂದಿಗೆ ತಾಯಿ- ಮಗಳ ಅಕ್ರಮ ಸಂಬಂಧ ; ಬುದ್ದಿವಾದ ಹೇಳಿದ ತಂದೆಯ ಹತ್ಯೆ-ಕಹಳೆ ನ್ಯೂಸ್

ದಾವಣಗೆರೆ : ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಳಗಟ್ಟೆಯಲ್ಲಿ ತಾಯಿ, ಮಗಳು ದೈಹಿಕ ಶಿಕ್ಷಕನೊಬ್ಬನ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದರು. ಇದನ್ನು ಪ್ರಶ್ನಿಸಿದ ತಂದೆಯನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕುಳಗಟ್ಟೆ ಗ್ರಾಮದ 70 ವರ್ಷದ ಮಂಜಪ್ಪ ಎಂಬಾತನೇ ಕೊಲೆಯಾದ ದುರ್ದೈವಿಯಾಗಿದ್ದಾರೆ. ಮಂಜಪ್ಪ ಅವರ ಮಗಳು ಉಷಾ ತನ್ನ ಗಂಡನನ್ನು ತೊರೆದು ಮಗಳು ಸಿಂಧು ಜೊತೆಗೆ ತಂದೆ ಮಂಜಪ್ಪನ ಮನೆಯಲ್ಲಿ ವಾಸವಾಗಿದ್ದಳು. ಈ ವೇಳೆಯಲ್ಲಿ ಉಷಾಗೆ ಎರಡು ಮಕ್ಕಳ ತಂದೆಯಾಗಿರುವ ದೈಹಿಕ ಶಿಕ್ಷಕನ ಜೊತೆಗೆ ಅನೈತಿಕ ಸಂಬಂಧ ಬೆಳೆಸಿದ್ದಾಳೆ. ತಾಯಿಯ ಜೊತೆಗೆ ಮಗಳು ಸಿಂಧೂ ಕೂಡ ಅದೇ ಸಲುಗೆಯಲ್ಲಿ ದೈಹಿಕ ಶಿಕ್ಷಕನೊಂದಿಗೆ ಸಂಬಂಧವನ್ನು ಹೊಂದಿದ್ದಳು. ಮಗಳು ಹಾಗೂ ಮೊಮ್ಮಗಳು ದೈಹಿಕ ಶಿಕ್ಷಕನ ಜೊತೆಗೆ ಅನೈತಿಕ ಸಂಬಂಧ ಹೊಂದಿರುವ ವಿಷಯ ತಿಳಿಯುತ್ತಿದ್ದಂತೆಯೇ ಮಂಜಪ್ಪ ಇಬ್ಬರಿಗೂ ಬುದ್ದಿಮಾತು ಹೇಳಿದ್ದಾರೆ. ಇದರಿಂದ ಕೋಪಗೊಂಡ ತಾಯಿ, ಮಗಳು ತಮ್ಮ ಅನೈತಿಕ ಸಂಬಂಧಕ್ಕೆ ಮುಳುವಾಗಿದ್ದ ಮಂಜಪ್ಪನನ್ನು ಕೊಲ್ಲುವುದಕ್ಕೆ ಪ್ಲ್ಯಾನ್ ಮಾಡಿದ್ದಾರೆ. ಮಂಜಪ್ಪ ಜಮೀನಿನಲ್ಲಿ ಕೆಲಸ ಮಾಡುತ್ತಿರುವ ವೇಳೆಯಲ್ಲಿ ತಾಯಿ, ಮಗಳು ಮತ್ತು ಶಿಕ್ಷಕ ಸೇರಿಕೊಂಡು ಮಾರಕಾಸ್ತ್ರಗಳಿಂದ ಮಂಜಪ್ಪನ ತಲೆಗೆ ಹಲ್ಲೆ ನಡೆಸಿ ಕೊಲೆ ಮಾಡಿದ್ದು, ನಂತರ ಮೃತ ದೇಹವನ್ನು ನಾಲೆಗೆ ಎಸೆದು ಕಾಲು ಜಾರಿ ಬಿದ್ದಿರುವುದಾಗಿ ಬಿಂಬಿಸಿದ್ದಾರೆ. ಆದರೆ ಮೃತ ದೇಹದ ಮೈಮೇಲೆ ಗಾಯದ ಗುರುತುಗಳಿದ್ದು ಪೊಲೀಸರಿಗೆ ಅನುಮಾನ ಮೂಡಿತ್ತು. ನಂತರದಲ್ಲಿ ತಾಯಿ, ಮಗಳು ಮತ್ತು ಶಿಕ್ಷಕನನ್ನು ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ದಾಖಲು ಮಾಡಿಕೊಂಡಿರುವ ಹೊನ್ನಾಳಿ ಠಾಣೆಯ ಪೊಲೀಸರು ಮಗಳು, ಮೊಮ್ಮಗಳು, ಶಿಕ್ಷಕನನ್ನು ಬಂಧಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು