Friday, January 24, 2025
ಹೆಚ್ಚಿನ ಸುದ್ದಿ

ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ; ನಾಗವೇಣಿ ನಾರಾಯಣಸ್ವಾಮಿ-ಕಹಳೆ ನ್ಯೂಸ್

ಬಾಗೇಪಲ್ಲಿ : ಮಹಿಳೆಯರು ತಮಗೆ ದೊರೆತ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಮತ್ತು ಕುಟುಂಬದ ಆಧಾರವಾಗಿರಬೇಕು ಎಂದು ಪ್ರಿಯಾಂಕ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಘಟನೆಯ ಜಿಲ್ಲಾ ಸಂಯೋಜಕರಾದ ಶ್ರೀಮತಿ ನಾಗವೇಣಿ ನಾರಾಯಣಸ್ವಾಮಿ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಬಾಗೇಪಲ್ಲಿ ಕಸಬಾ ಹೋಬಳಿ ಪುಟ್ಟಪರ್ತಿ ಗ್ರಾಮದಲ್ಲಿ ಸುಮಾರು 50 ಮಹಿಳೆಯರಿಗೆ ಮೂರು ತಿಂಗಳು ಸಂಸ್ಥೆಯಿಂದ ತರಬೇತಿ ನೀಡಿ ಹಾಗೂ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಳು ರಿಯಾಯಿತಿ ದರದಲ್ಲಿ ಹೋಲಿಗೆ ಯಂತ್ರಗಳನ್ನು ವಿತರಣೆ ಮಾಡಿ ಮಾತನಾಡಿ ಮಹಿಳೆಯರು ತಮಗೆ ದೊರೆತ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಮತ್ತು ಕುಟುಂಬಕ್ಕೆ ಆಧಾರವಾಗಬೇಕು ಎಂದು ಹೇಳಿದರು.

ಇದರ ಜೊತೆಗೆ ತಮ್ಮ ಸಂಸ್ಥೆಯಲ್ಲಿ ಯಾವುದೇ ವಸ್ತುಗಳನ್ನು ಖರೀದಿಸಲು ರೂ 5000/- ಸಂಸ್ಥೆಯ ವತಿಯಿಂದ ಒಂದು ಕೋಪನ್ ನೀಡಲಾಗಿದೆ ಎಂದು ಹೇಳಿದರು. ನಮ್ಮ ಸಂಸ್ಥೆ ಸದಾ ಸೇವೆಯಲ್ಲಿ ಇರುತ್ತವೆ ಹಾಗೂ ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿಸಲು ಪಣ ತೊಡಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ನಾಗವೇಣಿ ನಾರಾಯಣ ಸ್ವಾಮಿ, ಸ್ವರ್ಣ ಅಮರನಾಥ್, ತಾಲೂಕು ಸಂಯೋಜಕರಾದ ಬಿ.ಎನ್.ಮಂಜುಳಾ, ತಟ್ಟಹಳ್ಳಿ ಮುನಿರಾಜ್ , ರಾಧಮ್ಮ, ಲೋಕೇಶ್ , ವೆಂಕಟರತ್ನಮ್ಮ, ಹಾಗೂ ಪುಟ್ಟಪರ್ತಿ ಗ್ರಾಮಸ್ಥರು ಪಾಲ್ಗೊಂಡಿದ್ದರು.