Friday, November 22, 2024
ಪುತ್ತೂರು

ಸಂತ ಫಿಲೋಮಿನಾ ಕಾಲೇಜಿನಲ್ಲಿ ಐಬಿಪಿಸ್ ಪರೀಕ್ಷೆಗಳ ತರಬೇತಿಗೆ ಚಾಲನೆ, ಪೂರ್ವತಯಾರಿಯೇ ಭವಿಷ್ಯದ ದಿಕ್ಕನ್ನು ನಿರ್ಧರಿಸುವ ಮೂಲ ಮಂತ್ರ ; ಗಣೇಶ್ ಹೆಬ್ಬಾರ್-ಕಹಳೆ ನ್ಯೂಸ್

ಪುತ್ತೂರು : ಕ್ರಮಬದ್ಧ ಪೂರ್ವತಯಾರಿಯೇ ಭವಿಷ್ಯದ ದಿಕ್ಕನ್ನು ನಿರ್ಧರಿಸುವ ಮೂಲ ಮಂತ್ರ. ನಾವು ಕೈಗೊಳ್ಳುವ ಎಲ್ಲಾರೀತಿಯ ಕೆಲಸಗಳಲ್ಲಿ ಶಿಸ್ತು, ಬದ್ಧತೆ, ಆತ್ಮವಿಶ್ವಾಸ, ತಾಳ್ಮೆ, ಧನಾತ್ಮಕ ಚಿಂತನೆ ಮೊದಲಾದ ಅಂಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಟೈಮ್, ಮಂಗಳೂರು ಇದರ ನಿರ್ದೇಶಕ ಗಣೇಶ್ ಹೆಬ್ಬಾರ್ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಂತ ಫಿಲೋಮಿನಾ ಕಾಲೇಜಿನ ವ್ಯವಹಾರ ಆಡಳಿತ ವಿಭಾಗ ಹಾಗೂ ತರಬೇತಿ ಮತ್ತು ನೇಮಕಾತಿ ಘಟಕವು ಟೈಮ್, ಮಂಗಳೂರು ಇದರ ಸಹಯೋಗದಲ್ಲಿ ಕಾಲೇಜಿನ ಅಂತಿಮ ತರಗತಿಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ಐಬಿಪಿಸ್ ಪರೀಕ್ಷೆಗಳ ತರಬೇತಿ ಕಾರ್ಯಕ್ರಮಕ್ಕೆ ಮಾರ್ಚ್20 ರಂದು ಸ್ಪಂದನ ಸಭಾಭವನದಲ್ಲಿ ಚಾಲನೆ ನೀಡಿ, ಮಾತನಾಡಿದರು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಮ್ಮಿಂದೊಮ್ಮೆಲೇ ಯಶಸ್ಸು ನಮ್ಮದಾಗಲು ಸಾಧ್ಯವಿಲ್ಲ. ಸತತ ಪ್ರಯತ್ನ ಪಡುವಗುಣ ನಮ್ಮಲ್ಲಿರಬೇಕು. ಪರೀಕ್ಷೆಯ ಕುರಿತು ಭಯ ಬೇಡ. ಪರೀಕ್ಷೆಗಳನ್ನು ಎದುರಿಸುವ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಬಗ್ಗೆ ಸಾಕಷ್ಟು ಜ್ಞಾನವನ್ನು ಹೊಂದಿರಬೇಕು. ಕ್ರಮಬದ್ಧ ತಯಾರಿಯು ಮುಂದೊಂದು ದಿನ ಯಶಸ್ಸನ್ನು ಖಂಡಿತವಾಗಿಯೂ ನೀಡುತ್ತದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಮಾತನಾಡಿ, ನಮ್ಮ ಜೀವನವು ಸುಖಮಯವಾಗಿರಬೇಕು. ನಾವು ಕೈಗೊಳ್ಳುವ ಚಟುವಟಿಕೆಗಳು ನಮ್ಮ ಆರೋಗ್ಯ, ನೆಮ್ಮದಿ, ಸುಖ ಸಂತೋಷವನ್ನು ನಿರ್ಧರಿಸುತ್ತವೆ. ಭವಿಷ್ಯದ ಸಾಧನೆಗಳಿಗೆ ವ್ಯವಸ್ಥಿತ ಯೋಜನೆಗಳನ್ನು ಹಮ್ಮಿಕೊಳ್ಳಬೇಕು. ಸಮಯದ ಸದುಪಯೋಗ ಬಹಳ ಮುಖ್ಯ. ನಮ್ಮ ಚಿಂತನೆಗಳಲ್ಲಿ ನವೀನತೆಯಿರಬೇಕು. ಭವಿಷ್ಯದಲ್ಲಿ ಎದುರಾಗಬಹುದಾದ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಲು ಸಾಕಷ್ಟು ಪೂರ್ವ ತಯಾರಿ ಕೈಗೊಳ್ಳಿ ಎಂದರು. ಕಾಲೇಜಿನ ವ್ಯವಹಾರ ಆಡಳಿತ ವಿಭಾಗ ಮುಖ್ಯಸ್ಥ ಹಾಗೂ ತರಬೇತಿ ಮತ್ತು ನೇಮಕಾತಿ ಘಟಕದ ಸಂಯೋಜಕ ಡಾ. ರಾಧಾಕೃಷ್ಣಗೌಡ ಸ್ವಾಗತಿಸಿ, ಸಹಾಯಕ ಪ್ರಾಧ್ಯಾಪಕ ಅಭಿಷೇಕ ಸುವರ್ಣ ವಂದಿಸಿದರು. ಸಹಾಯಕ ಪ್ರಾಧ್ಯಾಪಕರಾದ ಪುಷ್ಪಎನ್ ಮತ್ತು ಹರ್ಷಿತ್‍ಆರ್ ಸಹಕರಿಸಿದರು. ಸಹಾಯಕ ಪ್ರಾಧ್ಯಾಪಕ ಪ್ರಶಾಂತ್‍ರೈ ಕಾರ್ಯಕ್ರಮ ನಿರೂಪಿಸಿದರು.