Sunday, November 24, 2024
ಹೆಚ್ಚಿನ ಸುದ್ದಿ

ನಮ್ಮ ಈ ಗ್ರಾಮೀಣ ಸಂಸ್ಕೃತಿಯನ್ನು ಯುವಕರು ಬೆಳೆಸಿಕೊಂಡು ಹೋಗಬೇಕು; ಪ್ರಾಂಶುಪಾಲರಾದ ಪ್ರೋ.ನಾರಾಯಣ-ಕಹಳೆ ನ್ಯೂಸ್

ಬಾಗೇಪಲ್ಲಿ : ಜಾನಪದ ಕಲೆಗಳಲ್ಲಿ ಗ್ರಾಮೀಣ ಸೊಗಡು, ವೈವಿಧ್ಯತೆ ಇರುತ್ತದೆ. ಭಾವನೆಗಳನ್ನು ಒಳಗೊಂಡಿರುವ ನಮ್ಮ ಈ ಗ್ರಾಮೀಣ ಸಂಸ್ಕೃತಿಯನ್ನು ಯುವಕರು ಬೆಳೆಸಿಕೊಂಡು ಹೋಗಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ನಾರಾಯಣ ರವರು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪಟ್ಟಣದ ಹೊರವಲಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಶುಕ್ರವಾರ ಚಿಕ್ಕಬಳ್ಳಾಪುರದ ಸರ್.ಎಂ.ವಿ.ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜನೆ ಮಾಡಿದ್ದ ಜಾನಪದ ಸಾಂಸ್ಕೃತಿಕ ಸಂಭ್ರಮ-2021 ಕಾರ್ಯಕ್ರಮವನ್ನು ತಮಟೆ ಹೊಡೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೋ.ವೈ.ನಾರಾಯಣ ಅವರು, ಬಾಗೇಪಲ್ಲಿ ಆಧುನಿಕ ಕಾಲದಲ್ಲಿಯೂ ಜನಪದ, ಕಲೆ, ಸಂಸ್ಕೃತಿಗಳು ನಮ್ಮತನ ಬೇರುಗಳಾಗಿವೆ. ಜನಪರ ಸಂಸ್ಕೃತಿ ಜನಮೂಲ ಮತ್ತು ಜೀವಮೂಲವು ಆಗಿದೆ. ನೆಲ ಸಂಸ್ಕೃತಿಯ ಉಳಿವೇ ನಿಜವಾದ ಜನಸಂಸ್ಕೃತಿಯ ಉಳಿವು ಆಗಿದೆ ಎಂದು ಕರೆ ನೀಡಿದರು. ಹಿಂದಿನ ಕಾಲದಲ್ಲಿ ಗ್ರಾಮೀಣ ಸಂಸ್ಕೃತಿ, ಕಲೆ, ಸಾಹಿತ್ಯ, ಜನಪದ ಹಾಡುಗಳು ಇಂದಿಗೂ ಪ್ರಸ್ತುತವಾಗಿದೆ. ಗ್ರಾಮೀಣ ಕ್ರೀಡೆಗಳು ಸಹ ಹೊರತಲ್ಲ. ಗ್ರಾಮೀಣ ಭಾಗದಲ್ಲಿ ತಮ್ಮತನ ಉಳಿಸಿಕೊಂಡು ಬಂದಿದೆ. ರಾಗಿ ಬಿತ್ತುವ, ಬೀಸುವ ಪದಗಳು, ನಾಟಕಗಳು, ಮಕ್ಕಳಿಗೆ ಊಟ ತಿನ್ನಿಸುವ, ಮಲಗಿಸುವ ಸಂರ್ಧಭದಲ್ಲಿ ಚಂದಮಾಮವನ್ನು ತೋರಿಸಿ ಹಾಡುವ ಹಾಡುಗಳು ಸಂದೇಶವನ್ನು ಸಾರಿದೆ. ಜನಪದರು ಮೂಲತಃ ಅಕ್ಷರಸ್ಥರಲ್ಲ ತತ್ವಪದಗಳು, ಭಜನೆಗಳು, ಕೊಂಡಮಾಮನ ಹಾಡುಗಳು ಇಂದಿಗೂ ಮನದಲ್ಲಿ ಉಳಿದಿದೆ ಎಂದು ತಿಳಿಸಿದರು. ಇಂತಹಾ ಜನಪದರ ಹಾಗೂ ಜಾನಪದವನ್ನು ಮತ್ತಷ್ಟು ಉಳಿಸಿ-ಬೆಳೆಸಬೇಕು. ಭಾವಗೀತೆ, ಜನಪದಗೀತೆಗಳು, ಕೋಲಾಟಗಳು ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿಕೊಂಡಿದೆ. ಇದರಿಂದ ಯುವಜನರು ಇಂತಹಾ ಹಾಡುಗಳನ್ನು ಕಲಿಯಬೇಕು. ಮನಸ್ಸಿಗೆ ನೆಮ್ಮದಿ, ಉಲ್ಲಾಸವನ್ನು ನೀಡುತ್ತದೆ ಎಂದು ಹೇಳಿದರು. ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಕೆ.ಎಂ.ನಯಾಜ್ ಅಹಮದ್ ಮಾತನಾಡಿ, ‘ಜಾನಪದದಲ್ಲಿ ನೂರಾರು ಪ್ರಕಾರಗಳಿವೆವೆ. ಆದರೆ ಅವುಗಳಲ್ಲಿ ಕೆಲವು ಮಾತ್ರ ಬಳಕೆಯಲ್ಲಿದ್ದು ಉಳಿದವುಗಳು ನಮ್ಮಿಂದ ಕಣ್ಮರೆಯಾಗುತ್ತಿವೆ. ನಮ್ಮ ಜೀವನದ ಭಾಗವಾಗಿರುವ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದು ಹೇಳಿದರು ಸಂರಕ್ಷಣೆ ಮಾಡಲು ಹಾಗೂ ನೆಲ, ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಪತ್ಯೇತರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ, ಕಾರ್ಯಾಗಾರ, ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಲಿಕೆಯ ಮಟ್ಟ ಹೆಚ್ಚಿಸಲಾಗಿದೆ. ವಿದ್ಯಾರ್ಥಿಗಳು ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಕಲಿಯಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರದ ಸರ್ ಎಂ.ವಿ.ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮುಖ್ಯಸ್ಥರಾದ ಸೋ.ಸು.ನಾಗೇಂದ್ರನಾಥ್, ಜಿಲ್ಲಾ ಯುವ ಪ್ರಶಸ್ತಿ ವಿಜೇತ, ಜಾನಪದ ಗಾಯಕ ಮುನಿರಾಜುರವರು ಗೀಗೀಪದ, ಜಾನಪದ, ಭಾವಗೀತೆಗಳ ಜೊತೆಗೆ ಒಳಿತು ಮಾಡು ಮನಸ….., ಸಿದ್ದಾಪ್ಪಾಜಿಯ ತತ್ವಪದಗಳನ್ನು ಹಾಡಿ ರಂಜಿಸಿದರು. ನೆರೆದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಲಾವಿದರ ಜೊತೆಗೆ ತಮಟೆ, ಹಾರ್ಮೋನಿಯಂ, ತಬಲ ಹೊಡೆದು ಸಾಂಸ್ಕೃತಿಕ ಲೋಕದಲ್ಲಿ ಮಿಂದೆದ್ದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕ ಡಾ.ಬಿ.ಎನ್.ಪ್ರಭಾಕರ್, ಗ್ರಂಥಪಾಲಕ ಡಾ.ಸಿ.ಎಸ್.ವೆಂಕಟರಾಮರೆಡ್ಡಿ ಅನಿಲ್, ಅಧೀಕ್ಷಕಿ ಅನಿತಾ, ಕನ್ನಡ ಕಲಾ ಸಂಘದ ಅಧ್ಯಕ್ಷ ಪಿ.ಎಸ್.ರಾಜೇಶ್ ಇದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು