ಯೋಗ್ಯ ಸಾಧನೆಯನ್ನು ನಿಯಮಿತ ಮಾಡಿದರೆ ಆಪತ್ಕಾಲದಲ್ಲಿ ದೈವೀ ಸಹಾಯದಿಂದ ನಮ್ಮ ರಕ್ಷಣೆಯಾಗುವುದು ! ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಶ್ರೀ. ಶಾನ್ ಕ್ಲಾರ್ಕ್ -ಕಹಳೆ ನ್ಯೂಸ್
ಅತ್ಯಂತ ಪ್ರತಿಕೂಲ ಹವಾಮಾನಕ್ಕೆ ಸಂಬಂಧಿಸಿದ ಘಟನೆಗಳು ಮತ್ತು ನೈಸರ್ಗಿಕ ಆಪತ್ತುಗಳ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಹವಾಮಾನದಲ್ಲಿನ ಕೆಟ್ಟ ಬದಲಾವಣೆಯ ಹಿಂದೆ ಮನುಷ್ಯನ ಕೈವಾಡವಿದೆ, ಎಂದು ವಿಜ್ಞಾನಿಗಳ ಅಭಿಪ್ರಾಯವಾಗಿದೆ; ಆದರೆ ಮನುಷ್ಯನು ಯೋಗ್ಯ ಸಾಧನೆಯನ್ನು ಆರಂಭಿಸಿದರೆ ಮತ್ತು ಅದನ್ನು ನಿಯಮಿತವಾಗಿ ಮಾಡುತ್ತಾ ಹೆಚ್ಚಿಸುತ್ತಾ ಹೋದರೆ ನಮ್ಮಲ್ಲಿ, ಹಾಗೆಯೇ ನಮ್ಮ ಸುತ್ತಲೂ ಸಾತ್ತ್ವಿಕತೆಯು ನಿರ್ಮಾಣವಾಗುತ್ತದೆ. ಆದುದರಿಂದ ಒಂದು ವೇಳೆ ವಾತಾವರಣದಲ್ಲಿ ಕೆಟ್ಟ ಬದಲಾವಣೆಯಾದರೂ, ಸಾಧನೆಯನ್ನು ಮಾಡುವವರಿಗೆ ಮುಂಬರುವ ಆಪತ್ಕಾಲದಲ್ಲಿ ದೈವೀ ಸಹಾಯವು ದೊರಕಿ ಅವರ ರಕ್ಷಣೆಯಾಗುತ್ತದೆ, ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಶ್ರೀ. ಶಾನ್ ಕ್ಲಾರ್ಕ್ ಇವರು ಸಂಶೋಧನಾ ಪ್ರಬಂಧವನ್ನು ಪ್ರಸ್ತುತ ಪಡಿಸುವಾಗ ಮಂಡಿಸಿದರು.
ಅವರು ‘ಹವಾಮಾನದಲ್ಲಿನ ಬದಲಾವಣೆ ಮತ್ತು ಅವುಗಳ ಮೇಲಿನ ಉಪಾಯ ಇವುಗಳಿಗೆ ಸಂಬಂಧಿಸಿದ ಆಧ್ಯಾತ್ಮಿಕ ದೃಷ್ಟಿಕೋನ’, ಈ ಕುರಿತಾದ ಸಂಶೋಧನಾ ಪ್ರಬಂಧವನ್ನು 19 ಮಾರ್ಚ್ 2021 ರಂದು ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ‘4 ನೇ ಇಂಟರನ್ಯಾಶನಲ್ ಕಾನ್ಫರನ್ಸ್ ಆನ್ ಸಸ್ಟೆನೆಬಲ್ ಡೆವೆಲಪ್‍ಮೆಂಟ್’ ಈ ಅಂತರರಾಷ್ಟ್ರೀಯ ಪರಿಷತ್ತಿನಲ್ಲಿ ಮಂಡಿಸಿದರು. ‘ಗ್ಲೋಬಲ್ ಅಕ್ಯಾಡಮಿಕ್ ರಿಸರ್ಚ್ ಇನಸ್ಟಿಟ್ಯೂಟ್’ ಈ ಪರಿಷತ್ತಿನ ಆಯೋಜನೆ ಮಾಡಿತ್ತು. ಪರಾತ್ಪರ ಗುರು ಡಾ. ಆಠವಲೆಯವರು ಈ ಸಂಶೋಧನಾ ಪ್ರಬಂಧದ ಲೇಖಕರಾಗಿದ್ದು ಶ್ರೀ. ಶಾನ್ ಕ್ಲಾರ್ಕ್ ಇವರು ಸಹಲೇಖಕರಾಗಿದ್ದಾರೆ. ಮೇಲಿನ ಸಂಶೋಧನಾ ಪ್ರಬಂಧವು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ವೈಜ್ಞಾನಿಕ ಪರಿಷತ್ತಿನಲ್ಲಿ ಪ್ರಸ್ತುತಪಡಿಸಿದ 68 ನೇ ಸಂಶೋಧನಾ ಪ್ರಬಂಧವಾಗಿತ್ತು. ಇದಕ್ಕೂ ಮೊದಲು ವಿಶ್ವವಿದ್ಯಾಲಯವು 15 ರಾಷ್ಟ್ರೀಯ ಮತ್ತು 52 ಅಂತರರಾಷ್ಟ್ರೀಯ ವೈಜ್ಞಾನಿಕ ಪರಿಷತ್ತುಗಳಲ್ಲಿ ಸಂಶೋಧನಾ ಪ್ರಬಂಧವನ್ನು ಪ್ರಸ್ತುತಪಡಿಸಿದೆ. ಇವುಗಳ ಪೈಕಿ 4 ಅಂತರರಾಷ್ಟ್ರೀಯ ಪರಿಷತ್ತುಗಳಲ್ಲಿ ವಿಶ್ವವಿದ್ಯಾಲಯಕ್ಕೆ ‘ಸರ್ವೋತ್ಕøಷ್ಠ ಸಂಶೋಧನಾ ಪ್ರಬಂಧ’ ಪ್ರಶಸ್ತಿಯು ಪ್ರಾಪ್ತವಾಗಿದೆ. ಶ್ರೀ. ಶಾನ್ ಕ್ಲಾರ್ಕ್ ಇವರು ಮುಂದೆ ಮಾತನಾಡುತ್ತಾ, ಯಾವುದೇ ಘಟನೆಯ ಮೂಲಭೂತ ಕಾರಣಮಿಮಾಂಸೆಯ ಅಧ್ಯಯನ ಮಾಡುವಾಗ ಅದರ ಆಧ್ಯಾತ್ಮಿಕ ಸ್ತರದಲ್ಲಿಯೂ ಅಧ್ಯಯನವಾಗುವುದು ಆವಶ್ಯಕವಾಗಿರುತ್ತದೆ. ಯಾವಾಗ ಹವಾಮಾನದಲ್ಲಿ ಸ್ವಾಭಾವಿಕ ಅಪೇಕ್ಷೆಗಿಂತ ವಿಪರೀತ ವಿಚಿತ್ರ ಬದಲಾವಣೆಯಾಗುವುದು ಕಂಡು ಬರುವುದೋ, ಆಗ ಅದರ ಹಿಂದೆ ನಿಶ್ಚಿತವಾಗಿಯೂ ಆಧ್ಯಾತ್ಮಿಕ ಕಾರಣವಿರುತ್ತದೆ. ಪೃಥ್ವಿಯ ಸಾತ್ತ್ವಿಕತೆಯು ಕಡಿಮೆಯಾದರೆ ಮತ್ತು ತಾಮಸಿಕತೆಯು ಹೆಚ್ಚಾದರೆ, ಮಾನವನ ಅಧೋಗತಿಯಾಗಿ ಪೃಥ್ವಿಯಲ್ಲಿ ಸಾಧನೆಯನ್ನು ಮಾಡುವವರ ಒಟ್ಟು ಸಂಖ್ಯೆಯು ಕಡಿಮೆಯಾಗುತ್ತದೆ. ಮನುಷ್ಯನ ಸ್ವಭಾವದೋಷ ಮತ್ತು ಅಹಂನ ಪ್ರಮಾಣವು ಹೆಚ್ಚಾಗಿ ಅವನ ಪರಿಸರದ ಕಡೆಗೆ ಅಕ್ಷಮ್ಯ ದುರ್ಲಕ್ಷವಾಗುತ್ತದೆ. ಸ್ವಲ್ಪದರಲ್ಲಿ, ಅಧರ್ಮವು ಹೆಚ್ಚಾಗುತ್ತದೆ. ಸೂಕ್ಷ್ಮದಲ್ಲಿನ ಶಕ್ತಿಶಾಲಿ ಕೆಟ್ಟ ಶಕ್ತಿಗಳು ಪರಿಸರದಲ್ಲಿನ ಈ ಅಧೋಗತಿಯ ದುರ್ಲಾಭ ಪಡೆದು ತಮೋಗುಣವನ್ನು ಹೆಚ್ಚಿಸುತ್ತವೆ, ಹಾಗೆಯೇ ಮನುಷ್ಯನ ಮೇಲೆ ಪ್ರತಿಕೂಲ ಪರಿಣಾಮವನ್ನು ಮಾಡುತ್ತವೆ. ಯಾವ ರೀತಿ ಧೂಳು ಮತ್ತು ಹೊಗೆ ಇವುಗಳಿಂದ ಸ್ಥೂಲ ಸ್ತರದಲ್ಲಿ ಪ್ರದೂಷಣೆಯಾಗುತ್ತದೆ ಎಂದು ನಾವು ಪ್ರತಿದಿನ ಸ್ವಚ್ಛತೆಯನ್ನು ಮಾಡುತ್ತೇವೆಯೋ, ಅದೇ ರೀತಿ ಅಧರ್ಮಾಚರಣೆಯಿಂದಾಗುವ ರಜ-ತಮಗಳಲ್ಲಿನ ಹೆಚ್ಚಳದಿಂದ ಸೂಕ್ಷ್ಮ ಸ್ತರದಲ್ಲಿ ಪ್ರದೂಷಣೆಯಾಗುತ್ತದೆ. ನಿಸರ್ಗವು ವಾತಾವರಣದಲ್ಲಿನ ಈ ಸೂಕ್ಷ್ಮ ರಜ-ತಮದ ಸ್ವಚ್ಛತೆಯನ್ನು ನೈಸರ್ಗಿಕ ಆಪತ್ತುಗಳ ಮಾಧ್ಯಮದಿಂದ ಮಾಡುತ್ತದೆ. ಈ ಪ್ರಕ್ರಿಯೆಯ ಸವಿಸ್ತಾರ ಮಾಹಿತಿಯನ್ನು ‘ಚರಕ ಸಂಹಿತೆ’ಯಲ್ಲಿ ಕೊಡಲಾಗಿದೆ. ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ಜಗತ್ತಿನಾದ್ಯಂತದ 32 ದೇಶಗಳಲ್ಲಿನ ಸುಮಾರು 1000 ಮಣ್ಣಿನ ಮಾದರಿಗಳಲ್ಲಿನ ಸೂಕ್ಷ್ಮ ಸ್ಪಂದನಗಳ ಅಧ್ಯಯನ ಮಾಡಿತು. ಈ ಅಧ್ಯಯನವು ಆಧುನಿಕ ವೈಜ್ಞಾನಿಕ ಉಪಕರಣಗಳು ಮತ್ತು ಸೂಕ್ಷ್ಮ ಪರೀಕ್ಷಣೆ ಇವುಗಳ ಮಾಧ್ಯಮಗಳಿಂದ ಮಾಡಲಾಗಿದೆ. ಈ ಅಧ್ಯಯನದಲ್ಲಿ ಶೇ. 80 ರಷ್ಟು ಮಾದರಿಗಳಲ್ಲಿ ತೊಂದರೆದಾಯಕ ಸ್ಪಂದನಗಳಿರುವುದು ಕಂಡು ಬಂದಿತು. ಇದರಲ್ಲಿ ಮಣ್ಣಿನ ಕೆಲವು ಮಾದರಿಗಳನ್ನು ನಾವು ಅದೇ ಸ್ಥಳದಿಂದ 2018 ಮತ್ತು 2019 ರಲ್ಲಿ ತೆಗೆದುಕೊಂಡಿದ್ದೆವು. ವೈಜ್ಞಾನಿಕ ಉಪಕರಣಗಳಿಂದ ಮಾಡಿದ ಪರೀಕ್ಷಣೆಯಲ್ಲಿ ಕೇವಲ ಒಂದು ವರ್ಷದ ಕಾಲಾವಧಿಯಲ್ಲಿ ಈ ಮಾದರಿಗಳಲ್ಲಿನ ನಕಾರಾತ್ಮಕ ಊರ್ಜೆಯಲ್ಲಿ ಶೇ. 