ಬಾಗೇಪಲ್ಲಿ : ಪಟ್ಟಣದ ಪುರಸಭೆ ಸಾಮಾಜಿಕ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಎ.ನಂಜುಂಡಪ್ಪ ಶನಿವಾರ ಅವಿರೋಧವಾಗಿ ಆಯ್ಕೆಯಾದರು.
ಶನಿವಾರ ನಡೆದ ಸ್ಥಾಯಿ ಸಮಿತಿ ಚುನಾವಣೆಗೆ 7 ನೇ ವಾರ್ಡಿನ ಸದಸ್ಯರಾದ ಎ.ನಂಜುಂಡಪ್ಪ ಬಿಟ್ಟರೆ ಬೇರೆ ಯಾರೂ ನಾಮಪತ್ರ ಸಲ್ಲಿಸಲಿಲ್ಲ. ಹೀಗಾಗಿ ಎ.ನಂಜುಂಡಪ್ಪ ಅವಿರೋಧವಾಗಿ ಆಯ್ಕೆಯಾದರು.
ಆಯ್ಕೆಯ ಬಳಿಕ ಬಾಗೇಪಲ್ಲಿ ತಾಲೂಕು ಜನಪ್ರಿಯ ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಆಗಮಿಸಿ ಸ್ಥಾಯಿ ಸಮಿತಿ ನೂತನ ಅಧ್ಯಕ್ಷೆ ಎ.ನಂಜುಂಡಪ್ಪ ಮತ್ತು ಅವಿರೋಧ ಆಯ್ಕೆಗೆ ಸಹಕರಿಸಿದ ಎಲ್ಲಾ ಸದಸ್ಯರಿಗು ಅಭಿನಂದಿಸಿದರು.
ನಂತರ ಮಾತನಾಡಿದ ಅವರು ಮುಂದಿನ ದಿನದಲ್ಲಿ ಎಲ್ಲಾ ಸದಸ್ಯರು ಪಕ್ಷಭೇದ ಮರೆತು ಪುರಸಭೆ ಎಲ್ಲಾ ವಾರ್ಡ್ಗಳ ಅಭಿವೃದ್ಧಿಗೆ ಕೈ ಜೋಡಿಸೋಣ. ಬಾಗೇಪಲ್ಲಿ ಪುರಸಭೆ ಈ ರಾಜ್ಯದಲ್ಲಿ ಮಾದರಿಯಾಗಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಪಂಕಜಾರೆಡ್ಡಿ, ಪುರಸಭೆ ಉಪಾಧ್ಯಕ್ಷ ಎ.ಶ್ರೀನಿವಾಸ್ , ಸದಸ್ಯರಾದ ಕೆ.ಎ.ಶ್ರೀನಾಥ್, ನಾಗರತ್ನಮ್ಮ, ರೇಷ್ಮಾ ಬಾನು, ಸುಜಾತ.ಎಸ್, ಬಿ.ಎ.ನರಸಿಂಹಮೂರ್ತಿ, ರಮೇಶ್ ಬಾಬು, ಎಸ್.ನೂರುಲ್ಲಾ, ಪಿ.ವಿ.ಮಧುಸೂದನ ರೆಡ್ಡಿ , ನಿಸಾರ್ ಅಹ್ಮದ್, ಮಾಜಿ ಪುರಸಭೆ ಅದ್ಯಕ್ಷ ಬಿ.ಆರ್.ನರಸಿಂಹ ನಾಯ್ಡು, ಕೆ.ಡಿ.ಪಿ.ಸದಸ್ಯ ಅಮರನಾಥ ರೆಡ್ಡಿ ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.