ಆಸ್ಟರ್ ಮಿಮ್ಸ್ ಕೋಝಿಕೋಡ್‍ನಿಂದ ಆರ್ಥಿಕವಾಗಿ ದುರ್ಬಲ ಮಕ್ಕಳಿಗೆ ಉಚಿತ ಪಿಡಿಯಾಟ್ರಿಕ್ ಶಸ್ತ್ರಚಿಕಿತ್ಸೆ ನೆರವು-ಕಹಳೆ ನ್ಯೂಸ್
ಮಂಗಳೂರು : ಭಾರತದಲ್ಲಿರುವ ಅತ್ಯುತ್ತಮ ಪಾಶ್ವವಾಯು ಕೇಂದ್ರಗಳಲ್ಲಿ ಒಂದಾದ ಆಸ್ಟರ್ ಮಿಮ್ಸ್ ಕೋಝಿಕೋಡ್ ಆಸ್ವತ್ರೆಯೂ ಆರ್ಥಿಕವಾಗಿ ದುರ್ಬಲ ಮಕ್ಕಳಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮತ್ತು ಚಿಕಿತ್ಸೆಯನ್ನು ನೀಡಲು ಸಿದ್ದವಾಗಿದೆ.
ಸುಮಾರು 20 ಲಕ್ಷ ರೂ. ವೆಚ್ಚದ ಲಿವರ್ ಟ್ರ್ಯಾನ್ಸ್ ಪ್ಲ್ಯಾಂಟ್ , ಸುಮಾರು 25ಲಕ್ಷ ರೂ. ಖರ್ಚಾಗುವ ಬೋನ್ ಮ್ಯಾರೊ ಟ್ರ್ಯಾನ್ಸ್ ಪ್ಲ್ಯಾಂಟ್, ಸುಮಾರು 20 ಲಕ್ಷ ರೂ ಖರ್ಚಾಗುವ ಕಿಡ್ನಿ ಟ್ರ್ಯಾನ್ಸ್ ಪ್ಲ್ಯಾಂಟ್ , ಮುಂತಾದ ಶಸ್ತ್ರಚಿಕಿತ್ಸೆಗಳು ಮತ್ತು ಕ್ಯಾನ್ಸರ್ ಚಿಕಿತ್ಸೆಗಳನ್ನು ದುರ್ಬಲ ಮಕ್ಕಳಿಗೆ ಯಾವುದೇ ಶುಲ್ಕ ವಿಧಿಸದೆ ಒದಗಿಸುತ್ತದೆ. ಕೇರಳದ ಆಸ್ಟರ್ ಮಿಮ್ಸ್ ನ 20ನೇ ವಾರ್ಷಿಕೋತ್ಸವದ ಅಂಗವಾಗಿ, ಆಸ್ಟರ್ ಮಿಮ್ಸ್ ಅಧ್ಯಕ್ಷ ಪದ್ಮಶ್ರೀ ಡಾ.ಅಸಾದ್ ಮೂಪ್ಪೆನ್ ಅವರ ಸಲಹೆಗೆ ಅನುಗುಣವಾಗಿ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಉಚಿತ ಶಸ್ತ್ರಚಿಕಿತ್ಸೆಗಳು ಹಾಗೂ ಚಿಕಿತ್ಸೆಗಳಿಗೆ ಹಣವನ್ನು ಆಸ್ಟರ್ ಡಿಎಂ ಫೌಂಡೇಶನ್, ಮಿಮ್ಸ್ ಚಾರಿಟಬಲ್ ಟ್ರಸ್ಟ್ ಹಾಗೂ ಇತರ ಸ್ವಯಂಸೇವಾ ಸಂಸ್ಥೆಗಳು ಜಂಟಿಯಾಗಿ ಸಂಗ್ರಹಿಸಿವೆ.