Saturday, November 23, 2024
ಹೆಚ್ಚಿನ ಸುದ್ದಿ

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇದರ ಆಶ್ರಯದ ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ನಡೆದ ಸರಸ್ವತಿ ಪೂಜೆ-ಕಹಳೆ ನ್ಯೂಸ್

ಕಲ್ಲಡ್ಕ : ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇದರ ಆಶ್ರಯದ ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ನಡೆದ ಸರಸ್ವತಿ ಪೂಜೆಗೆ ವಿದ್ಯಾರ್ಥಿಗಳು ಹರಿವಾಣದಲ್ಲಿ ಸರಸ್ವತಿ ಭಾವಚಿತ್ರ ಹಾಗೂ ಹೂವಿನೊಂದಿಗೆ ಆಗಮಿಸಿ ಮಂದಿರದ ಮುಂಭಾಗದಲ್ಲಿ ಸಾಲಾಗಿ ಉಪಸ್ಥಿತರಾದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಶೆಕೋಡಿ ಸೂರ್ಯಭಟ್ ಹಾಗೂ ಅವರ ಬಳಗದವರು ಸರಸ್ವತಿ ಮಂತ್ರವನ್ನು ಪಠಿಸಿ ಪೂಜಾ ಕಾರ್ಯವನ್ನು ನಡೆಸಿಕೊಟ್ಟರು. ಎಲ್ಲಾ ವಿದ್ಯಾರ್ಥಿಗಳು ಪೂಜೆಗೆ ಕುಳಿತು ಪೂಜಾ ವಿಧಾನಗಳನ್ನು ಮಾಡಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾಕೇಂದ್ರ ಬೆಳೆದು ಬಂದರೀತಿ ವಿವರಿಸಿ ಸರಸ್ವತಿ ಪೂಜೆಯ ಮಹತ್ವನ್ನು ತಿಳಿಸಿದರು. ದೇಶದಲ್ಲಿ ಅನೇಕ ದೇವಸ್ಥಾನಗಳು ಇದ್ದಂತೆ ವಿಶ್ವಕ್ಕೆ ಭಾರತವೇ ದೇವಸ್ಥಾನ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿದ್ಯಾಕೇಂದ್ರದ ವಾರ್ತಾಪತ್ರ ಸರಯೂ ಪತ್ರಿಕೆಯ ದಶಮಾನೋತ್ಸವದ ಬಗ್ಗೆ ಮಾತನಾಡಿ ಪತ್ರಿಕೆ ಇದೇ ರೀತಿಯಲ್ಲಿ ಇನ್ನೂ ಮುಂದಕ್ಕೆ ಬೆಳೆಯಲಿ ಎಂದು ಆಶಿಸಿದರು. ಶ್ರೀ ಚಿತ್ರಾಪುರ ಮಠ, ಮಂಗಳೂರು ಇಲ್ಲಿನ ಪೂಜ್ಯ ಸ್ವಾಮಿಜಿಯವರು ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು ಸರಯೂ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಆಶೀರ್ವಚನ ಮಾಡಿದರು. ಕಾರ್ಯಕ್ರಮದಲ್ಲಿ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ಸಹಸಂಚಾಲಕ ರಮೇಶ್‍ಎನ್, ಎಲ್ಲಾ ವಿಭಾಗದ ಮುಖ್ಯಸ್ಥರು, ಶಿಕ್ಷಕರು ಶಿಕ್ಷಕೇತರರು, ಪೋಷಕರು ಉಪಸ್ಥಿತರಿದ್ದರು.