100 ರಿಂದ 500 ರಷ್ಟು ಹೆಚ್ಚಳವಾಗಿರುವುದು ಕಂಡು ಬಂದಿತು. ಸ್ವಲ್ಪದರಲ್ಲಿ ಹೇಳಬೇಕೆಂದರೆ ಜಗತ್ತಿನಾದ್ಯಂತ (ಕೆಲವು ಧಾರ್ಮಿಕ ಸ್ಥಳಗಳಲ್ಲಿಯೂ) ನಕಾರಾತ್ಮಕತೆಯಲ್ಲಿ ಬಹಳಷ್ಟು ಹೆಚ್ಚಳವಾಗಿರುವುದು ಕಂಡು ಬಂದಿದೆ, ಎಂದರು. ಕೊನೆಗೆ ‘ಹವಾಮಾನದಲ್ಲಿನ ಈ ಅಪಾಯಕಾರಿ ಬದಲಾವಣೆಯ ಸಂದರ್ಭದಲ್ಲಿ ಏನು ಮಾಡಬಹುದು ?’ ಈ ಬಗ್ಗೆ ಮಾತನಾಡಿದೆ ಶ್ರೀ. ಶಾನ್ ಕ್ಲಾರ್ಕ್ ಇವರು, ಈ ಸಮಸ್ಯೆಯ ಮೂಲಭೂತ ಕಾರಣ ಆಧ್ಯಾತ್ಮಿಕವಾಗಿರುವುದರಿಂದ ಹವಾಮಾನದಲ್ಲಿನ ಸಕಾರಾತ್ಮಕ ಬದಲಾವಣೆ ಮತ್ತು ಅದರ ರಕ್ಷಣೆ ಇವುಗಳ ಉಪಾಯಯೋಜನೆಯೂ ಮೂಲದಲ್ಲಿ ಆಧ್ಯಾತ್ಮಿಕ ಸ್ತರದ್ದಾಗಿರುವುದು ಆವಶ್ಯಕವಾಗಿದೆ. ಸಂಪೂರ್ಣ ಸಮಾಜವು ಯೋಗ್ಯ ಸಾಧನೆಯನ್ನು ಮಾಡತೊಡಗಿದರೆ, ಹವಾಮಾನದಲ್ಲಿನ ಅಪಾಯಕಾರಿ ಬದಲಾವಣೆ ಮತ್ತು ಮೂರನೇಯ ಮಹಾಯುದ್ಧ ಇವುಗಳಿಂದಾಗಿ ಬರಲಿರುವ ಭೀಕರ ಸಂಕಟಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ಹೀಗಿದ್ದರೂ ಪ್ರತ್ಯಕ್ಷದಲ್ಲಿ ನಾವು ಕೇವಲ ನಮಗಷ್ಟೇ ಸಹಾಯ ಮಾಡಿಕೊಳ್ಳಬಲ್ಲೆವು. ಇದಕ್ಕಾಗಿ ಸರ್ವೋತ್ತಮ ಉಪಾಯವೆಂದರೆ ಸಾಧನೆಯನ್ನು ಆರಂಭಿಸುವುದು ಅಥವಾ ಈಗಾಗಲೆ ಆರಂಭಿಸಿದ್ದರೆ ಅದನ್ನು ಹೆಚ್ಚಿಸುತ್ತಾ ಹೋಗುವುದು. ಕಾಲಮಹಿಮೆಗನುಸಾರ ಸದ್ಯದ ಕಾಲಕ್ಕಾಗಿ ನಾಮಜಪವು ಸುಲಭ ಮತ್ತು ಪ್ರಭಾವಿ ಉಪಾಯವಾಗಿದೆ. ಸದ್ಯದ ಕಾಲಕ್ಕಾಗಿ ‘ಓಂ ನಮೋ ಭಗವತೇ ವಾಸುದೇವಾಯ |’, ಇದು ಆಧ್ಯಾತ್ಮಿಕ ದೃಷ್ಟಿಯಿಂದ ಎಲ್ಲಕ್ಕಿಂತ ಉಪಯುಕ್ತವಾದ ನಾಮಜಪವಾಗಿದೆ, ಎಂದು ಸಂತರು ಹೇಳಿದ್ದಾರೆ’, ಎಂದು ಹೇಳಿದರು.