ಕೊಕ್ಕಡದ ಮಸೀದಿ ಉದ್ಘಾಟನೆಯ ವೇಳೆ ಹಿಂದೂ ಹುಡುಗಿಯರನ್ನು ಮುಸ್ಲಿಂ ಯುವಕರ ಮುಂದೆ ಪ್ರದರ್ಶನಕ್ಕಿಟ್ಟ ಬೇಜವಾಬ್ದಾರಿ ಶಾಲಾ ಶಿಕ್ಷಕ ವೃಂದ-ಕಹಳೆ ನ್ಯೂಸ್
ಕೊಕ್ಕಡ : ಸರಕಾರಿ ಶಾಲೆಯ ಹಿಂದೂ ಹುಡುಗಿಯರನ್ನು ಮಾರ್ಚ್ 19 ರಂದು ಕೊಕ್ಕಡದಲ್ಲಿ ನವೀಕರಣಗೊಂಡು ಉದ್ಘಾಟನೆಗೊಂಡ ಮಸೀದಿಗೆ ಆಮಂತ್ರಣ ಇತ್ತು ಅಂತ (ಊಟಕ್ಕೆ ಬಿರಿಯಾನಿ) ಕರೆದುಕೊಂಡು ಹೋಗಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಅಲ್ಲಿನ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದ ವಿದ್ಯಾರ್ಥಿಗಳನ್ನು ಅಧ್ಯಕ್ಷರ ಹಾಗೂ ಶಾಲಾ ಕಮಿಟಿಯ ಮತ್ತು ಮಕ್ಕಳ ಪಾಲಕರ ಅನುಮತಿ ಪಡೆಯದೆ ಕಣ್ಣುತಪ್ಪಿಸಿ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಈ ಸ್ವ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇದು ಎಷ್ಟರಮಟ್ಟಿಗೆ ಸರಿ ಎಂಬುದು ಚರ್ಚೆ ಆರಂಭಗೊಂಡಿದೆ. ಮೇಲ್ನೋಟಕ್ಕೆ ಇದು ಸೆಕ್ಯುಲರಿಸಂ. ಆದರೆ ದೇಶಾದ್ಯಂತ ಹೆಚ್ಚುತ್ತಿರುವ ಲವ್ ಜಿಹಾದ್, ತಿನ್ನುವ ಆಹಾರದಲ್ಲಿ ಉಗುಳುವಿಕೆ , ದಿನ ನಿತ್ಯ ನಡೆಯುತ್ತಿರುವ ಅನ್ಯಕೋಮಿನ ಯುವಕರ ಹಾವಳಿ ಮುಂತಾದ ಪ್ರಕರಣಗಳನ್ನು ನೋಡಿಯೂ ಮಕ್ಕಳ ಬಾಳಲ್ಲಿ ಚೆಲ್ಲಾಟ ಆಡೋದು ಸರಿಯೇ..? ಮೊದಲೇ ಲವ್ ಜಿಹಾದ್ ಅನ್ನುವುದು ಅವಿಭಜಿತ ದಕ್ಷಿಣಕನ್ನಡದಲ್ಲಿ ಬರ್ನಿಂಗ್ ಮ್ಯಾಟರ್, ಸಮಾಜವನ್ನು ಕಿತ್ತು ತುಂಡರಿಸಿ ಬಿಟ್ಟಿದೆ. ಎಷ್ಟು ಮೊಬೈಲ್ ನಂಬರ್ಗಳು ಶೇರ್ ಆಗಿವೆಯೋ. 1997ರಲ್ಲಿ ನಡೆದ ಸೌಮ್ಯಾ ಭಟ್ ಕೊಲೆ ಪ್ರಕರಣ ಹಾಗೂ ತದನಂತರ ನಡೆದ ಅನಾಹುತಗಳು ಪುತ್ತೂರು ಆಸುಪಾಸಿನ ಜನರ ಮನಸ್ಸಿನಲ್ಲಿ ಉಳಿದಿರುವಾಗಲೇ ಇಂತಹಾ ನಿರ್ಧಾರ ಸರಿಯೇ..? ಏನಾದರೂ ಘಟನೆಗಳು ನಡೆದ ಮೇಲೆಯೇ ಎಚ್ಙರವಾಗೋದಾ..? ಪ್ರಸ್ತುತ ಕೊರೊನಾ ಸಮಯ ಬೇರೆ., ಹಲವು ಸಮಸ್ಯೆಗಳ ನಡುವೆ ಶಾಲೆ ತೆರೆಯುವುದೇ ಕಷ್ಟದಲ್ಲಿ, ಹಾಗಿರುವಾಗ ಮಕ್ಕಳನ್ನು ಹಿಂಡುಗಟ್ಟಿಗೊಂಡು ಕಳುಹಿಸುತ್ತೀರಲ್ಲಾ ಶಿಕ್ಷಕರೇ, ನಿಮಗೇ ಬಿರಿಯಾನಿ ತಿಂದು ಸಾಯಬಹುದಲ್ವಾ. ತಬ್ಲಿಗಿಯವರು ಮಾಡಿದ ಅವಾಂತರ ನೆನಪು ಇಲ್ವಾ..? ಏನ್ ನಮ್ಮ ಹೆಣ್ಣು ಮಕ್ಕಳನ್ನು ಪ್ರದರ್ಶನಕ್ಕೆ ಕರೆದುಕೊಂಡು ಹೋಗಿದ್ದಾ..? ಅಲ್ಲದೆ ಸ್ತ್ರೀಯರಿಗೆ ಮಸೀದಿ ಪ್ರವೇಶ ನಿಷಿದ್ಧ ಅಲ್ಲವೇ..? ಹಾಗಿರುವಾಗ ಸೆಕ್ಯುಲರಿಸಂನ ವೇಷ ತೊಟ್ಟು ಅದೂ ಅನ್ಯ ಧರ್ಮದ ಸ್ತ್ರೀಯರಿಗೆ ಆಹ್ವಾನ ನೀಡಿರುವ ಉದ್ದೇಶ ಏನು? ಇದು ದ್ವಿಮುಖ ನೀತಿ ಅಲ್ಲವೇ..? ಎಂದು ಹಿಂದೂ ಸಂಘಟನೆಯಲ್ಲಿ ಸಕ್ರೀಯರಾಗಿರುವ ತುಕಾರಾಂ ಅವರು ಶಾಲಾ ಆಡಳಿತ ಮಂಡಳಿಯನ್ನು ಪ್ರಶ್ನಿಸಿದ್ದಾರೆ.